ನಾಟಕ ಜನರಿಗೆ ಸುಲಭವಾಗಿ ತಲುಪುವ ಪ್ರಬಲ ಮಾಧ್ಯಮ: ಡಾ.ಮಂಜುನಾಥ ಪಾಟೀಲ

KannadaprabhaNewsNetwork |  
Published : Jul 24, 2024, 12:24 AM IST
ಸವದತ್ತಿಯ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಆಧುನಿಕ ಕನ್ನಡ ರಂಗಭೂಮಿಯ ಮೇಲೆ ಪ್ರಾಚೀನ ಕಾವ್ಯಗಳ ಪ್ರಭಾವ ಎನ್ನುವ ವಿಷಯದ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಮಂಜುನಾಥ ಪಾಟೀಲರನ್ನು ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

ಸವದತ್ತಿಯ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಆಧುನಿಕ ಕನ್ನಡ ರಂಗಭೂಮಿಯ ಮೇಲೆ ಪ್ರಾಚೀನ ಕಾವ್ಯಗಳ ಪ್ರಭಾವ ಎನ್ನುವ ವಿಷಯದ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಮಂಜುನಾಥ ಪಾಟೀಲ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ನಾಟಕ ಜನರಿಗೆ ಸುಲಭವಾಗಿ ತಲುಪುವ ಒಂದು ಪ್ರಬಲ ಮಾಧ್ಯಮವಾಗಿದ್ದು, ನಾಟಕ ರಂಗವು ನಮ್ಮ ಜ್ಞಾಪಕ ಶಕ್ತಿ ವೃದ್ಧಿಸುವುದರ ಜೊತೆಗೆ ಬದುಕಿನ ಸವಾಲು ಎದುರಿಸುವ ಸಾಮರ್ಥ್ಯ ಕಲಿಸುತ್ತದೆ ಎಂದು ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಡಾ.ಮಂಜುನಾಥ ಪಾಟೀಲ ಹೇಳಿದರು.

ಪಟ್ಟಣದ ಕೆ.ಎಲ್.ಇ. ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಸಹಯೋಗದಲ್ಲಿ ಆಧುನಿಕ ಕನ್ನಡ ರಂಗಭೂಮಿಯ ಮೇಲೆ ಪ್ರಾಚೀನ ಕಾವ್ಯಗಳ ಪ್ರಭಾವ ವಿಷಯದ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಂಗಭೂಮಿಯು ನಮ್ಮ ಬದುಕಿನ ಓರೆಕೋರೆಗಳನ್ನು ಅರಿವಿಗೆ ತರುವ ಒಂದು ಉತ್ತಮ ಮಾಧ್ಯಮ. ಇಲ್ಲಿ ಸುಖ-ದುಃಖ, ಕೋಪ, ಮುಂತಾದ ರಸಗಳನ್ನು ಅಭಿವ್ಯಕ್ತಿಸುವ ಮೂಲಕ ಮನರಂಜನೆ ಒದಗಿಸುತ್ತ ಸಮಾಜಕ್ಕೆ ನೀತಿಯುಕ್ತ ಸಂದೇಶ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಗ್ರೀಕ್ ರಂಗಭೂಮಿ ಪ್ರಪಂಚದ ಪ್ರಾಚೀನ ರಂಗಭೂಮಿ ಎಂದು ಹೇಳಲಾಗುತ್ತಿದೆ. ಇಲ್ಲಿ ಚಿತ್ರಿಸಿರುವ ಚಿತ್ರಗಳು ಮನುಷ್ಯನ ಭಾವನೆಗಳನ್ನು ಅಭಿವ್ಯಕ್ತಿಸುವ ಕಲೆಯಾಗಿದ್ದವು. ರಂಗಭೂಮಿಯ ಮೇಲೆ ಅಭಿನಯಿಸುವ ಪಾತ್ರಗಳು ಪ್ರೇಕ್ಷಕನ ಅಂತರಂಗಕ್ಕೆ ಇಳಿದು ಅವನಲ್ಲಿ ಧನಾತ್ಮಕ ಬದಲಾವಣೆ ತರಲು ಸಾಧ್ಯವಾಗಿಸಿದೆ. ಇದಕ್ಕಾಗಿಯೇ ಈ ಹಿಂದೆ ಜನರು ನಾಟಕದ ಪ್ರದರ್ಶನಗಳಿಗೆ ಕಿಕ್ಕಿರಿದು ಸೇರುತ್ತಿದ್ದರು ಎಂದು ಗತ ಇತಿಹಾಸ ತೆರೆದಿಟ್ಟರು.

ರಂಗ ಆರಾಧನಾ ಸಂಘಟನೆಯ ಝಾಕೀರ್ ನದಾಫ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಎನ್.ಆರ್. ಸವತಿಕರ, ಪ್ರೊ.ಕೆ. ರಾಮರೆಡ್ಡಿ, ಡಾ.ಅರುಂಧತಿ ಬದಾಮಿ, ಶ್ರೀನಿವಾಸ ಗದಗ ಹಾಗೂ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಧು ಶಿರಕೋಳ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಮೇಶ ಗುಡಗಾರ ಸ್ವಾಗತಿಸಿದರು. ಸವಿತಾ ಗೋಸಲ ಪರಿಚಯಿಸಿದರು. ಮಮ್ತಾಜ್ ಟೆಕ್ಕೇದ ನಿರೂಪಿಸಿದರು, ಬಸವರಾಜ ಮಡಿವಾಳರ ವಂದಿಸಿದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್