ಕನ್ನಡಪ್ರಭ ವಾರ್ತೆ, ಚಾಮರಾಜನಗರ
ನಂಜೇದೇವಪುರ ಗ್ರಾಮಸ್ಥರು ದುಬಾರೆ ಆನೆ ಶಿಬಿರದಿಂದ ಬಂದ ಈಶ್ವರ್ ಹಾಗೂ ಲಕ್ಷ್ಮಣನಿಗೆ ಪೂಜೆ ಸಲ್ಲಿಸಿ ಎಲ್ಲವೂ ಒಳ್ಳೆಯದಾಗಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ. 42 ವರ್ಷದ ಈಶ್ವರ 40ಕ್ಕೂ ಹೆಚ್ಚು ಕೂಂಬಿಂಗ್ ನಲ್ಲಿ ಭಾಗಿಯಾಗಿದ್ದು
ಈಶ್ವರನ ಮಾವುತರಾಗಿ ವಿಶ್ವನಾಥ್ ಹಾಗೂ ಮಂಜುನಾಥ್ ಬಂದಿದ್ದಾರೆ.ಲಕ್ಷ್ಮಣನಿಗೆ 45 ವರ್ಷವಾಗಿದ್ದು 50ಕ್ಕೂ ಹೆಚ್ಚು ಕೂಂಬಿಂಗ್ ನಲ್ಲಿ ಭಾಗಿಯಾಗಿದ್ದು ಲಕ್ಷ್ಮಣನ ಮಾವುತರಾಗಿ ಸಂಜು ಹಾಗೂ ಸುರೇಶ ಆಗಮಿಸಿದ್ದಾರೆ. ಸೋಮವಾರ ಸಂಜೆಯಿಂದ ಎರಡನೇ ಹಂತದ ಕೂಂಬಿಂಗ್ ಕಾರ್ಯಾಚರಣೆ ನಡೆಯಲಿದೆ.
5 ಹುಲಿಗಳು ಪತ್ತೆಯಾದ ಸಂಬಂಧ ಬಿಆರ್ ಟಿ ಚಾಮರಾಜನಗರ ಬಫರ್ ವಲಯದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು ಡ್ರೋಣ್ ನಲ್ಲಿ ಹುಲಿಗಳ ಫೋಟೋ ಸೆರೆಯಾಗಿದೆ. ಗ್ರಾಮದ ಕ್ವಾರಿ ಸಮೀಪ ತಾಯಿ ಹುಲಿ ಜೊತೆ 4 ಹುಲಿಗಳು ಚಿನ್ನಾಟ ಆಡುತ್ತಿರುವ ದೃಶ್ಯ ಸೆರೆಯಾಗಿದೆ. ಒಂದರಮೇಲೊಂದು ಹುಲಿಗಳು ಮಲಗಿದ್ದು ಡ್ರೋಣ್ ಕಾರ್ಯಾಚರಣೆ ವೇಳೆ ದೃಶ್ಯ ಸೆರೆಯಾಗಿದೆ. ಸದ್ಯ, ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಿದೆ.