ಮಾದಕ ವ್ಯಸನ ಸ್ವಾಸ್ಥ್ಯ ಸಮಾಜಕ್ಕೆ ಮಾರಕ : ನ್ಯಾ. ವಿ. ಹನುಮಂತಪ್ಪ

KannadaprabhaNewsNetwork |  
Published : Feb 15, 2025, 12:33 AM IST
ಚಿಕ್ಕಮಗಳೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರವನ್ನು ನ್ಯಾ. ಹನುಮಂತಪ್ಪ ಅವರು ಉದ್ಘಾಟಿಸಿ ಮಾತನಾಡಿದರು. ಮಹಾಂತೇಶ್‌ ಭಜಂತ್ರಿ, ಲೋಕೇಶ್ವರಪ್ಪ, ಶೈಲಜಾ, ಪ್ರಕಾಶ್‌ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಮಾದಕ ವಸ್ತು ಹಾಗೂ ನಶೆ ಪದಾರ್ಥಗಳು ಕೇವಲ ಪುರುಷರಿಗಷ್ಟೇ ಸೀಮಿತಗೊಳ್ಳದೆ ಇತ್ತೀಚೆಗೆ ಮಹಿಳೆಯರು, ಮಕ್ಕಳು ಈ ಚಟಗಳಿಗೆ ಬಲಿಯಾಗುತ್ತಿರುವುದು ಸ್ವಾಸ್ಥ್ಯ ಸಮಾಜಕ್ಕೆ ಮಾರಕ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ.ಹನುಮಂತಪ್ಪ ಹೇಳಿದರು.

ನಶೆ ಮುಕ್ತ ಭಾರತ ನಿರ್ಮಾಣ ಅಭಿಯಾನ । ಮಾದಕ ವಸ್ತುಗಳ ತಡೆಗಟ್ಟುವಿಕೆ,ಕೌಶಲ್ಯ ಕುರಿತು ತರಬೇತಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಾದಕ ವಸ್ತು ಹಾಗೂ ನಶೆ ಪದಾರ್ಥಗಳು ಕೇವಲ ಪುರುಷರಿಗಷ್ಟೇ ಸೀಮಿತಗೊಳ್ಳದೆ ಇತ್ತೀಚೆಗೆ ಮಹಿಳೆಯರು, ಮಕ್ಕಳು ಈ ಚಟಗಳಿಗೆ ಬಲಿಯಾಗುತ್ತಿರುವುದು ಸ್ವಾಸ್ಥ್ಯ ಸಮಾಜಕ್ಕೆ ಮಾರಕ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ.ಹನುಮಂತಪ್ಪ ಹೇಳಿದರು.

ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ಕೌಶಲ್ಯ ಕುರಿತು ನಶಾಮುಕ್ತ ಭಾರತ ನಿರ್ಮಾಣದ ಅಭಿಯಾನದಡಿ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶ್ರೀ ಶಕ್ತಿ ಮದ್ಯ ವ್ಯಸನಿಗಳ ಸಮಗ್ರ ಪುನರ್ ವಸತಿ ಕೇಂದ್ರದ ಸಹಯೋಗದಲ್ಲಿ ಸ್ವಯಂ ಸೇವಕರಿಗೆ ಶುಕ್ರವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೆಟ್ಟಿಗೆ ಅಂಗಡಿ ಗಳಲ್ಲಿ ರಾಜಾರೋಷವಾಗಿ ದೊರೆಯುತ್ತಿರುವ ಮದ್ಯ ಮಾರಾಟದಿಂದ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶದ ನಿವಾಸಿಗಳು ದುಶ್ಚಟಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೇ ಅಮೂಲ್ಯ ಆರೋಗ್ಯ ಸಂಪತ್ತು ಕಳೆದುಕೊಳ್ಳುವ ಜೊತೆಗೆ ಅಲ್ಪಾಯುಷ್ಯದಲ್ಲಿ ಪ್ರಾಣ ಕಳೆದುಕೊಳ್ಳುವ ಸ್ಥಿತಿ ತಲೆದೋರುವುದು ಶೋಚನೀಯ ಎಂದರು.

ಇನ್ನೊಂದೆಡೆ ಚುನಾವಣೆಗಳು ಎದುರಾದರೂ ಕೂಡಾ ಮದ್ಯದ ಪಾರ್ಟಿಗಳು ಹೆಚ್ಚಾಗುತ್ತವೆ. ಹಾಗಾಗಿ ಮನಸ್ಸಿನ ಮೇಲೆ ಹತೋಟಿ ಕಲಿತಲ್ಲಿ ಎಂಥಹ ಕ್ಷಣದಲ್ಲೂ ಹಾದಿ ತಪ್ಪಲು ಸಾಧ್ಯವಿಲ್ಲ ಎಂದ ಅವರು, ಚಂಚಲತೆ, ದುಶ್ಚಟಗಳ ಆಸೆಗೆ ಕಡಿವಾಣ ಹಾಕುವ ಆತ್ಮಸ್ಥೈರ್ಯದ ಸಂಕಲ್ಪ ಮಾಡಿಕೊಳ್ಳಬೇಕಿದೆ ಎಂದು ಕಿವಿ ಮಾತು ಹೇಳಿದರು. ಇತ್ತೀಚೆಗೆ ಶಾಲಾ, ಕಾಲೇಜುಗಳಲ್ಲಿ ಮದ್ಯ ವ್ಯಸನಿಗಳ ರುಚಿ ಹೆಚ್ಚಾಗಿವೆ. ಸ್ನೇಹಿತರೊಟ್ಟಿಗೆ ತೆರಳಿ ಒಮ್ಮೆ ಅಭ್ಯಾಸಿದರೆ, ಪ್ರತಿದಿನವು ರುಚಿ ಸವಿಯಲು ಹೋಗುವುದರಿಂದ ಒಂದು ಭಾಗವಾಗಿ ಪರಿಗಣಿಸಿ ಎಳೆ ವಯಸ್ಸಿನಲ್ಲಿ ಮದ್ಯ ಹಾಗೂ ನಶೆ ಪದಾರ್ಥಗಳಿಗೆ ಬಲಿಯಾಗಿ ಬದುಕು ದುಸ್ತರವಾಗುವ ಸಾಧ್ಯತೆಯಿದ್ದು ಮೊದಲು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.ಆ ನಿಟ್ಟಿನಲ್ಲಿ ಮದ್ಯ ಹಾಗೂ ಮಾದಕ ವ್ಯಸನಿಗಳಿಗೆ ಆಯೋಜಿಸಿರುವ ತರಬೇತಿ ಶಿಬಿರದಲ್ಲಿ ಭಾಗಿಯಾಗಿ ಕೆಲವು ಮಂದಿ ಯಶಸ್ವಿ ಗೊಂಡರೆ ಸದೃಢ ಭಾರತ ನಿರ್ಮಿಸಲು ಸಾಧ್ಯ. ಹೀಗಾಗಿ ಸಮಾಜದಲ್ಲಿನ ಕೆಡುಕು ಚಟಗಳಿಗೆ ಬಲಿಯಾಗು ವವರನ್ನು ಗುರುತಿಸಿ ಶಕ್ತಿ ಕೇಂದ್ರದಲ್ಲಿ ನೋಂದಾಯಿಸಿಕೊಂಡು ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಪುನರ್ವಸತಿ ಕೇಂದ್ರದ ರಾಜ್ಯ ಸಂಯೋಜಕಿ ಶೈಲಜಾ ಮಾತನಾಡಿ, ದುಶ್ಚಟಗಳು ಯುವ ಸಮುದಾಯಕ್ಕೆ ಹೆಚ್ಚು ಕಾಡುತ್ತಿದೆ. ಹಲವಾರು ಕಡೆಗಳಲ್ಲಿ ತಿಳುವಳಿಕೆ ಮೂಡಿಸಲು ಕೇಂದ್ರ ಮುಂದಾಗಿದ್ದು ದುಶ್ಚಟದಿಂದ ಬಳಲುತ್ತಿರುವ ವ್ಯಕ್ತಿ ಗಳಿಗೆ ಮನ ಪರಿವರ್ತನೆಗೊಳಿಸಿ, ದುಶ್ಚಟದ ನಂತರ ಜೀವನವಿದೆ ಎಂಬುದನ್ನು ಅರಿವು ಮೂಡಿಸುತ್ತಿದೆ ಎಂದು ಹೇಳಿದರು.ಪ್ರಸ್ತುತ ವಸತಿ ಕೇಂದ್ರದಲ್ಲಿ ಧ್ಯಾನ, ಯೋಗ, ಆಯುರ್ವೇದ ಚಿಕಿತ್ಸೆ, ಮದ್ಯಪಾನ ವ್ಯಸನಮುಕ್ತಿ ಚಿಕಿತ್ಸೆ, ವೈಯಕ್ತಿಕ ಆಪ್ತ ಸಮಾಲೋಚನೆ, ಚಿಕಿತ್ಸೆಯ ನಂತರ ಪುನರ್‌ ವಸತಿ, ಕುಟುಂಬ ಸಲಹಾ ವಿಭಾಗ, ಯೋಗ ಮತ್ತು ಪ್ರಕೃತಿ ಸೇರಿದಂತೆ ಹಲವಾರು ಚಿಕಿತ್ಸೆಯನ್ನು ಕೇಂದ್ರ ಒದಗಿಸುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹಾಂತೇಶ್ ಭಜಂತ್ರಿ, ಅಧಿಕಾರಿ ಸಂತೋಷ್, ವಿಕಲಚೇತನ ಇಲಾಖೆ ಅಧಿಕಾರಿ ವೀರಭದ್ರಯ್ಯ ಮಾಜೇಗೌಡ, ಎಸ್‌ಪಿಐಡಿ ಸಂಸ್ಥೆ ಕಾರ್ಯದರ್ಶಿ ಕೆ.ಪ್ರಕಾಶ್, ರಾಜ್ಯ ಸಂಪನ್ಮೂಲ ವ್ಯಕ್ತಿ ಬಾಲಕೃಷ್ಣ ರಾಜ್, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಲೋಕೇಶ್ವರಪ್ಪ ಉಪಸ್ಥಿತರಿದ್ದರು.14 ಕೆಸಿಕೆಎಂ 4 ಚಿಕ್ಕಮಗಳೂರಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತರಬೇತಿ ಕಾರ್ಯಾಗಾರವನ್ನು ನ್ಯಾ. ಹನುಮಂತಪ್ಪ ಉದ್ಘಾಟಿಸಿ ಮಾತನಾಡಿದರು. ಮಹಾಂತೇಶ್‌ ಭಜಂತ್ರಿ, ಲೋಕೇಶ್ವರಪ್ಪ, ಶೈಲಜಾ, ಪ್ರಕಾಶ್‌ ಇದ್ದರು.

------------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ