ಜಾಗತೀಕರಣದಿಂದ ಕನ್ನಡ ನಾಡು, ನುಡಿಗೆ ಹಿನ್ನಡೆ

KannadaprabhaNewsNetwork | Published : May 28, 2024 1:13 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕನ್ನಡ ಅನ್ನದ ಭಾಷೆಯಾಗಬೇಕು. ಜಾಗತೀಕರಣದ ಪ್ರಭಾವದಿಂದ ಕನ್ನಡ ನಾಡು ನುಡಿಗೆ ಹಿನ್ನಡೆ ಆಗುತ್ತಿರುವದು ವಿಷಾದನೀಯ. ಕನ್ನಡಿಗರು ಇತರ ಭಾಷೆಯ ವ್ಯಾಮೋಹದಿಂದ ತಮ್ಮ ಮಕ್ಕಳನ್ನು ಜಾಗತೀಕರಣದ ಪೈಪೋಟಿಗೆ ವಾಲುತ್ತಿರುವುದು ಕನ್ನಡ ಭಾಷೆಗೆ ಹಿನ್ನಡೆ ಯಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಕೋಶಾಧ್ಯಕ್ಷ ಡಾ.ಸಂಗಮೇಶ ಮೇತ್ರಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕನ್ನಡ ಅನ್ನದ ಭಾಷೆಯಾಗಬೇಕು. ಜಾಗತೀಕರಣದ ಪ್ರಭಾವದಿಂದ ಕನ್ನಡ ನಾಡು ನುಡಿಗೆ ಹಿನ್ನಡೆ ಆಗುತ್ತಿರುವದು ವಿಷಾದನೀಯ. ಕನ್ನಡಿಗರು ಇತರ ಭಾಷೆಯ ವ್ಯಾಮೋಹದಿಂದ ತಮ್ಮ ಮಕ್ಕಳನ್ನು ಜಾಗತೀಕರಣದ ಪೈಪೋಟಿಗೆ ವಾಲುತ್ತಿರುವುದು ಕನ್ನಡ ಭಾಷೆಗೆ ಹಿನ್ನಡೆ ಯಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಕೋಶಾಧ್ಯಕ್ಷ ಡಾ.ಸಂಗಮೇಶ ಮೇತ್ರಿ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜಿಲ್ಲಾ, ತಾಲೂಕ, ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾನಪದ ಸಾಹಿತ್ಯ ಕನ್ನಡ ಸಾಹಿತ್ಯದ ತಾಯಿಬೇರು. ಕನ್ನಡ ಉಳಿದರೆ ಕನ್ನಡಿಗರ ಉಳಿವು. ಸರ್ಕಾರ ಮಾತೃ ಭಾಷೆಗೆ ಪ್ರಾಧ್ಯಾನತೆ ನೀಡಬೇಕು ಎಂದು ಒತ್ತಾಯಿಸಿದರು.

ಶ್ರೀ ಸಿದ್ದೇಶ್ವರ ಕೋಚಿಂಗ್‌ ತರಬೇತಿ ಸುರೇಶ ಜತ್ತಿ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆಡಳಿತದ ಲೋಪ ದೋಷಗಳು ಭಾವೈಕ್ಯತೆಯ ಸಂಬಂಧಗಳಿಗೆ ಧಕ್ಕೆ ಉಂಟಾಗಿದೆ. ಆಡಳಿತ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರ ಅಭಿವೃದ್ಧಿಗೆ ಕುಂಟಿತವಾಗಿದೆ ಎಂದರು.

ಸಾಹಿತಿ ರೇವಣಸಿದ್ದ ಪಟ್ಟಣಶೆಟ್ಟಿ ಕನ್ನಡ ಸಾಹಿತ್ಯ ಪ್ರೇಮ ಕುರಿತು ಉಪನ್ಯಾಸ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಿಕೋಟಾ ವಸತಿ ಶಾಲೆಯ ಪ್ರಾಧ್ಯಾಪಕ ಸೂರ್ಯಕಾಂತ ಹೊಸಮನಿ ಮಾತನಾಡಿ, ರಾಜಕೀಯವು ಸಮಾಜದಲ್ಲಿ ಬೇಧ ಭಾವ ನಿಲವು ತಾಳಿದ್ದರಿಂದ ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಕನ್ನಡ ಸಾಹಿತ್ಯ ಇಂತಹ ಸೂಕ್ಷ್ಮ ಸಮಸ್ಯೆಗಳಿಗೆ ಪರಿಹಾರ ನೀಡುವ ಶಕ್ತಿ ಹೊಂದಿದೆ ಎಂದರು.

ಅತಿಥಿಗಳಾಗಿದ್ದ ಕೆ.ಎಸ್.ಹಣಮಾಣಿ ಶೋಭಾ ಬಡಿಗೇರ ಮಾತನಾಡಿದರು. ಅಣ್ಣುಗೌಡ ಬಿರಾದಾರ. ಕುಮಾರಗೌಡ ಬಿರಾದಾರ. ರಾಜೇಸಾಬ ಶಿವನಗುತ್ತಿ ಮಾತನಾಡಿದರು. ಸಿದ್ರಾಮಯ್ಯ ಲಕ್ಕುಂಡಿಮಠ, ಅರ್ಜುನ್‌ ಶಿರೂರ, ಸುಖದೇವಿ ಅಲಬಾಳಮಠ, ಮಹಾದೇವಿ ತೆಲಗಿ, ಶಾಂತಾ ವಿಭೂತಿ, ಜಿ.ಎಸ್.ಬಳ್ಳೂರ. ಅಮೋಘಸಿದ್ದ ಪೂಜಾರಿ, ಭಾಗೀರಥಿ ಸಿಂಧೆ, ಟಿ ಆರ್ ಹಾವಿನಾಳ, ಜಿ.ಎಸ್.ಬಳ್ಳೂರ, ಮಹಾದೇವಿ ತೆಲಗಿ, ಬಸವರಾಜ ಕೊನರಡ್ಡಿ, ಜಿ.ಎಂ.ಚಲವಾದಿ .ಗಂಗಮ್ಮ ರಡ್ಡಿ, ಸನ್ನೀಧಿ ಬಿರಾದಾರ ಉಪಸ್ಥಿತರಿದ್ದರು. ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಸ್ವಾಗತಿಸಿ ಪರಿಚಯಿಸಿದರು. ಮಮತಾ ಮುಳ್ಳಸಾವಳಗಿ ನಿರೂಪಿಸಿದರು, ಅನ್ನಪೂರ್ಣ ಬೆಳ್ಳನವರ ವಂದಿಸಿದರು.

Share this article