ಗದುಗಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ: ಸಂಕನೂರ

KannadaprabhaNewsNetwork |  
Published : Dec 17, 2025, 02:15 AM IST
ಎಸ್.ವಿ. ಸಂಕನೂರ  | Kannada Prabha

ಸಾರಾಂಶ

ನಗರದ ಹಲವಾರು ವಾರ್ಡುಗಳಲ್ಲಿ 15ರಿಂದ 20 ದಿನಕ್ಕೊಮ್ಮೆ ಮಾತ್ರ ನೀರು ಸರಬರಾಜಾಗುತ್ತಿದ್ದು, ಕೆಲ ವಾರ್ಡುಗಳಲ್ಲಿ ವಿಶೇಷವಾಗಿ 11ನೇ ವಾರ್ಡಿನಲ್ಲಿ ತಿಂಗಳಿಗೆ ಒಂದೇ ಬಾರಿ ನೀರು ಬರುತ್ತಿರುವುದು ನಾಗರಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಗದಗ: ಗದಗ ಜಿಲ್ಲೆ ರಚನೆಯಾಗಿ ಮೂರು ದಶಕ ಕಳೆದರೂ ಗದಗ- ಬೆಟಗೇರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿಯೇ ಮುಂದುವರಿದಿದ್ದು, ಸಾರ್ವಜನಿಕರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನಪರಿಷತ್‌ ಶೂನ್ಯ ಅವಧಿಯಲ್ಲಿ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಪ್ರಸ್ತಾಪಿಸಿದರು.

ನಗರದ ಹಲವಾರು ವಾರ್ಡುಗಳಲ್ಲಿ 15ರಿಂದ 20 ದಿನಕ್ಕೊಮ್ಮೆ ಮಾತ್ರ ನೀರು ಸರಬರಾಜಾಗುತ್ತಿದ್ದು, ಕೆಲ ವಾರ್ಡುಗಳಲ್ಲಿ ವಿಶೇಷವಾಗಿ 11ನೇ ವಾರ್ಡಿನಲ್ಲಿ ತಿಂಗಳಿಗೆ ಒಂದೇ ಬಾರಿ ನೀರು ಬರುತ್ತಿರುವುದು ನಾಗರಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಮಹಿಳೆಯರು ನಗರಸಭೆ ವಿರುದ್ಧ ಪ್ರತಿಭಟನೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ನಗರಸಭೆಯು ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವುದು ಯಾವುದೇ ಶಾಶ್ವತ ಪರಿಹಾರವಾಗಿಲ್ಲ.ಈ ಹಿನ್ನೆಲೆ ಸರ್ಕಾರವು ತಕ್ಷಣ ಹಾಗೂ ಶಾಶ್ವತ ಪರಿಹಾರ ಒದಗಿಸಬೇಕು. ವಿಶೇಷವಾಗಿ ಹಮ್ಮಿಗಿಯಲ್ಲಿರುವ ಎತ್ತುವರಿ ಮೋಟಾರ್‌ಗಳು ಪದೇ ಪದೇ ಹಾಳಾಗುತ್ತಿರುವುದರಿಂದ ಹೊಸ ಮೋಟಾರ್ ಅಳವಡಿಕೆ, ಎತ್ತುವರಿ ಕೇಂದ್ರಕ್ಕೆ ನಿರಂತರ ವಿದ್ಯುತ್ ಪೂರೈಕೆ ವ್ಯವಸ್ಥೆ ಹಾಗೂ ಹಮ್ಮಿಗಿಯಿಂದ ಗದಗಕ್ಕೆ ಬರುವ ಮಾರ್ಗದಲ್ಲಿನ ಹಳೆಯ ಹಾಗೂ ಶಕ್ತಿ ಕಳೆದುಕೊಂಡ ಪೈಪ್‌ಗಳನ್ನು ಬದಲಿಸಿ ಹೊಸ ಪೈಪ್‌ಲೈನ್ ಜೋಡಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು.

ಈ ವಿಷಯವನ್ನು ಹಿಂದೆಯೂ ಹಲವು ಬಾರಿ ಸದನದಲ್ಲಿ ಪ್ರಸ್ತಾಪಿಸಿದರೂ ಸಂಬಂಧಪಟ್ಟ ಸಚಿವರಿಂದ ಸಮರ್ಪಕ ಸ್ಪಂದನೆ ದೊರಕದಿರುವುದು ವಿಷಾದಕರ ಸಂಗತಿ. ಆದ್ದರಿಂದ ಈಗಲಾದರೂ ನಗರಾಭಿವೃದ್ಧಿ ಸಚಿವರು ಸ್ವತಃ ಗದಗ- ಬೆಟಗೇರಿ ನಗರಕ್ಕೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ತಿಳಿಸಿದ್ದಾರೆ.ತಾಲೂಕು ಮಟ್ಟದ ಸದಸ್ಯರಿಗೆ ಗ್ರಾಪಂಗಳ ಉಸ್ತುವಾರಿ

ಗದಗ: ಗ್ಯಾರಂಟಿ ಯೋಜನೆಗಳ ಸಮರ್ಪಕ ನಿರ್ವಹಣೆಗಾಗಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿಯ ಸದಸ್ಯರನ್ನು ತಾಲೂಕು ಮಟ್ಟದ ಜವಾಬ್ದಾರಿಯೊಂದಿಗೆ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಉಸ್ತುವಾರಿಗಳನ್ನಾಗಿ ಕರ್ತವ್ಯ ನಿರ್ವಹಿಸಲು ತಾಲೂಕಾಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.ದೇವರಡ್ಡಿ ತಿರ್ಲಾಪೂರ ಅವರಿಗೆ ಬಿಂಕದಕಟ್ಟಿ, ಅಸುಂಡಿ(ಮೊ. 9886066157), ಮಲ್ಲಪ್ಪ ದಂಡಿನ ಅಂತೂರ- ಬೆಂತೂರ ಹಾಗೂ ಚಿಂಚಲಿ(ಮೊ. 9972046274), ಗಣೇಶಸಿಂಗ್ ಮಿಟಾಡೆ ಅವರಿಗೆ ವಾರ್ಡ್ ನಂ. 11,12,13 ಮತ್ತು 14(ಮೊ. 9448540575), ಮಲ್ಲಪ್ಪ ಎಚ್. ಬಾರಕೇರ ಅವರಿಗೆ ವಾರ್ಡ್‌ ನಂ. 7,8,8 ಮತ್ತು 10(ಮೊ. 7022797007), ಭಾಷಾ ಮಲ್ಲಸಮುದ್ರ ಅವರಿಗೆ ವಾ.ನಂ. 17,18,23,25 ಮತ್ತು 33(ಮೊ. 8904363984 ) ಉಸ್ತುವಾರಿಗಳನ್ನಾಗಿ ಕರ್ತವ್ಯ ನಿರ್ವಹಿಸಲು ತಿಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ