ಸ್ಥಳೀಯರ ಸಹಕಾರದಿಂದ ನಯಂಪಳ್ಳಿಯ 50 ಮನೆಗಳಿಗೆ ನೀರು ಸಂಪರ್ಕ

KannadaprabhaNewsNetwork |  
Published : Apr 02, 2026, 02:30 AM IST
01ನಯಂಪಳ್ಳಿ | Kannada Prabha

ಸಾರಾಂಶ

ಉಡುಪಿ ನಗರಸಭೆಯ ಗೋಪಾಲಪುರ ವಾರ್ಡಿನ ನಯಂಪಳ್ಳಿ ಪ್ರದೇಶದಲ್ಲಿ 4 ದಶಕಗಳಿಂದ ಕುಡಿಯುವ ನೀರಿನ ಸಂಪರ್ಕ ಇಲ್ಲದೇ ಸಮಸ್ಯೆ ಎದುರಿಸುತ್ತಿದ್ದ ಕುಟುಂಬಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ನಗರಸಭೆಯ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಮೂಲಕ ಹಲವು ದಶಕಗಳ ಕನಸು ಸಾಕಾರಗೊಂಡಿದೆ

ಉಡುಪಿ: ಉಡುಪಿ ನಗರಸಭೆಯ ಗೋಪಾಲಪುರ ವಾರ್ಡಿನ ನಯಂಪಳ್ಳಿ ಪ್ರದೇಶದಲ್ಲಿ 4 ದಶಕಗಳಿಂದ ಕುಡಿಯುವ ನೀರಿನ ಸಂಪರ್ಕ ಇಲ್ಲದೇ ಸಮಸ್ಯೆ ಎದುರಿಸುತ್ತಿದ್ದ ಕುಟುಂಬಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ನಗರಸಭೆಯ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಮೂಲಕ ಹಲವು ದಶಕಗಳ ಕನಸು ಸಾಕಾರಗೊಂಡಿದೆ.ನೀರಿನ ಸಂಪರ್ಕವನ್ನು ಉದ್ಘಾಟಿಸಿದ ಶಾಸಕರು, ಈ ಭಾಗದ ಸುಮಾರು 50 ಮನೆಗಳಿಗೆ ಹಲವು ದಶಕಗಳಿಂದ ಕುಡಿಯುವ ನೀರು ಸಂಪರ್ಕ ಇಲ್ಲದೆ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ನನ್ನ ಮನವಿಯ ಮೇರೆಗೆ ಸ್ಥಳೀಯ ಮುಖಂಡರಾದ ಉಮೇಶ್ ಶೆಟ್ಟಿ ಹಾಗೂ ಸುದೀಶ್ ಕುಮಾರ್ ಅವರು ತಮ್ಮ ಖಾಸಗಿ ಜಮೀನಿನಲ್ಲಿ ಪೈಪ್ ಲೈನ್ ಅಳವಡಿಸಲು ಅವಕಾಶ ನೀಡಿ ಮನೆಗಳಿಗೆ ನೀರಿನ ಸಂಪರ್ಕ ನೀಡಲು ಸಹಕಾರ ನೀಡಿದ್ದಾರೆ. ಇದಕ್ಕೆ ಉಡುಪಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಹರೀಶ್ ಶೆಟ್ಟಿ, ಗಿರಿಧರ ಆಚಾರ್ಯ, ಮಂಜುಳಾ ನಾಯಕ್ ಅವರು ವಿಶೇಷ ಮುತುವರ್ಜಿ ವಹಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯರಾದ ದಿನೇಶ್ ಪೈ, ಚಿನ್ಮಯ ಮೂರ್ತಿ, ಮಂಜಪ್ಪ ಹಾಗೂ ಸ್ಥಳೀಯ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟೋಲ್ ಶುಲ್ಕ ಏರಿಕೆ: ಸಾರ್ವಜನಿಕರ ತೀವ್ರ ವಿರೋಧ
ನಾಳೆಯಿಂದ ಇಂದ್ರಾಳಿ ಶ್ರೀ ಮುಖ್ಯಪ್ರಾಣ - ನಾಗದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ