ಚಹಾ ಸೇವನೆಯಿಂದ ಮನಸ್ಸಿಗೆ ಆಹ್ಲಾದ: ಚೈತನ್ಯ ವೆಂಕಿ

KannadaprabhaNewsNetwork | Published : May 25, 2025 2:04 AM
ಬಾಳೆಹೊನ್ನೂರು, ಚಹಾ ಸೇವನೆಯಿಂದ ಮನಸ್ಸಿಗೆ ಆಹ್ಲಾದ ದೊರೆಯುತ್ತದೆ ಎಂದು ಎನ್.ಆರ್.ಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚೈತನ್ಯ ವೆಂಕಿ ಹೇಳಿದರು.
Follow Us

ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಅಂತಾರಾಷ್ಟ್ರೀಯ ಚಹಾ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಚಹಾ ಸೇವನೆಯಿಂದ ಮನಸ್ಸಿಗೆ ಆಹ್ಲಾದ ದೊರೆಯುತ್ತದೆ ಎಂದು ಎನ್.ಆರ್.ಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚೈತನ್ಯ ವೆಂಕಿ ಹೇಳಿದರು.ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಅಂತಾರಾಷ್ಟ್ರೀಯ ಚಹಾ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವದಲ್ಲಿ ನೀರಿನ ನಂತರ ಹೆಚ್ಚು ಸೇವಿಸುವ ಪಾನೀಯ ಚಹಾ ಮತ್ತು ಕಾಫಿ ಆಗಿದೆ. ಚಹಾ ಸೇವನೆಯಿಂದ ಮನಸ್ಸಿಗೆ ವಿಶೇಷ ಸಂತಸ, ಆಹ್ಲಾದ ಮೂಡಲಿದ್ದು, ಒತ್ತಡದಲ್ಲಿರುವ ಮನಸ್ಸಿಗೆ ಚಹಾ ಸೇವನೆಯಿಂದ ವಿಶ್ರಾಂತಿ ದೊರೆಯುತ್ತದೆ ಎಂದರು.

ವಿಶ್ವದಲ್ಲಿ ಚಹಾ ಉತ್ಪಾದನೆಯಲ್ಲಿ ಚೀನಾ ದ ನಂತರ ಭಾರತ ಎರಡನೇ ಅತೀ ದೊಡ್ಡ ರಾಷ್ಟ್ರವಾಗಿದೆ. ವಿಶ್ವ ಸಂಸ್ಥೆ ಪ್ರತೀ ವರ್ಷ ಮೇ.21ರಂದು ಚಹಾ ಉತ್ಪಾದನೆದಿನ ಆಚರಿಸುತ್ತದೆ. ಹೆಚ್ಚಿನ ದೇಶಗಳಲ್ಲಿ ಮೇ ತಿಂಗಳಿನಲ್ಲಿ ಚಹಾ ಉತ್ಪಾದನೆ ಆರಂಭವಾಗುವ ಹಿನ್ನೆಲೆಯಲ್ಲಿ ಇದೇ ತಿಂಗಳಿನಲ್ಲಿ ಚಹಾ ದಿನಾಚರಣೆ ಆಚರಿಸುವ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು.ಭಾರತದಲ್ಲಿ ಚಹಾ ತೋಟಗಳನ್ನು ಪ್ರಾರಂಭಿಸಿದ ಮೊದಲ ರಾಜ್ಯ ಅಸ್ಸಾಂ ಆಗಿದ್ದು, ಚೀನಾದಿಂದ ಆಮದು ಮಾಡಿಕೊಂಡ ಚಹಾ ಗಿಡಗಳನ್ನು ಅಸ್ಸಾಮಿನಲ್ಲಿ ಕ್ರಮೇಣ ವಾಣಿಜ್ಯ ಉದ್ದೇಶದಿಂದ ವಿಸ್ತರಿಸಿದರು. ಭಾರತದಲ್ಲಿ ಡಾರ್ಜಲಿಂಗ್ ಟೀ, ಅಸ್ಸಾಂ ಟೀ ಹಾಗೂ ನೀಲಗಿರಿ ಟೀಯನ್ನು ಜನರು ಹೆಚ್ಚು ಇಷ್ಟಪಡುವ ಚಹಾ ಉತ್ಪನ್ನಗಳಾಗಿವೆ ಎಂದರು.ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ ಮಾತನಾಡಿ, ಚಹಾ ಪೇಯವು ವಿಶ್ವದ ಅತ್ಯಂತ ಹಳೆಯ ಪಾನೀಯ ಎಂದು ಗುರುತಿಸಲ್ಪಟ್ಟಿದ್ದು, ಚಹಾವು ಅನೇಕ ಔಷಧೀಯ ಗುಣಗಳನ್ನು ಸಹ ಹೊಂದಿದೆ. ಹೃದಯ ಸಮಸ್ಯೆಗಳು, ಮಧುಮೇಹ ನಿಯಂತ್ರಣಕ್ಕೆ ಇದು ಪೂರಕವಾಗಿದೆ ಎಂದು ವಿವಿಧ ಸಂಶೋಧನೆಗಳಲ್ಲಿ ಹೇಳಲಾಗಿದೆ.ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳಲ್ಲೂ ಸಹ ಚಹಾ ಬೆಳೆಯುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದ್ದು, ಬಾಳೆಹೊನ್ನೂರು ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿಯೂ ಚಹಾ ಉತ್ಪಾದನೆ ಮಾಡುತ್ತಿರುವುದು ವಿಶೇಷ ಎಂದರು.ಜೇಸಿ ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ವಿ.ಅಶೋಕ, ಜ್ಯೂನಿಯರ್ ಜೇಸಿ ಅಧ್ಯಕ್ಷ ನಿಶ್ಚಿತ್ ಮಿಸ್ಕಿತ್, ಉಪನ್ಯಾಸಕ ಸೋಮೇಶ್‌ಗೌಡ, ಮಮತಾ, ಶ್ರೀಧರ್, ಪೂರ್ವಾಧ್ಯಕ್ಷರಾದ ಡಾ.ನವೀನ್ ಮಿಸ್ಕಿತ್, ಜಮೀರ್ ಮೂಸಬ್ಬ, ಸುರೇಂದ್ರ, ಸುಧಾಕರ್, ಸಿ.ಪಿ.ರಮೇಶ್, ಎಚ್.ಗೋಪಾಲ್, ರಿಚರ್ಡ್ ಮಥಾಯಿಸ್ ಮತ್ತಿತರರು ಹಾಜರಿದ್ದರು. ೨೪ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಜೇಸಿಐ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಚಹಾ ದಿನದ ಅಂಗವಾಗಿ ಜೇಸಿ ಸದಸ್ಯರು ಸಾಮೂಹಿಕವಾಗಿ ಚಹಾ ಸೇವನೆ ನಡೆಸಿದರು. ಇಬ್ರಾಹಿಂ ಶಾಫಿ, ಚೈತನ್ಯ ವೆಂಕಿ, ಎನ್.ಶಶಿಧರ್, ಅಶೋಕ, ನಿಶ್ಚಿತ್ ಮಿಸ್ಕಿತ್ ಹಾಜರಿದ್ದರು.