ರಾಜ್ಯದಲ್ಲಿ ಮಳೆಗೂ, ಅಭಿವೃದ್ಧಿಗೂ ಬರ: ಎಚ್ಡಿಕೆ

KannadaprabhaNewsNetwork | Published : Apr 20, 2024 1:01 AM

ಸಾರಾಂಶ

ಈ ಬಾರಿ ಮಳೆ ಕಡಿಮೆಯಾಗಿದ್ದರಿಂದ ಎಲ್ಲೆಡೆ ಬರಗಾಲವಿದೆ ಹಾಗೇ ರಾಜ್ಯದ ಭಾಗದಲ್ಲೂ ಅಭಿವೃದ್ಧಿಗೂ ಬರಗಾಲವಿದೆ. ಕರ್ನಾಟಕದ ಇತಿಹಾಸದಲ್ಲಿ ದೊಡ್ಡ ಪ್ರಮಾಣ ಸಾಲಹೊತ್ತ ಸರ್ಕಾರವನ್ನು ಎಂದೂ ನೋಡಿಲ್ಲ.

ಚಳ್ಳಕೆರೆ: ಈ ಬಾರಿ ಮಳೆ ಕಡಿಮೆಯಾಗಿದ್ದರಿಂದ ಎಲ್ಲೆಡೆ ಬರಗಾಲವಿದೆ ಹಾಗೇ ರಾಜ್ಯದ ಭಾಗದಲ್ಲೂ ಅಭಿವೃದ್ಧಿಗೂ ಬರಗಾಲವಿದೆ. ಕರ್ನಾಟಕದ ಇತಿಹಾಸದಲ್ಲಿ ದೊಡ್ಡ ಪ್ರಮಾಣ ಸಾಲಹೊತ್ತ ಸರ್ಕಾರವನ್ನು ಎಂದೂ ನೋಡಿಲ್ಲ. ಅಧಿಕಾರಕ್ಕೆ ಬಂದು ಕೇವಲ 11 ತಿಂಗಳ ಅವಧಿಯಲ್ಲೇ ೧.೫೫ ದಶಲಕ್ಷ ಕೋಟಿ ರು. ಸಾಲವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಶುಕ್ರವಾರ ಪರಶುರಾಮಪುರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ನಾನು ರಾಜ್ಯದ ಮುಖ್ಯಮಂತ್ರಿಯಾದಾಗ ರೈತ ಸಾಲಮನ್ನಾ ಮಾಡಿದ್ದೆ, ರೈತ ಜಮೀನಿಗೆ ಪಂಪ್‌ಸೆಟ್ ಸೌಲಭ್ಯ ಪಡೆಯಲು ಕೇವಲ ೫ ಸಾವಿರ ರು. ಪಾವತಿಸಬೇಕಿದ್ದು, ಪ್ರಸ್ತುತ ಸರ್ಕಾರ ಅದನ್ನು ೨.೫೦ ಲಕ್ಷ ರು.ಗೆ ಏರಿಸಿದೆ. ವಿಶೇಷವಾಗಿ ರೈತರಿಗೆ ಅನುಕೂಲವಿರುವ ಟ್ರಾನ್ಸ್‌ಫಾರ್ಮರಗಳು ಎಲ್ಲೂ ಸಹ ರೈತರಿಗೆ ಲಭ್ಯವಿಲ್ಲ. ರೈತರ ಬದುಕನ್ನು ದುಸ್ಥರಗೊಳಿಸಿದ್ದೇ ಈ ಸರ್ಕಾರದ ಸಾಧನೆ ಎಂದರು.

ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯದ ಮಾಜಿ ಮುಖ್ಯಮಂತ್ರಿ, ಸ್ನೇಹಜೀವಿ, ನೇರ ನಡೆ, ನುಡಿ ಉಳ್ಳವರಾದ ಕುಮಾರಸ್ವಾಮಿ, ಚುನಾವಣಾ ಪ್ರಚಾರಕ್ಕೆ ಆಗಮಿಸಿ ಕಾರ್ಯಕರ್ತರಿಗೆ ಮುಖಂಡರಿಗೆ ಮಾರ್ಗದರ್ಶನ ಮಾಡಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರ ಹಿಂದುಳಿದ ಕ್ಷೇತ್ರವಾಗಿದ್ದು, ಇದರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಎಂದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾ ಬಿಜೆಪಿ ಅದ್ಯಕ್ಷ ಎ.ಮುರುಳಿ, ಜಿಲ್ಲಾ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಜಿಲ್ಲಾ ರೈತ ಮೊರ್ಚಾ ಅಧ್ಯಕ್ಷ ವೆಂಕಟೇಶ್‌ ಯಾದವ್, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ, ತಾಲ್ಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಯುವ ಮುಖಂಡ ಎಂ.ರವೀಶ್, ಕೆ.ಟಿ.ಕುಮಾರಸ್ವಾಮಿ, ಅನಿಲ್‌ ಕುಮಾರ್, ಎಚ್.ಆನಂದಪ್ಪ, ಚನ್ನಿಗರಾಯ, ಸೋಮಶೇಖರ್‌ ಮಂಡಿಮಠ, ಬಿ.ಎಸ್.ಶಿವಪುತ್ರಪ್ಪ, ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಜಯಪಾಲಯ್ಯ, ನಗರಸಭಾ ಸದಸ್ಯರಾದ ಸಿ.ಶ್ರೀನಿವಾಸ್, ವಿ.ವೈ.ಪ್ರಮೋದ್ ಇದ್ದರು.

Share this article