ಫೆಬ್ರವರಿ ಮಧ್ಯಕ್ಕೆ ಚಾಲಕ ರಹಿತಮೆಟ್ರೋ ರೈಲು ಆಗಮನ ನಿರೀಕ್ಷೆ

KannadaprabhaNewsNetwork |  
Published : Jan 25, 2024, 02:09 AM IST
ಹಳದಿ ಮಾರ್ಗದ ಮೆಟ್ರೋ ಮಾದರಿ | Kannada Prabha

ಸಾರಾಂಶ

ಚಾಲಕ ರಹಿತ ಮೆಟ್ರೋ ಬೋಗಿ ಹಳದಿ ಮಾರ್ಗಕ್ಕೆ ಫೆಬ್ರವರಿ ಮಧ್ಯಾಂತರದಲ್ಲಿ ಆಗಮಿಸುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎಲೆಕ್ಟ್ರಾನಿಕ್ಸ್‌ ಸಿಟಿಗೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ ಆರ್‌.ವಿ.ರಸ್ತೆ-ಬೊಮ್ಮಸಂದ್ರ (18.82 ಕಿ.ಮೀ.) ಹಳದಿ ಮಾರ್ಗಕ್ಕೆ ಚಾಲಕ ರಹಿತ ರೈಲು ಫೆಬ್ರವರಿ ಮಧ್ಯಂತರ ಅಥವಾ ಅಂತ್ಯಕ್ಕೆ ಚೆನ್ನೈ ಬಂದರಿಗೆ ತಲುಪುವ ಸಾಧ್ಯತೆಯಿದ್ದು, ಅಲ್ಲಿಂದ ರಸ್ತೆ ಮೂಲಕ ಹೆಬ್ಬಗೋಡಿ ಡಿಪೋಗೆ ರಸ್ತೆ ಮೂಲಕ ಬರಲಿದೆ.

ಬಿಎಂಆರ್​ಸಿಎಲ್ ಅಧಿಕಾರಿಗಳ ತಂಡ ರೈಲಿನ ಪರೀಕ್ಷೆಗಳಿಗಾಗಿ ಚೀನಾಕ್ಕೆ ಭೇಟಿ ನೀಡಿತ್ತು. ಕಳೆದ ಜ.20ರಂದು ಚೀನಾದಿಂದ ರೈಲನ್ನು ಕಳುಹಿಸಲಾಗಿದೆ. ಈ ರೈಲು ಬೆಂಗಳೂರಿಗೆ ತಲುಪಿದ ಬಳಿಕ ಸುಮಾರು ಮೂರು ತಿಂಗಳು ಪ್ರಾಯೋಗಿಕ ಚಲನೆ ಮಾಡಲಾಗುವುದು. ಇನ್ನೊಂದು ರೈಲು ಕೂಡ ಶೀಘ್ರವೇ ಚೀನಾದಿಂದ ಬರಲಿದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಟ್ಟೂ 216 ಕೋಚ್‌ಗಳನ್ನು ಸಿಆರ್‌ಆರ್‌ಸಿ ನಿಂಜಾಂಗ್‌ ಪುಜ್ಹೆನ್‌ ಈ ರೈಲುಗಳನ್ನು ಪೂರೈಸಲು ಒಪ್ಪಂದವಾಗಿದ್ದು, ಮೂಲ ಮಾದರಿಯ ಎರಡು ರೈಲನ್ನು ಚೀನಾ ನಿರ್ಮಿಸಿಕೊಡಲಿದೆ. ಇದರ ಸಹ ಸಂಸ್ಥೆಯಾಗಿರುವ ಕೋಲ್ಕತ್ತಾದ ತೀತಾಘರ್‌ ರೈಲ್ ಫ್ಯಾಕ್ಟರಿ ಉಳಿದ ಕೋಚ್‌ಗಳನ್ನು ನಿರ್ಮಿಸಿಕೊಡಲಿದೆ. ಫೆಬ್ರವರಿಗೆ ಈ ರೈಲು ಬಂದರೂ ಸೆಪ್ಟೆಂಬರ್‌ನಿಂದ ಹಳದಿ ಮಾರ್ಗ ಜನಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಚಾಲಕ ರಹಿತ ರೈಲಿನ ವಿಶೇಷತೆ:

ಚಾಲಕ ರಹಿತ ರೈಲು ಇದಾಗಿದ್ದು, ಈಗ ಸಂಚರಿಸುತ್ತಿರುವ ರೈಲಿನ ವಿನ್ಯಾಸಕ್ಕಿಂತ ಸಂಪೂರ್ಣ ಭಿನ್ನವಾಗಿರಲಿದೆ. ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ರೂಮ್​ ಮೂಲಕ ನಿರ್ವಹಿಸಲಾಗುತ್ತದೆ. ಚಾಲಕ ಇಲ್ಲದೇ ಈ ಮೆಟ್ರೋ ಗಂಟೆಗೆ 80 ಕಿಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಇನ್ನುಳಿದಂತೆ ಎಲ್ಲ ಬೋಗಿಗಳಲ್ಲಿ ಸಿಸಿ ಕ್ಯಾಮೆರಾ ಬೋಗಿಗಳಲ್ಲಿ ಅಳವಡಿಸಲಾಗಿದೆ. ಆದರೆ, ಆರಂಭದಿಂದಲೇ ಚಾಲಕ ರಹಿತ ರೈಲು ಸಂಚರಿಸುವುದು ಅನುಮಾನ, ಎರಡು ವರ್ಷ ಚಾಲಕರು ಇದನ್ನು ಚಾಲನೆ ಮಾಡಲಿದ್ದು, ಬಳಿಕ ಚಾಲಕ ರಹಿತ ವ್ಯವಸ್ಥೆ ಅನುಷ್ಠಾನಗೊಳ್ಳುವ ಸಾಧ್ಯತೆಯಿದೆ.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ