ಸೋಯಾಬೀನ್ ಖರೀದಿ ಕೇಂದ್ರಕ್ಕೆ ಚಾಲನೆ

KannadaprabhaNewsNetwork |  
Published : Nov 03, 2025, 02:15 AM IST
2ಎಚ್‌ಯುಬಿ29ಸೋಯಾಬಿನ್‌ ಖರೀದಿ ಕೇಂದ್ರಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಶಾಸಕ ಎಂ.ಆರ್. ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಸಹಕಾರಿ ಸಂಘಗಳಿಗೆ ಯಾವುದೇ ಅನುದಾನ ಇರುವುದಿಲ್ಲ. ಒಂದೊಂದು ರೂಪಾಯಿಯೂ ಬಹಳ ಮುಖ್ಯವಾಗಿದ್ದು ಹೆಚ್ಚು-ಕಡಿಮೆಯಾದರೂ ದಿವಾಳಿ ಆಗುವ ಸಂಭವ ಬರುತ್ತದೆ. ಹೀಗಾಗಿ, ಸಹಕಾರಿ ಸಂಘಗಳು ಆರ್ಥಿಕ ಶಿಸ್ತು ಕಾಪಾಡಿಕೊಳ್ಳಬೇಕು.

ಕುಂದಗೋಳ:

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಬೆಂಬಲ ಬೆಲೆ ಯೋಜನೆಯಡಿ ಸೋಯಾಬೀನ್ ಖರೀದಿ ಕೇಂದ್ರಕ್ಕೆ ಶನಿವಾರ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಚಾಲನೆ ನೀಡಲಾಯಿತು. ಈ ಕೇಂದ್ರದ ಮೂಲಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ರೈತರಿಂದ ಬೆಂಬಲ ಬೆಲೆಯಲ್ಲಿ ಸೋಯಾಬೀನ್ ಖರೀದಿಸಲಿದೆ.

ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದ ಶಾಸಕ ಎಂ.ಆರ್. ಪಾಟೀಲ್, ರೈತರು ಮಾನದಂಡ ಪಾಲಿಸಿ ತಮ್ಮ ಬೆಳೆ ಮಾರಾಟ ಮಾಡಿ ಯೋಜನೆಯ ಲಾಭ ಪಡೆಯಬೇಕು ಎಂದರು.

ಸಹಕಾರಿ ಸಂಘಗಳಿಗೆ ಯಾವುದೇ ಅನುದಾನ ಇರುವುದಿಲ್ಲ. ಒಂದೊಂದು ರೂಪಾಯಿಯೂ ಬಹಳ ಮುಖ್ಯವಾಗಿದ್ದು ಹೆಚ್ಚು-ಕಡಿಮೆಯಾದರೂ ದಿವಾಳಿ ಆಗುವ ಸಂಭವ ಬರುತ್ತದೆ. ಹೀಗಾಗಿ, ಸಹಕಾರಿ ಸಂಘಗಳು ಆರ್ಥಿಕ ಶಿಸ್ತು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಬೆಲೆ ನಿಗದಿ:

ಸರಾಸರಿ ಗುಣಮಟ್ಟದ ಸೋಯಾಬೀನ್‌ಗೆ ಪ್ರತಿ ಕ್ವಿಂಟಲ್‌ಗೆ ₹5328 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಖರೀದಿ ಪ್ರಮಾಣವನ್ನು ಪ್ರತಿ ರೈತರಿಗೆ ಗರಿಷ್ಠ 20 ಕ್ವಿಂಟಲ್‌ಗೆ (ಪ್ರತಿ ಎಕರೆಗೆ 5 ಕ್ವಿಂಟಲ್) ಮಿತಿಗೊಳಿಸಲಾಗಿದೆ. ರೈತರು ಸೆ. 29ರಿಂದ ಡಿ. 17ರ ವರೆಗೆ ನೋಂದಣಿ ಮಾಡಿಸಿಕೊಳ್ಳಬಹುದು. ಖರೀದಿ ಪ್ರಕ್ರಿಯೆ ಸೆ. 29ರಂದು ಪ್ರಾರಂಭವಾಗಿ ಡಿ. 27ರಂದು ಮುಕ್ತಾಯಗೊಳ್ಳಲಿದೆ. ಹೆಚ್ಚಿನ ಮಾಹಿತಿಗೆ 9986335363, 7975282113 ಸಂಪರ್ಕಿಸಬಹುದು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ತಿಳಿಸಿದೆ.

ಈ ವೇಳೆ ಸಹಕಾರಿ ಧುರೀಣರಾದ ಅರವಿಂದ ಕಟಗಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಇಂಗಳಳ್ಳಿ, ಉಪಾಧ್ಯಕ್ಷ ಸಂತೋಷ ಭೋವಿ, ಸದಸ್ಯರಾದ ರವಿ ಬಾಳಿಕಾಯಿ, ಶಿವರಾಜ ಕಟಗಿ, ಬಸವರಾಜ ಬ್ಯಾಹಟಿ, ಮೈಲಾರಪ್ಪ ತಳವಾರ, ಶಂಕ್ರಣ್ಣ ಗೌರಿ, ಸಿದ್ದಪ್ಪ ಅರಳಿಕಟ್ಟಿ, ಶಂಕರ ಪಟ್ಟಣಶೆಟ್ಟಿ ಮುಖಂಡರಾದ ಉಮೇಶ ಹೆಬಸೂರ, ದಾನಪ್ಪ ಗಂಗಾಯಿ, ಲಕ್ಷ್ಮಣ ಚುಳಕಿ, ಶೇಖಣ್ಣ ಬಾಳಿಕಾಯಿ, ಮಲ್ಲಪ್ಪ ತಡಸದ, ಬಸವರಾಜ ಹರವಿ, ಅರ್ಜುನ ತಳವಾರ, ಶಿವಾನಂದ ಪೂಜಾರ, ಸಿಇಒ ಸಂಜು ಕುಲಕರ್ಣಿ ಸೇರಿದಂತೆ ಹಲವು ರೈತರು ಇದ್ದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ