ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಅಶುದ್ಧ ನೀರಿನಿಂದಾಗಿ ಜನ ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಅಲ್ಲದೇ ಜೀವಕ್ಕೆ ಕಂಟಕವಾಗಬಹುದು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ವಾಟರ್ ಮ್ಯಾನ್ ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಒಂದು ದಿನ ತರಬೇತಿ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಗ್ರಾಪಂ ವಾಟರ್ ಮ್ಯಾನ್ ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಒಂದು ದಿನದ ನೀರಿನ ಪರೀಕ್ಷೆ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು, ವಾಟರ್ ಮ್ಯಾನಳಿಗೆ ನೀರಿನ ಪರೀಕ್ಷೆ ಕನಿಷ್ಠ ಜ್ಞಾನ ಅತ್ಯವಶ್ಯಕವಾಗಿದೆ. ಕಲುಷಿತ ನೀರು, ಅಶುದ್ಧ ನೀರು, ಕುಡಿಯಲು ಯೋಗ್ಯವಲ್ಲದ ನೀರಿನ ಬಗ್ಗೆ ಎಚ್ಚರ ವಹಿಸಿ ಶುದ್ಧ ನೀರು ಒದಗಿಸಲು ನೀರಿನ ಪರೀಕ್ಷೆಯನ್ನು ಕಡ್ಡಾಯವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಡಿ, ಪೂರೈಸಬೇಕು ಎಂದು ತಿಳಿಸಿದರು.ಜಿಲ್ಲಾ ನೀರು ಪರೀಕ್ಷಾ ಕೇಂದ್ರದ ಸೋಮನಾಥ ಚನ್ನಗೌಡ ಅವರು ಮಾತನಾಡಿ, ಫೀಲ್ಡ್ ಟೆಸ್ಟ್ ಕಿಟ್ ಮುಖಾಂತರ ನೀರು ಪರೀಕ್ಷೆ ವಿಧಾನಗಳಾದ ನೀರಿನ ಪಿಎಚ್, ಒಟ್ಟು ಗಡಸುತನ, ಕ್ಲೋರೈಡ್, ಫ್ಲೋರೈಡ್, ಕಬ್ಬಿನ, ಗೈಟ್ರೋಟ್ , ರೆಸಿಡ್ಯುಯಲ್, ಕ್ಲೋರಿನ್, ಟರ್ವಿಡೀಪಿ ಎಲ್ಲಾ ಅಂಶಗಳು ಯಾವ ಪ್ರಮಾಣದಲ್ಲಿ ಇರಬೇಕು ಎಂಬುವುದನ್ನು ಪ್ರಾಯೋಗಿಕವಾಗಿ ಪರೀಕ್ಷೆ ಮಾಡಿ ತಿಳಿಸಲಾಯಿತು.
ನೀರಿನ ಪ್ರಮಾಣವನ್ನು ಸಿರಿಂಜ್ ಮೂಲಕವೇ ತೆಗೆದುಕೊಳ್ಳಬೇಕು. ಸಿರಿಂಜಿನ್ ಸೂಜಿಯನ್ನು ದ್ರಾವಣ ಬಾಟಲಿಗಳ ತೊಟ್ಟು ರಂಧ್ರ ಮಾಡಲು ಉಪಯೋಗಿಸಿ ಎಂದು ತಿಳಿಸಿದರು. ತರಬೇತಿಯಲ್ಲಿ ಗ್ರಾಪಂ ವಾಟರ್ ಮ್ಯಾನ್ ಗಳು ತಂದಂತಹ ನೀರನ್ನು ಅವರ ಕಡೆಯಿಂದಲೇ ಪರೀಕ್ಷೆಗೆ ಒಳಪಡಿಸಲಾಯಿತು.ಇದೇ ಸಂದರ್ಭದಲ್ಲಿ ತಾಪಂ ಯೋಜನಾಧಿಕಾರಿ ಶ್ರೀನಿವಾಸ ಪವಾರ, ಪಿಡಿಒ, ಗ್ರಾಪಂ ವಾಟರ್ ಮ್ಯಾನ್, ಕಂಪ್ಯೂಟರ್ ಆಪರೇಟರ್, ಹಾಗೂ ತಾಪಂ ಸಿಬ್ಬಂದಿ ವರ್ಗ ಹಾಜರಿದ್ದರು.