ಕನ್ನಡಪ್ರಭ ವಾರ್ತೆ ವಿಜಯಪುರಬಿ.ಎಲ್.ಡಿ.ಇ ಸಂಸ್ಥೆಯ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ ವ್ಯವಹಾರ ಅಧ್ಯಯನ ಮತ್ತು ಸಂಶೋಧನೆ ಕೇಂದ್ರ ಮತ್ತು ಬಿಸ್ಲೇರಿ ಇಂಟರನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ಜೊತೆ ಪಾನೀಯಗಳ ಪ್ಲಾಸ್ಟಿಕ್ ಬಾಟಲ್ ಮರುಬಳಕೆ ಕುರಿತು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.ಪನ ದಿನಾಚರಣೆ ಅಂಗವಾಗಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪರವಾಗಿ ವ್ಯವಹಾರ ಅಧ್ಯಯನ ಮತ್ತು ಸಂಶೋಧನೆ ಕೇಂದ್ರದ ನಿರ್ದೇಶಕ ಡಾ.ಚಿದಾನಂದ ಬ್ಯಾಹಟ್ಟಿ ಮತ್ತು ಬಿಸ್ಲೇರಿ ಕಂಪನಿಯ ಪರವಾಗಿ ಬಿಸ್ಲೇರಿ ಸಿಎಸ್ಆರ್ ವಿಭಾಗದ ದಕ್ಷಿಣ ವಲಯ ದಿನಕರನ್.ಜೆ ಮತ್ತು ಎಕ್ಸಿಕ್ಯೂಟಿವ್ ಪ್ರಜ್ವಲ್.ವಿ.ಎಸ್ ಒಡಂಬಡಿಕೆಗೆ ಸಹಿ ಹಾಕಿದರು.
ಈ ಮೂಲಕ ಪರಸರ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸಲಾಗುತ್ತಿದೆ. ಈ ಒಡಂಬಡಿಕೆಯಿಂದಾಗಿ ಕಾಲೇಜಿನ ವಿದ್ಯಾರ್ಥಿಗಳು ಪರಿಸರಕ್ಕೆ ಪೂರಕವಾದ ನಾನಾ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಲು ಮತ್ತು ವಿಜಯಪುರ ನಗರದಲ್ಲಿರುವ ಪಾನೀಯಕ್ಕೆ ಬಳಸುವ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಮರುಬಳಕೆ ಮಾಡಲು ಅನುಕೂಲವಾಗಲಿದೆ.
ಈ ಒಡಂಬಡಿಕೆ ಸಂದರ್ಭದಲ್ಲಿ ಡಾ.ಮುರುಗೇಶ ಪಟ್ಟಣಶೆಟ್ಟಿ, ಡಾ.ಅಶ್ವಿನಿ ಯರನಾಳ, ಡಾ.ಮಹಾಂತೇಶ ಕನಮಡಿ, ಲಕ್ಷ್ಮಣ ಪವಾರ, ಗಂಗಾಧರ ಮಮದಾಪುರ, ರವಿ ಚವ್ಹಾಣ, ವಿನಯ ಡರ್ಬಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.