ನಾಟಕ, ಸಿನಿಮಾ ಹೆಚ್ಚು ಪ್ರಭಾವ ಬೀರುವ ಮಾಧ್ಯಮ

KannadaprabhaNewsNetwork |  
Published : Sep 26, 2025, 01:00 AM IST
ಪೊಟೋ ಪೈಲ್ ನೇಮ್ ೨೫ಎಸ್‌ಜಿವಿ೨  ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪರದೆ ಸಿನೆಮಾ ವೇದಿಕೆ ಮೂಲಕ ಗುರುವಾರದಿಂದ ಎರಡು ದಿನಗಳ ಕಾಲ ಆಯೋಜಿಸಲಾದ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮ ಕುಲಪತಿಗಳಾದ ಪ್ರೊ.ಟಿ ಎಂ ಭಾಸ್ಕರ್ ಉದ್ಘಾಟಿಸಿ   ಮಾತನಾಡಿದರು | Kannada Prabha

ಸಾರಾಂಶ

ದೃಶ್ಯ ಮಾಧ್ಯಮ, ನಾಟಕ, ಸಿನಿಮಾ ಇವು ಹತ್ತಾರು ಪುಸ್ತಕ ಓದುವ ಜ್ಞಾನವನ್ನು ಒಂದೇ ವೇದಿಕೆಯಲ್ಲಿ ತೆರೆದಿಡುತ್ತವೆ. ಆದ್ದರಿಂದ ನೋಡುಗರಲ್ಲಿ ಹೆಚ್ಚು ಪ್ರಭಾವ ಬೀರುವ ಮಾಧ್ಯಮಗಳಾಗಿವೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಹೇಳಿದರು.

ಶಿಗ್ಗಾಂವಿ: ದೃಶ್ಯ ಮಾಧ್ಯಮ, ನಾಟಕ, ಸಿನಿಮಾ ಇವು ಹತ್ತಾರು ಪುಸ್ತಕ ಓದುವ ಜ್ಞಾನವನ್ನು ಒಂದೇ ವೇದಿಕೆಯಲ್ಲಿ ತೆರೆದಿಡುತ್ತವೆ. ಆದ್ದರಿಂದ ನೋಡುಗರಲ್ಲಿ ಹೆಚ್ಚು ಪ್ರಭಾವ ಬೀರುವ ಮಾಧ್ಯಮಗಳಾಗಿವೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಹೇಳಿದರು.ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪರದೆ ಸಿನಿಮಾ ವೇದಿಕೆ ಮೂಲಕ ಗುರುವಾರದಿಂದ ಎರಡು ದಿನಗಳ ಕಾಲ ಆಯೋಜಿಸಲಾದ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಾಸ್ತವ ಜಗತ್ತಿನಲ್ಲಿ ಪ್ರಸ್ತುತ ಹಲವಾರು ಸವಾಲುಗಳ ಕುರಿತು ಪರದೆ ಸಿನಿಮಾಗಳು ತೋರಿಸುತ್ತಿವೆ ಎಂದರು.ಕುಲಸಚಿವರಾದ ಪ್ರೊ.ಸಿ.ಟಿ. ಗುರುಪ್ರಸಾದ್ ಅವರು ಮಾತನಾಡಿ, ಪರದೆ ಸಿನಿಮಾ ಎಂಬ ಈ ವಿಶೇಷ ಕಾರ್ಯಕ್ರಮ ನಮ್ಮ ವಿದ್ಯಾರ್ಥಿಗಳಿಂದ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವುದು ಅತ್ಯಂತ ಕ್ರಿಯಾಶೀಲ ಚಟುವಟಿಕೆಯಾಗಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ಮಾಧ್ಯಮ ಸಾಹಿತ್ಯ, ದೃಶ್ಯ ವಿಶ್ಲೇಷಣಾ ಕೌಶಲ್ಯ ಹಾಗೂ ಸಮಾಜಮುಖಿ ಚಿಂತನೆ ಬೆಳೆಸುವಲ್ಲಿ ಪ್ರಭಾವ ಬೀರುತ್ತದೆ. ಸಿನಿಮಾ ಮಾಧ್ಯಮ ಒಳಿತು ಕೆಡುಕು ವಿಷಯಗಳನ್ನು ಒಳಗೊಂಡಿರುತ್ತದೆ. ಹೀಗೆ ವಿವಿಧ ರೀತಿಯ ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮಗಳು ಎಲ್ಲಾ ವಿಭಾಗದಿಂದ ರೂಪಗೊಳ್ಳಬೇಕು. ಆ ಮೂಲಕ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆ ಗಳು ಜನಸಾಮಾನ್ಯರಿಗೆ ಜಾನಪದ ಆಸಕ್ತರಿಗೆ ಮುಟ್ಟುವುದರ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರವಾಗುತ್ತದೆ ಎಂದರು.ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ವೆಂಕನಗೌಡ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಲೆ, ಸಾಹಿತ್ಯ ಸಿನಿಮಾ ಹೀಗೆ ದೃಶ್ಯ ಮಾಧ್ಯಮ ಸಮಾಜದ ಮೇಲೆ ಅತ್ಯಂತ ಪರಿಣಾಮ ಬೀರಿದ್ದವು. ಗಾಂಧೀಜಿ ಅವರಿಗೆ ಸತ್ಯದ ಹಾದಿಯಲ್ಲಿ ನಡೆಯಲು ಸತ್ಯ ಹರಿಶ್ಚಂದ್ರ ನಾಟಕ ಅತ್ಯಂತ ಪ್ರೇರಣಾ ದಾಯಕವಾಗಿತ್ತು ಎಂದರು.ಸಾಹಿತಿಗಳಾದ ಎಸ್.ಎಲ್. ಭೈರಪ್ಪನವರ ''''''''ಮತದಾನ'''''''' ಎಂಬ ಕಾದಂಬರಿಯಾಧಾರಿತ ಸಿನಿಮಾ ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ''''''''ತಬರನ ಕಥೆ'''''''' ಎಂಬ ಸಿನೆಮಾ ಪ್ರದರ್ಶನ ಮಾಡಲಾಯಿತು. ಮತದಾನ ಎಂಬ ಸಿನಿಮಾ ಕುರಿತು ಹಿರಿಯ ಸಂಶೋಧನಾಧಿಕಾರಿ ಡಾ.ಕೆ. ಪ್ರೇಮಕುಮಾರ ಅವರು, ತಬರನ ಕಥೆ ಸಿನಿಮಾ ಕುರಿತು ಕುಲಪತಿಗಳಾದ ಪ್ರೊ.ಟಿ.ಎಂ. ಭಾಸ್ಕರ್ ಅವರು ಮಾತನಾಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.ಈ ಸಂದರ್ಭದಲ್ಲಿ ಮೌಲ್ಯಮಾಪನ ಕುಲಸಚಿವ ಡಾ. ಶಿವಶಂಕರ್ ಕೆ., ಜನಪದ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಗಿರೇಗೌಡ ಅರಳಿಹಳ್ಳಿ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಶಿವಾನಂದ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ರಂಜಿತಾ ಮುಚ್ಚಟ್ಟಿ ಸ್ವಾಗತಿಸಿದರು. ಸೋಮಶೇಖರ ಲಮಾಣಿ ವಂದಿಸಿದರು. ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಪಾಲ್ಗೊಂಡಿದ್ದರು.

PREV

Recommended Stories

ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ
ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ