- ಡ್ರೋನ್ ಬಳಸಿ ಸೋಯಾ ಅವರೇ ಬೆಳೆಗೆ ಸಿಂಪರಣೆ ತರಬೇತಿ ಕಾರ್ಯಕ್ರಮ
- - -- - -
- ಕೃಷಿ ಡ್ರೋನ್ ಬಳಸಿ ಸುಮಾರು 21 ಎಕರೆಯಷ್ಟು ಸಿಂಪರಣೆ ಮಾಡುವ ಗುರಿ- ಮುಂದಿನ ದಿನಗಳಲ್ಲಿ ಕೂಲಿ ಆಳುಗಳ ಸಮಸ್ಯೆ ನಿವಾರಣೆಗೆ ಡ್ರೋನ್ ಪರಿಹಾರ
- ಕೃಷಿಯಲ್ಲಿ ಡ್ರೋನ್ ಬಳಸಿದರೆ ಹೆಚ್ಚು ನಿಖರತೆ, ಉತ್ಪಾದನಾ ವೆಚ್ಚ ಕಡಿಮೆ ಸಾಧ್ಯ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಕೃಷಿಯಲ್ಲಿ ಡ್ರೋನ್‌ಗಳನ್ನು ಬಳಸುವುದರಿಂದ ಸಮಯ, ನೀರಿನ ಉಳಿತಾಯ ಜೊತೆಗೆ ನಿಖರತೆ ಹಾಗೂ ಉತ್ಪಾದನಾ ವೆಚ್ಚವನ್ನೂ ಕಡಿಮೆ ಮಾಡಬಹುದು ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ, ಬೇಸಾಯ ತಜ್ಞ ಮಲ್ಲಿಕಾರ್ಜುನ ಹೇಳಿದರು.ಚನ್ನಗಿರಿ ತಾಲೂಕಿನ ಶಿವಕೊಳೆನೂರಿನಲ್ಲಿ ದಾವಣಗೆರೆಯ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಸಂತೆಬೆನ್ನೂರು ರೈತ ಸಂಪರ್ಕ ಕೇಂದ್ರ, ಚನ್ನಗಿರಿ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಕೃಷಿ ಡ್ರೋನ್ ಮೂಲಕ ಸೋಯಾ ಅವರೇ ಬೆಳೆಗೆ ಸಿಂಪರಣೆ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದ್ವಿದಳ ಧಾನ್ಯಗಳ ಬೆಳೆಗಳ ಉತ್ಪಾದನೆ, ಉತ್ಪಾದಕತೆ ಹೆಚ್ಚಿಸಲು ಅಧಿಕ ಇಳುವರಿ ಕೊಡುವ ತಳಿಗಳ ಪರಿಚಯದ ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ರೈತರಿಗೆ ಪರಿಚಯಿಸಿದರೆ ಅನುಕೂಲ ಆಗುತ್ತದೆ. ಅದರಲ್ಲೂ ಕೃಷಿಯಲ್ಲಿ ಡ್ರೋನ್ ಬಳಸಿ, ಸಿಂಪರಣೆ ಮಾಡುವುದರಿಂದ ಹೆಚ್ಚು ನಿಖರತೆ ಹಾಗೂ ಉತ್ಪಾದನಾ ವೆಚ್ಚವನ್ನೂ ಕಡಿಮೆ ಮಾಡಬಹುದು ಎಂದು ವಿವರಿಸಿದರು.ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ ಮಾತನಾಡಿ, ಕೃಷಿಯಲ್ಲಿ ನವೀನ ತಾಂತ್ರಿಕತೆಗಳನ್ನು ಬಳಸಿಕೊಂಡರೆ ಬೆಳೆಗಳ ಇಳುವರಿ ಹೆಚ್ಚಿಸಬಹುದು. ಕೃಷಿ ಡ್ರೋನ್ ಬಳಸಿ ಸುಮಾರು 21 ಎಕರೆಯಷ್ಟು ಸಿಂಪರಣೆ ಮಾಡುವ ಗುರಿ ಹೊಂದಲಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಅರುಣ ಮಾತನಾಡಿ, ಮುಂದಿನ ದಿನಗಳಲ್ಲಿ ಕೂಲಿ ಆಳುಗಳ ಸಮಸ್ಯೆ ನಿವಾರಣೆಗೆ ಡ್ರೋನ್ ಪರಿಹಾರವಾಗುತ್ತದೆ. ಕೃಷಿ ಇಲಾಖೆ ಸೌಲಭ್ಯಗಳ ಬಗ್ಗೆ ರೈತರು ಮಾಹಿತಿ ಹೊಂದಿರಬೇಕು ಎಂದು ಸಲಹೆ ನೀಡಿದರು.ಮಣ್ಣು ವಿಜ್ಞಾನಿ ಎಚ್.ಎಂ. ಸಣ್ಣಗೌಡರು, ಕೃಷಿ ಅಧಿಕಾರಿ ಮೆಹತಾಬ್ ಆಲಿ, ಇಲಾಖೆ ಸಿಬ್ಬಂದಿ, ಪ್ರಗತಿಪರ ರೈತರು ಭಾಗವಹಿಸಿದ್ದರು.
- - --12ಕೆಡಿವಿಜಿ21, 22:
ಚನ್ನಗಿರಿ ತಾಲೂಕು ಶಿವಕೊಳೆನೂರಿನಲ್ಲಿ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆ, ರೈತ ಸಂಪರ್ಕ ಕೇಂದ್ರ ಸಂತೇಬೆನ್ನೂರು, ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಕೃಷಿ ಡ್ರೋನ್ ಮೂಲಕ ಸೋಯಾ ಅವರೆ ಬೆಳೆಗೆ ಸಿಂಪರಣೆ ಹಾಗೂ ತರಬೇತಿ ಕಾರ್ಯಕ್ರಮ ನಡೆಯಿತು.