ದೃತಿ ಎಸ್. ಅವರು ೯ ವರ್ಷದ ವಯೋಮಾನದೊಳಗಿನ ವಿಭಾಗದ ಸೋಲೋ ಮತ್ತು ಟೀಮ್ ಈವೆಂಟ್‌ನ ‘ಫ್ರೀ ಸ್ಟೈಲ್’ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಎರಡರಲ್ಲೂ ಪ್ರಥಮ ಸ್ಥಾನ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಈ ಅದ್ಭುತ ಸಾಧನೆಯು ಅವರ ಅಸಾಧಾರಣ ಪ್ರತಿಭೆ, ಸಮರ್ಪಣಾ ಮನೋಭಾವ ಹಾಗೂ ಆತ್ಮವಿಶ್ವಾಸದ ಪ್ರತಿಬಿಂಬವಾಗಿದೆ.
ಹಾಸನ: ಮಲೇಷ್ಯಾದ ಕೌಲಾಲಂಪುರದ ರಾಯಲ್ ಚುಲನ್ ಇಂಡೋರ್ ಹಾಲ್‌ನಲ್ಲಿ ನಡೆದ ಪ್ರತಿಷ್ಠಿತ 7ನೇ ಇಂಟರ್‌ನ್ಯಾಷನಲ್ ಸ್ಪೋರ್ಟ್ ಡ್ಯಾನ್ಸ್ ಚಾಂಪಿಯನ್‌ಶಿಪ್ ೨೦೨೬-೨೭’ ರಲ್ಲಿ ನಗರದ ಎಸ್.ಆರ್.ಎಸ್ ಪ್ರಜ್ಞಾ ವಿದ್ಯಾ ಶಾಲೆಯ 4 ನೇ ತರಗತಿಯ ವಿದ್ಯಾರ್ಥಿನಿ ದೃತಿ ಎಸ್. ಅವರು ಪ್ರಥಮ ಸ್ಥಾನವನ್ನು ಗಳಿಸುವ ಮೂಲಕ ಶಾಲೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದಿದ್ದಾರೆ.
ದೃತಿ ಎಸ್. ಅವರು ೯ ವರ್ಷದ ವಯೋಮಾನದೊಳಗಿನ ವಿಭಾಗದ ಸೋಲೋ ಮತ್ತು ಟೀಮ್ ಈವೆಂಟ್‌ನ ‘ಫ್ರೀ ಸ್ಟೈಲ್’ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಎರಡರಲ್ಲೂ ಪ್ರಥಮ ಸ್ಥಾನ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಈ ಅದ್ಭುತ ಸಾಧನೆಯು ಅವರ ಅಸಾಧಾರಣ ಪ್ರತಿಭೆ, ಸಮರ್ಪಣಾ ಮನೋಭಾವ ಹಾಗೂ ಆತ್ಮವಿಶ್ವಾಸದ ಪ್ರತಿಬಿಂಬವಾಗಿದೆ.
ಈ ಪ್ರತಿಭಾವಂತ ವಿದ್ಯಾರ್ಥಿನಿಯಾದ ದೃತಿ ಎಸ್. ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.