ಕನ್ನಡಪ್ರಭ ವಾರ್ತೆ ಯಾದಗಿರಿ
ಸಮೀಪದ ಅಬ್ಬೆತುಮಕೂರಿನಲ್ಲಿ ನಡೆದ ಜಾತ್ರಾ ಮಹೋತ್ಸವದ 2ನೇ ದಿನದ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಂಗ ಭೂಮಿಯ ಮೇಲೆ ಪ್ರದರ್ಶನಗೊಳ್ಳುವ ನಾಟಕಗಳು ಉತ್ತಮವಾದ ವಿಚಾರಗಳಿಂದ ಕೂಡಿರುತ್ತವೆ. ನಾಟಕಗಳಲ್ಲಿನ ಒಳ್ಳೆಯ ಅಂಶ ಅಳವಡಿಸಿಕೊಂಡರೆ ಜೀವನ ಉದ್ಧಾರವಾಗಲು ಸಾಧ್ಯವಾಗುತ್ತದೆ ಎಂದರು.ಖ್ಯಾತ ವೈದ್ಯ ಡಾ.ವೀರೇಶ ಜಾಕಾ ಮಾತನಾಡಿ, ಅಬ್ಬೆತುಮಕೂರಿನ ಶ್ರೀವಿಶ್ವರಾಧ್ಯರ ಜಾತ್ರೆ ವರ್ಷದಿಂದ ವರ್ಷಕ್ಕೆ ಆಗಮಿಸುವ ಜನರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಲ್ಲಿಗೆ ಬರುವುದರಿಂದ ಮನೋಕಾಮನೆಗಳು ಈಡೇರುತ್ತವೆ ಎಂಬ ಭಾವನೆಯಿಂದ ಜನ ಸಾಗರ ರೂಪದಲ್ಲಿ ಆಗಮಿಸುತ್ತದೆ ಎಂದು ಹೇಳಿದರು.
ಖ್ಯಾತ ವೈದ್ಯ ಡಾ. ಶರಣಬಸವ ಎಲ್ಹೇರಿ ಮಾತನಾಡಿ, ವಿಶ್ವರಾಧ್ಯರ ಕ್ಷೇತ್ರ ಎಂದರೆ ಅದು ಭಕ್ತಿ ಭಾವ ಮೂಡಿಸುವ ಶ್ರದ್ಧಾ ಕೇಂದ್ರವೆಂದು ಭಾವಿಸುವ ಜನ ಕರ್ನಾಟಕ ಮಾತ್ರವಲ್ಲ ಆಂಧ್ರ, ತೆಲಂಗಾಣ, ಮಹಾರಾಷ್ಟ್ರಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದು ಪುನೀತರಾಗುತ್ತಾರೆ ಎಂದರು.
ವೇದಿಕೆ ಮೇಲೆ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮೀಜಿ, ಮಹಾದೇವರೆಡ್ಡಿ ಗೌಡರೆಡ್ಡಿ ಬಿಳ್ಹಾರ, ಡಾ. ಸುಭಾಶ್ಚಂದ್ರ ಕೌಲಗಿ ಡಾ. ಶ್ರುತಿ ಎಲ್ಹೇರಿ, ಡಾ. ವಿದ್ಯಾ ಬಿಳ್ಹಾರ ಇದ್ದರು.