ಕಲಬುರಗಿ ನಗರದಲ್ಲಿ ಕುಡಿವ ನೀರಿಗೆ ಹಾಹಾಕಾರ

KannadaprabhaNewsNetwork | Published : Dec 30, 2023 1:16 AM

ಸಾರಾಂಶ

ಕಲಬುರಗಿ ನಗರದ ವಾರ್ಡ್‌ಗಳಿಗೆ ಸಮರ್ಪಕವಾಗಿ ನೀರು ಹರಿಸಲು ವಿಫಲಗೊಂಡಿರುವ ಎಲ್‌ ಆಂಡ್‌ ಟಿ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಸರ್ವ ಸದಸ್ಯರ ಆಗ್ರಹ

ಕನ್ನಡಪ್ರಭ ವಾರ್ತೆ ಕಲಬುರಗಿ

ಪಾಲಿಕೆ ಸಭೆಯಲ್ಲಿ ನಗರದ ಕುಡಿವ ನೀರಿನ ಸಮಸ್ಯೆಗಳು ಪ್ರಸ್ತಾಪವಾದವು. ಬಹಳಷ್ಟು ಸಮಸ್ಯೆ ಕಾಡುತ್ತಿದ್ದರೂ ಎಲ್‌ ಆ್ಯಂಡ್‌ ಟಿ ಏಜನ್ಸಿ ಸುಮ್ಮನಿದೆ ಎಂದು ಸದಸ್ಯರು ಆಕ್ಷೇಪಿಸಿದರು.

ಅನೇಕ ಕಲಬುರಗಿಯ ವಾರ್ಡ್‍ಗಳಲ್ಲಿ ಕುಡಿವ ನೀರು ಸರಿಯಾಗಿ ಬಿಡುತ್ತಿಲ್ಲ ಇದರಿಂದ ಸಾರ್ವಜನಿಕರಿಗೆ ಅನೇಕ ತೊಂದರೆಗಳನ್ನು ಅನುಭವಿಸುವಂತಹದಾಗ್ದಿದ್ದು, ಎಲ್‌ ಆ್ಯಂಡ್‌ ಟಿ ಏಜೆನ್ಸಿಯವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಏಜೆನ್ಸಿಯ ವಿರುದ್ಧ ಕ್ರಮಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬಂತು.

ಪಾಲಿಕೆ ಸದಸ್ಯರು ಅಧಿಕಾರಿಗಳಿಗೆ ಹಾಗೂ ಎಲ್‌ ಆ್ಯಂಡ್‌ ಟಿ ಏಜೆನ್ಸಿಯ ವಿರದ್ಧ ತರಾಟೆ ತೆಗದುಕೊಂಡರು. ಅಧಿಕಾರಿಗಳು ಸರಿಯಾಗಿ ನೀರು ಸರಬರಾಜು ಮಾಡುತ್ತಿಲ್ಲ. ಎಲ್ಲಿ ನೀರು ಇಲ್ಲ ಎಲ್ಲಿ ಕೊಳವೆ ಭಾವಿಗಳಿಗೆ ಅವುಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಎಲ್ಲಿ ನೀರಿನ ಅನುಕೂಲ ಎಲ್ಲಿ ಇಲ್ಲ ಟ್ಯಾಂಕರ್‌ಗಳು ನೀರು ಸರಬರಾಜು ಮಾಡಬೇಕು ಇಲ್ಲವಾದಲ್ಲಿ ನಮಗೆ ಸಾರ್ವಜನಿಕರು ಮನೆಗೆ ಬಂದು ಕೇಳುತ್ತಾರೆ. ನೀರು ಯಾಕೆ ಬಿಡುತ್ತಿಲ್ಲ ಎಂದು ಕೆಲವು ಸದಸ್ಯರು ಸಭೆಯಲ್ಲಿ ಅಧಿಕಾರಿಗಳ ಮುಂದೆ ಹೇಳಿದರು.

ಪಾಲಿಕೆ ಆಯುಕ್ತ ಪಾಟೀಲ ಭುವನೇಶ್ವರ ದೇವಿದಾಸ ಅವರು ಮಾತನಾಡಿ, ಎಲ್ ಆ್ಯಂಡ್‌ ಟಿ ಏಜೆನ್ಸಿ ಅವರಿಗೆ ಮಾತನಾಡಿ, ಎಲ್ಲ ಸಮಸ್ಯೆಗಳಿಗೆ ಅವರೊಂದಿನೆ ಮಾತನಾಡಿ ಪರಿಹರಿಸುವುದಾಗಿ ತಿಳಿಸಿ, ಮುಂದೆ ಎಲ್ಲ ಅಧಿಕಾರಿಗಳು, ಸಿಬ್ಬಂದಿ ತಮಗೆ ನೀಡಿದ ಕೆಲಸ ಜವಾಬ್ದಾರಿಯಿಂದ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸೂಚನೆ ನೀಡಿದರು.

ಮಹಾನಗರ ಪಾಲಿಕೆ ಮಹಾಪೌರ ವಿಶಾಲ ದರ್ಗಿ ಮಾತನಾಡಿ, ಎಲ್ ಆ್ಯಂಡ್‌ ಟಿ ಏಜೆನ್ಸಿಯ ಕಪ್ಪು ಪಟ್ಟಿಗೆ ಸೇರಿಸಬೇಕು. ಎಲ್ಲಾ ಸದಸ್ಯರು ಸೇರಿಕೊಂಡು ಬೆಂಗಳೂರಿಗೆ ಹೋಗಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಪ್ರಿಯಾಂಕ್‌ ಖರ್ಗೆ ಅವರೊಂದಿಗೆ ಚರ್ಚಿಸೋಣ ಎಂದರು.

ಸಭೆಯಲ್ಲಿ ಉಪ ಮಹಾಪೌರ ಶಿವಾನಂದ ಪಿಸ್ತಿ, ಕರ ಹಣಕಾಸು ಹಾಗೂ ಮೇಲ್ಮನವಿ, ರಾಗಮ್ಮ ಎಸ್. ಇನಾಂದಾರ, ಸಾಜೀದ್ , ರಿಯಾಜ್ ಅಹ್ಮದ್, ವಿಶಾಲ ನೌರಂಗ್ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಆಡಳಿತ ಪಕ್ಷ ಮತ್ತು ವಿರೋದ ಪಕ್ಷ ನಾಯಕರು ಸದಸ್ಯರು ಅಧಿಕಾರಿಗಳು ಇದ್ದರು.

Share this article