ಕನ್ನಡಪ್ರಭ ವಾರ್ತೆ ಇಂಡಿ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬಜೆಟ್ ಮಂಡನೆಯ ಸಭೆಯಲ್ಲಿ ನಗರಸಭೆ ಪೌರಾಯುಕ್ತ ಶಿವಾನಂದ ಪೂಜಾರಿ ಆಡಳಿತಾಧಿಕಾರಿಗಳ ಅನುಮೋದನೆಗಾಗಿ ಮಂಡಿಸಿದ ಆಯವ್ಯಯ ಬಜೆಟ್ ಒಪ್ಪಿಗೆ ನೀಡಿದರು.ಪ್ರಸಕ್ತ ಸಾಲಿನಲ್ಲಿ ಒಟ್ಟು ₹43.43 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ₹43.38 ಕೋಟಿ ವೆಚ್ಚ ತೋರಿಸಿದ್ದು, ಅತ್ಯಲ್ಪ ₹5.47 ಲಕ್ಷ ನಿರೀಕ್ಷಿತ ಉಳಿತಾಯ ತೋರಿಸಲಾಗಿದೆ. ಈ ಆಯವ್ಯಯದಲ್ಲಿ ಪ್ರಮುಖವಾಗಿ ನಗರದ ಸೌಂದರಿಕರಣಕ್ಕಾಗಿ ಸಾರ್ವಜನಿಕ ಉದ್ಯಾನವನ, ಸಾರ್ವಜನಿಕ ಗ್ರಂಥಾಲಯ,ವಿದ್ಯುತ್ ಬೀದಿ ದೀಪ, ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿರುತ್ತದೆ.ಪ್ರಮುಖ ಆದಾಯಗಳು: ಇಂಡಿ ನಗರಸಭೆಯ ಸನ್ 2026-27ನೇ ಸಾಲಿನ ಆಯ-ವ್ಯಯ ಕರಡು ಪ್ರಸ್ತಾವನೆ ಅಂದಾಜು ಆರಂಭ ಶಿಲ್ಕು ₹92.10 ಲಕ್ಷಗಳು, ಸ್ವೀಕೃತಿಗಳು: ರಾಜಸ್ವ ಸ್ವೀಕೃತಿಗಳು ₹2595.40 ಲಕ್ಷಗಳು, ಬಂಡವಾಳ ಸ್ವೀಕೃತಿಗಳು ₹892.50 ಲಕ್ಷಗಳು, ಅಸಾಧಾರಣ ಸ್ವೀಕೃತಿಗಳು ₹855.74 ಲಕ್ಷಗಳು ಒಟ್ಟು ₹4343.63 ಲಕ್ಷಗಳು ಆದಾಯ ನಿರೀಕ್ಷೆ ಮಾಡಲಾಗಿದೆ.ಪ್ರಮುಖ ವೆಚ್ಚಗಳು: ರಾಜಸ್ವ ಪಾವತಿಗಳು ₹2612.63 ಲಕ್ಷಗಳು, ಬಂಡವಾಳ ಪಾವತಿಗಳು ₹869.80 ಲಕ್ಷಗಳು, ಅಸಾಧಾರಣ ಪಾವತಿಗಳು ₹855.74 ಲಕ್ಷಗಳು ಒಟ್ಟು ₹4338.17 ಲಕ್ಷಗಳು, ಒಟ್ಟು ಉಳಿತಾಯ ಶಿಲ್ಕು ₹5.47 ಲಕ್ಷಗಳು, ಅಂದಾಜು ಅಂತಿಮ ಶಿಲ್ಕು ಒಟ್ಟು ₹97.56 ಲಕ್ಷಗಳು ಸಿದ್ಧಪಡಿಸಿ ಆಡಳಿತಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅನುಮೋದನೆಗಾಗಿ ನಗರಸಭೆಯ ಪೌರಾಯುಕ್ತ ಶಿವಾನಂದ ಪೂಜಾರಿ ಸಭೆಯಲ್ಲಿ ಮಂಡಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಔದ್ರಾಮ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ.ಸೌದಾಗರ, ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ್ ಬಿ.ಎಸ್.ಕಡಕಭಾವಿ, ಅಕೌಂಟಂಟ್ ಅಸ್ಲಂ ಖಾದಿಮ ಸಭೆಯಲ್ಲಿ ಉಪಸ್ಥಿತರಿದ್ದರು.ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಆಡಳಿತಾಧಿಕಾರಿಗಳಾದ ಡಾ.ಆನಂದ.ಕೆ ಬಜೆಟ್‌ಗೆ ಅನುಮೋದನೆ ನೀಡಿದ್ದಾರೆ. ಇಂಡಿ ಉಪ ವಿಭಾಗೀಯ ತಾಲೂಕು ಕೇಂದ್ರದ ಇಂಡಿ ನಗರಸಭೆ ವತಿಯಿಂದ ನಗರವನ್ನು ಸ್ವಚ್ಛ ಮತ್ತು ಹಸಿರು ನಗರವನ್ನಾಗಿ ರೂಪಿಸಲು ಪಣ ತೊಡಲಾಗಿದೆ. ಇದಕ್ಕಾಗಿ ನಗರದ ಸಾರ್ವಜನಿಕರು ನಗರಸಭೆಯೊಂದಿಗೆ ಕೈಜೊಡಿಸಬೇಕು. ನಗರ ಸೌಂದರ್ಯಕರಣ,ಉದ್ಯಾನವನ ಅಭಿವೃದ್ಧಿ, ಬೀದಿ ದೀಪಗಳ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಅಳವಡಿಸಲಾಗಿದೆ. ನಗರದ ಅಭಿವೃದ್ಧಿಗೆ ನಗರ ನಿವಾಸಿಗಳು ನಗರಸಭೆಯೊಂದಿಗೆ ಸಹಕರಿಸಬೇಕು.-ಶಿವಾನಂದ ಪೂಜಾರಿ,