ಹೋಟೆಲಗಳಲ್ಲಿ ಮದ್ಯ ಕುಡಿಯುವ ಅಡ್ಡಾ

KannadaprabhaNewsNetwork | Published : Apr 9, 2025 12:46 AM

ಸಾರಾಂಶ

ಸಾಂಸ್ಕೃತಿಕ ನಗರಿ ಐತಿಹಾಸಿಕ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ನಿಪ್ಪಾಣಿ ನಗರವು ಸದ್ಯ ಅಕ್ರಮದಂದೆಗಳ ತಾಣವಾಗಿ ಮಾರ್ಪಾಡುಗೊಳ್ಳುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ಕಾರಣ ಹುಡುಕುತ್ತ ಹೋದರೇ ಪೊಲೀಸ್ ಇಲಾಖೆಯ ಭಯ ಕಡಿಮೆ ಆಗಿ, ಪುಡಿ ರೌಡಿ ಹಾಗೂ ಗುಂಡಾಗಳ ಸದ್ದುಗಳೇ ಈಗ ನಗರದಲ್ಲಿ ಕೇಳಿ ಬರುತ್ತಿದೆ ಎಂಬ ಗುಸು ಗುಸು ಮಾತುಗಳು ನಗರದ ತುಂಬೆಲ್ಲ ನಡೆಯುತ್ತಿದೆ.

ಅಶ್ವಿನಕುಮಾರ ಚ.ಅಮ್ಮಣಗಿ

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ಸಾಂಸ್ಕೃತಿಕ ನಗರಿ ಐತಿಹಾಸಿಕ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ನಿಪ್ಪಾಣಿ ನಗರವು ಸದ್ಯ ಅಕ್ರಮದಂದೆಗಳ ತಾಣವಾಗಿ ಮಾರ್ಪಾಡುಗೊಳ್ಳುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ಕಾರಣ ಹುಡುಕುತ್ತ ಹೋದರೇ ಪೊಲೀಸ್ ಇಲಾಖೆಯ ಭಯ ಕಡಿಮೆ ಆಗಿ, ಪುಡಿ ರೌಡಿ ಹಾಗೂ ಗುಂಡಾಗಳ ಸದ್ದುಗಳೇ ಈಗ ನಗರದಲ್ಲಿ ಕೇಳಿ ಬರುತ್ತಿದೆ ಎಂಬ ಗುಸು ಗುಸು ಮಾತುಗಳು ನಗರದ ತುಂಬೆಲ್ಲ ನಡೆಯುತ್ತಿದೆ.

ಬಾರ್ ಆ್ಯಂಡ್‌ ರೆಸ್ಟೋರೆಂಟ್ ತೆಗೆಯಲು ಬಂಡವಾಳ ಜಾಸ್ತಿ ಹಾಗೂ ಹೆಚ್ಚಿನ ಹಣ. ಹೀಗಾಗಿ ನಗರದಲ್ಲಿ ಹಲವಾರು ಜನ ಫ್ಯಾಮಿಲಿ ರೆಸ್ಟೋರೆಂಟ್ ಎಂದು ಹೋಟೆಲ್ ತೆಗೆದು, ಯಾವುದೇ ಕಾನೂನು ರೀತಿ ಅನುಮತಿ ಇಲ್ಲದೆ ಕಾನೂನು ಉಲ್ಲಂಘನೆ ಮಾಡಿ ರಾಜಾರೋಷವಾಗಿ ಬಾರ್ ಆ್ಯಂಡ್‌ ರೆಸ್ಟೋರೆಂಟ್ ತರಹ ಸಾರಾಯಿ ಕುಡಿಯುವ ಅಡ್ಡೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಸಿಪಿಐ ಕಚೇರಿ ಕೂಗಳತೆ ದೂರದಲ್ಲಿ:

ಇನ್ನು ಆಘಾತಕಾರಿ ಸಂಗತಿ ಎಂದರೆ ಇಷ್ಟೆಲ್ಲ ನಡೆಯುತ್ತಿರುವುದು ನಗರದ ಸಿಪಿಐ ಕಚೇರಿಯ ಕೇವಲ ಕೂಗಳತೆ ದೂರದಲ್ಲಿ ಮಾತ್ರ ಎಂಬುದು ವಿಷಾದನೀಯ ಸಂಗತಿ ಅದು ಓಪನ್ ಆಗಿ ಯಾವ ಮುಚ್ಚು ಮರೆ ಇಲ್ಲದೆಯೇ ನಡೆಯುತ್ತಿದೆ. ಇನ್ನು ಈ ಅಡ್ಡಾ (ಹೋಟೆಲ್) ನಡೆಸುವ ಮಾಲೀಕರಿಗೆ ಪೊಲೀಸ್ ಇಲಾಖೆಯ ಭಯವು ಇಲ್ಲ. ಯಾವ ಪೊಲೀಸ್ ಅಧಿಕಾರಿ ನಮಗೇನು ಮಾಡುವುದಿಲ್ಲ, ನಾವು ಮಾಡಬೇಕಾದನ್ನು ಮಾಡುತ್ತೇವೆ ಎಂಬ ಮಾತುಗಳನ್ನು ಕೂಡ ಈ ಅಡ್ಡಾ ಮಾಲೀಕರು ಹೇಳುತ್ತಾರೆ. ಈ ಮಾತಿನ ಮರ್ಮ ತಿಳಿಯದೆ ಇರಬಹುದು. ಆದರೆ, ಇದು ಸತ್ಯಕ್ಕೆ ಎಷ್ಟು ಹತ್ತಿರ ಎಷ್ಟು ದೂರ ಎಂಬುವುದು ಗೊತ್ತಿಲ್ಲ. ಪುಡಿ ರೌಡಿ ಗುಂಡಾಗಳ ಸಾಥ:

ಇನ್ನು ಈ ಅಡ್ಡಾ (ಹೋಟೆಲ್ ) ಮಾಲೀಕರು ತಮಗೆ ಬೇಕಾದ ಕೆಲವು ಸೊ ಕಾಲ್ಡ್ ಗುಂಡಾ ಹಾಗೂ ಪುಡಿ ರೌಡಿಗಳನ್ನು ಸಾಕಿ ಕೊಂಡಿದ್ದು, ಸಾಮಾನ್ಯ ಜನರ ಮೇಲೆ ತಮ್ಮ ದರ್ಪ ತೊರಿಸುತ್ತಿರುವುದು ಸರ್ವೆಸಾಮಾನ್ಯ ಎನ್ನುವಂತಾಗಿದೆ.ಮಹಿಳೆಯರಿಗೂ ಮುಜುಗರ:

ಇನ್ನು ಫ್ಯಾಮಿಲಿ ರೆಸ್ಟೋರೆಂಟ್ ಅಂತಾ ಬೋರ್ಡ್ ಹಾಕಿರುವುದರಿಂದ ಹಲವರು ಕುಟುಂಬ ಸಮೇತ ತೆರಳಿದಾಗ ಒಳಗಡೆ ಮದ್ಯ ಕುಡಿಯುವರ ಸಂಖ್ಯೆಯೇ ಜಾಸ್ತಿ ಇರುವುದರಿಂದ ಮಹಿಳೆಯರಿಗೂ ಕೂಡ ಇದರಿಂದ ಮುಜುಗರ ಉಂಟಾಗುವುದು ಸುಳ್ಳಲ್ಲ. ಇಷ್ಟೆಲ್ಲ ಅವ್ಯಾಹತವಾಗಿ ರೀತಿ ನಡೆಯುತ್ತಿದ್ದರೂ ಏಕೆ ಅಧಿಕಾರಿಗಳು ಇಂತಹವರ ಮೇಲೆ ಕ್ರಮ ಕೈಗೊಂಡು ಹೋಟೆಲ್ ಕಮ್ ಸಾರಾಯಿ ಕುಡಿಯುವ ಅಡ್ಡಾಗಳನ್ನು ಮುಚ್ಚಿಸುತ್ತಿಲ್ಲ? ಇವನ್ನೆಲ್ಲ ಮುಚ್ಚಿಸಲು ಅಧಿಕಾರಿಗಳಿಗೆ ಯಾರದಾದರೂ ಅನುಮತಿ ಬೇಕಾ?

ಇವರ ಮೇಲೆ ರಾಜಕಾರಣಿಗಳ ವರದ ಹಸ್ತವಿದೆಯಾ?, ಯಾವುದಾದರೂ ಅಧಿಕಾರಿಗಳ ಆಶೀರ್ವಾದವಿದೆಯಾ? ಎಂಬುವುದು ಜನಾಕ್ರೋಶದ ಪ್ರಶ್ನೆಗಳಾಗಿವೆ.ನಗರದಲ್ಲಿ ಹಲವು ಹೋಟೆಲ್‌ಗಳಲ್ಲಿ ಇದೆ ರೀತಿಯಲ್ಲಿ ಈಗ ಬಾರ್ ಆ್ಯಂಡ್‌ ರೆಸ್ಟೋರೆಂಟ್ ಆಗುತ್ತಿದ್ದು ಇದರಿಂದ ಅಲ್ಲಲ್ಲಿ ಜಗಳ, ಬಡಿದಾಟಗಳು ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ಸದ್ಯ ಪುಡಿ ರೌಡಿಗಳನ್ನು ಇಟ್ಟುಕೊಂಡು ಪೊಲೀಸ್ ಇಲಾಖೆ ಭಯವೇ ಇಲ್ಲದೆ ಇಂತಹ ಅಡ್ಡಾ ನಡೆಸುವುವರು ಮುಂದೆ ಮತ್ತೆ ಯಾವ್ಯಾವ ಅಕ್ರಮ ದಂದೆಗಳನ್ನು ಪ್ರಾರಂಭ ಮಾಡಿ ಸಾಮಾನ್ಯ ಜನರ ಜೀವನಕ್ಕೆ ಕಂಟಕವಾಗ್ತಾರೋ ಗೊತ್ತಿಲ್ಲ.ಈ ಬಗ್ಗೆ ಎಲ್ಲರಿಗೂ ಮಾಹಿತಿ ಇರೋವಾಗ ನಿಜವಾಗಿಯೂ ಇಂತಹ ಹೋಟೆಲ್ (ಅಡ್ಡಾ)ಗಳ ಬಗ್ಗೆ ಪೊಲೀಸ್‌ ಇಲಾಖೆಗೆ ಯಾವುದೇ ಮಾಹಿತಿಯೇ ಇಲ್ವಾ? ಇದ್ದರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂಬುವ ಪ್ರಶ್ನೆಗೆ ಉತ್ತರ ಯಾವಾಗ ಸಿಗುವುದು ಎಂಬುವುದನ್ನು ಕಾದು ನೋಡಬೇಕು.....

ಬಾರ್ ಆ್ಯಂಡ್‌ ರೆಸ್ಟೋರೆಂಟ್ ಬನ್ನಿ ನಿಪ್ಪಾಣಿಗೆ

ಯಾರಿಗಾದರೂ ಹೋಟೆಲ್ ಖರ್ಚಿನಲ್ಲಿ ನಗರದಲ್ಲಿ ಬಾರ್ ಆ್ಯಂಡ್‌ ರೆಸ್ಟೋರೆಂಟ್ ತೆಗಿಬೇಕಾ? ಹಾಗಾದರೇ ಬನ್ನಿ ನಿಪ್ಪಾಣಿ ನಗರಕ್ಕೆ ಎಂಬ ಕುಚೇಷ್ಟೆಯ ಮಾತುಗಳು ಈಗ ನಗರದ ತುಂಬೆಲ್ಲ ಕೇಳಿ ಬರುತ್ತಿದೆ. ಪ್ರತಿ ಹೋಟೆಲಗಳಲ್ಲಿ ಇದೆ ರೀತಿ ಶುರುವಾಗಿ ಬಿಟ್ಟರೇ ವಾಣಿಜ್ಯ ನಗರಿ ಎಂಬ ಬಿರುದು ಹೋಗಿ ಎಣ್ಣೆ ನಗರಿ ನಿಪ್ಪಾಣಿ ಎಂಬ ಹೊಸ ಬಿರುದು ಬರುವುದು ಖಚಿತ.ಕೊನೆ ಯಾವಾಗ?

ಇನ್ನಾದರೂ ಪೊಲೀಸ್ ಇಲಾಖೆ ಎಚ್ಚತ್ತುಕೊಂಡು ಇವುಗಳನ್ನು ಮುಚ್ಚಿಸಿ ಅವರ ಮೇಲೆ ಕ್ರಮ ಕೈಗೊಂಡು ನಿಜವಾಗಿಯೂ ಪೊಲೀಸ್ ಎಂದರೆ ಏನು ಅಂತಾ ಇಂತಹವರಿಗೆ ತಿಳಿಸಿಕೊಡಬೇಕು ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ.

ನಗರದಲ್ಲಿ ಹೋಟೆಲ್‌ಗಳಲ್ಲಿ ಇಂತಹ ಕಾಯ್ದೆಸಿರ್ ಬಾರ್ ಆ್ಯಂಡ್‌ ರೆಸ್ಟೋರೆಂಟ್ ತರಹ ಹಲವರು ಮಾಡುತ್ತಿದ್ದು, ಇದು ನಿಯಮಬಾಹಿರವಾಗಿದೆ. ಯಾವುದೇ ಅನುಚಿತ ಘಟನೆಗಳು ನಡೆಯುವುದಕ್ಕಿಂತ ಮುಂಚೆ ಸಂಬಂಧಪಟ್ಟ ಇಲಾಖೆ ಇವರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಇಂಥವರಿಂದ ಅನುಮತಿ ಪಡೆದು ಸೂಕ್ತ ರೀತಿಯಲ್ಲಿ ಬಾರ್ ಆ್ಯಂಡ್‌ ರೆಸ್ಟೋರೆಂಟ್ ನಡೆಸುವವರೆಗೂ ಅನ್ಯಾಯವಾಗುತ್ತಿದೆ.

-ನಿಲೇಶ ಹತ್ತಿ,

ನ್ಯಾಯವಾದಿ ಹಾಗೂ ಶ್ರೀರಾಮ ಸೇನಾ ಹಿಂದುಸ್ಥಾನ ಜಿಲ್ಲಾಧ್ಯಕ್ಷ.

Share this article