ನಿರ್ವಹಣೆ ಇಲ್ಲದೇ ಸೊರಗಿದ ಕುಡಿವ ನೀರಿನ ಘಟಕಗಳು

KannadaprabhaNewsNetwork |  
Published : Oct 17, 2026, 02:15 AM IST
ಹೂವಿನಹಡಗಲಿ ಪಟ್ಟಣದಲ್ಲಿರುವ ಶುದ್ಧ ಕುಡಿವ ನೀರಿನ ಘಟಕ ಸಂಪೂರ್ಣ ಬಂದ್‌ ಆಗಿದೆ. ಗ್ಲಾಸ್‌, ಬಾಗಿಲು ಕಿತ್ತು ಹೋಗಿವೆ.  | Kannada Prabha

ಸಾರಾಂಶ

ಶುದ್ಧ ಕುಡಿವ ನೀರಿನ ಘಟಕಗಳ ನಿರ್ವಹಣೆಗಾಗಿ ಗುತ್ತಿಗೆ ಪಡೆದಿವೆ. ಇದರಲ್ಲಿ 68 ಆಯಾ ಗ್ರಾಪಂಗಳೇ ನಿರ್ವಹಣೆ ಮಾಡುತ್ತಿವೆ.

ಚಂದ್ರು ಕೊಂಚಿಗೇರಿ ಹೂವಿನಹಡಗಲಿ

ಜನಾರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಶುದ್ಧ ಕುಡಿವ ನೀರಿನ ಘಟಕ ವಿವಿಧ ಯೋಜನೆಯ ಅನುದಾನದಲ್ಲಿ ನಿರ್ಮಿಸಲಾಗಿದ್ದು. ಆದರೆ ಬರದಲ್ಲಿ ಕೆಲವಡೆ ಕೊಳವೆ ಬಾವಿ ಬತ್ತಿ ಹೋಗಿದ್ದರೆ ಇನ್ನು ಹಲವು ಕಡೆ ಸಮರ್ಪಕ ನಿರ್ವಹಣೆ ಇಲ್ಲದೇ ಘಟಕಗಳು ಸೊರಗಿ ಹೋಗಿವೆ.

ತಾಲೂಕಿನಲ್ಲಿ 131 ಶುದ್ಧ ಕುಡಿವ ನೀರಿನ ಘಟಕ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ 116 ಸುಸ್ಥಿತಿಯಲ್ಲಿವೆ, 15 ದುರಸ್ತಿಯಲ್ಲಿವೆ. ತಳಕಲ್ಲು, ಗೋವಿಂದಪುರ ತಾಂಡಾ-1ರಲ್ಲಿ ಶುದ್ಧ ಕುಡಿವ ನೀರಿನ ಘಟಕಕ್ಕೆ ನೀರು ಒದಗಿಸುವ ಕೊಳವೆಗಳು, ಅಂತರ್ಜಲ ಇಲ್ಲದೇ ಬತ್ತಿ ಹೋಗಿದ್ದು ಈಗ ಬಂದಾಗಿವೆ.

ಶುದ್ಧ ಕುಡಿವ ನೀರಿನ ಘಟಕಗಳ ನಿರ್ವಹಣೆಗಾಗಿ ಗುತ್ತಿಗೆ ಪಡೆದಿವೆ. ಇದರಲ್ಲಿ 68 ಆಯಾ ಗ್ರಾಪಂಗಳೇ ನಿರ್ವಹಣೆ ಮಾಡುತ್ತಿವೆ. ಆರ್‌ಎಸ್‌ ಅಕ್ವಾ ಕಂಪನಿಗೆ-32, ಸಹಕಾರ ಸಂಘಗಳ ವ್ಯಾಪ್ತಿಗೆ-9, ರೂರ್‌ಬನ್‌ 3, ತಾಂಡಾ ಅಭಿವೃದ್ಧಿ ನಿಗಮ-2, ಧಾರ್ಮಿಕ ದತ್ತಿ ಇಲಾಖೆ-6, ಟಾಟಾ ಏಜೆನ್ಸಿ-9 ಶುದ್ಧ ಕುಡಿವ ನೀರಿನ ಘಟಕ ನಿರ್ವಹಣೆಗಾಗಿ ಗುತ್ತಿಗೆ ಪಡೆದಿದ್ದಾರೆ.

ಕೆಲ ಭಾಗಗಳಲ್ಲಿ ಮಾತ್ರ ಕೊಳವೆ ಬಾವಿಗಳಲ್ಲಿ ನೀರಿದೆ, ಇನ್ನು ಕೆಲವಡೆ ಅಂತರ್ಜಲ ಕುಸಿತ ಕಂಡಿದೆ. ಜನರ ಬೇಡಿಕೆಗೆ ತಕ್ಕಂತೆ ಶುದ್ಧ ಕುಡಿವ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಘಟಕಗಳು ಪದೇ ಪದೇ ದುರಸ್ತಿ ಬರುತ್ತಿವೆ, ಬರುವ ಆದಾಯ ಸಾಕಾಗದೇ ಗುತ್ತಿಗೆದಾರರು ರೋಸಿ ಹೋಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ 9 ಶುದ್ಧ ಕುಡಿವ ನೀರಿನ ಘಟಕಗಳಿವೆ, ಇದರಲ್ಲಿ ಮೂರು ಘಟಕಗಳು ದುರಸ್ತಿಯಲ್ಲಿವೆ. ಇನ್ನು ಎರಡು ಹೊಸದಾಗಿ ಕಾಯಕ ನಗರ, ನಜೀರ ನಗರದಲ್ಲಿ ನಿರ್ಮಿಸಲಾಗಿದೆ, ಆದರೆ ಇನ್ನೂ ಆರಂಭವಾಗಿಲ್ಲ. ಕಳೆದ ಒಂದುವರೆ ವರ್ಷದಿಂದ ಸರ್ಕಾರ ಗ್ರಾಪಂಗಳಿಗೆ ಯಾವ ಅನುದಾನ ನೀಡಿಲ್ಲ, ಸ್ವಚ್ಛತೆ, ಕುಡಿವ ನೀರು, ವಿದ್ಯುತ್‌ ದೀಪ ಸೇರಿದಂತೆ ಇತರೆ ಆಡಳಿತಾತ್ಮಕ ವೆಚ್ಚ ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಜಿಪಂ ಸಿಇಒ ಗರಿಮಾ ಪನ್ವಾರ್‌ ನಿರ್ದೇಶನದಂತೆ ವಾರದಲ್ಲಿ ಎರಡು ದಿನ ಗ್ರಾಪಂ ಪಿಡಿಒ, ಕಾರ್ಯದರ್ಶಿ ಸೇರಿದಂತೆ ಇಡೀ ಸಿಬ್ಬಂದಿ, ಮನೆ ಮತ್ತು ನೀರಿನ ತೆರಿಗೆ ವಸೂಲಿಗೆ ನಿಂತಿವೆ.

ಬರದಲ್ಲಿ ಬದುಕಿನ ನಿರ್ವಹಣೆಯೇ ಕಷ್ಟಕರವಾಗಿದೆ,ಇಂತಹ ಸಂದರ್ಭದಲ್ಲಿ ನೀರು ಮತ್ತು ಮನೆಯ ಕರ ಬಾಕಿ ಪಾವತಿಗೆ ಹೆಣಗಾಡಬೇಕಾದ ಸ್ಥಿತಿ ಬಂದಿದೆ. ತೆರಿಗೆ ವಸೂಲಿ ಮಾಡುತ್ತಾರೆ ಆದರೆ ಅಭಿವೃದ್ಧಿಯೇ ಮರೀಚಿಕೆಯಾಗಿದೆ ಎಂಬ ದೂರು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಗ್ರಾಪಂಗೆ ಹಸ್ತಾಂತರವಾದ ಶುದ್ಧ ಕುಡಿವ ನೀರಿನ ಘಟಕ ನಿರ್ವಹಣೆಗಾಗಿ ವರ್ಷಕ್ಕೆ ₹36 ಸಾವಿರ ಅನುದಾನ ನೀಡುತ್ತಿದೆ. ಬರ ಹಿನ್ನೆಲೆಯಲ್ಲಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿತ ಕಂಡಿದೆ. ಆದರೂ ಕುಡಿವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದು ಹೂವಿನಹಡಗಲಿ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಕೆ.ಪ್ರದೀಪ್‌ ಕುಮಾರ ತಿಳಿಸಿದ್ದಾರೆ. ಶುದ್ಧ ಕುಡಿವ ನೀರಿನ ಘಟಕಗಳಿಗೆ ನೀರಿನ ಸಂಪರ್ಕ ಕೊಟ್ಟಿರುವ ಕೊಳವೆ ಬಾವಿಗಳು ನೀರಿಲ್ಲದೇ ಬತ್ತಿ ಹೋಗಿವೆ, ಶುದ್ಧ ನೀರನ್ನು ಬೇರೆ ಕಡೆಗೆ ಹೋಗಿ ತರುವ ಸ್ಥಿತಿ ಬಂದಿದೆ. ಸರ್ಕಾರ ಕುಡಿವ ನೀರಿಗೆ ಅಗತ್ಯ ಅನುದಾನ ನೀಡಲಿ ಎಂದು ಹೂವಿನಹಡಗಲಿ ತಾಲೂಕು ಅಂಗವಿಕರ ಮತ್ತು ಪಾಲಕರ ಸಂಘ ಅಧ್ಯಕ್ಷ ಎಸ್‌.ಚಂದ್ರಪ್ಪ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಣಿ ಸಂಯುಕ್ತಾಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದರೆ ನಾನೇ ಸ್ಪರ್ಧೆ: ಆನಂದ ಸಿಂಗ್
ಗ್ರಾಹಕರ ಅನುಕೂಲಕ್ಕಾಗಿ ಬಿಡಿಸಿಸಿ ನೂತನ ಶಾಖೆ ಆರಂಭ