ಜಿ ದೇವರಾಜ ನಾಯ್ಡು
ಪಿಂಚಣಿ ಸೌಲಭ್ಯ ಕಲ್ಪಿಸುವುದಾಗಿ ನಕಲಿ ಆದೇಶ ಪ್ರತಿ ನೀಡಿದ ಪ್ರಕರಣ ರಾಮಾಪುರ ಪೊಲೀಸ್ ಠಾಣೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾರೆ.ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬಿಕಾಪುರ ಗ್ರಾಮದ ತೋಟದ ಮನೆಯ ದಂಪತಿಗಳಿಬ್ಬರು ಗುಂಡಾಪುರ, ಮಂಚಾಪುರ, ಗಂಗನ ದೊಡ್ಡಿ, ಬಸಪ್ಪನ ದೊಡ್ಡಿ ವಿವಿಧ ಗ್ರಾಮಗಳ ಸಾರ್ವಜನಿಕರಿಗೆ ವೃದ್ಧರಿಗೆ ಪಿಂಚಣಿ ಸವಲತ್ತು ಕಲ್ಪಿಸಿ ಕೊಡುವುದಾಗಿ 2022 ಕೊರೋನಾ ಇದ್ದಂತ ಸಂದರ್ಭದಲ್ಲಿ ನೂರಾರು ಜನರ ಹತ್ತಿರ ಪಿಂಚಣಿ ಸೌಲಭ್ಯಕ್ಕಾಗಿ ಪ್ರತಿಯೊಬ್ಬರ ಬಳಿ, 6000, 8000 ರು. ಹಣವನ್ನು ಪಡೆದು ಬೆಂಗಳೂರಿನ ವಿಳಾಸವಿರುವ ವ್ಯಕ್ತಿಗಳ ಪಿಂಚಣಿ ಆದೇಶ ಪ್ರತಿಗೆ ಇಲ್ಲಿನ ಫಲಾನುಭವಿಗಳ ಹೆಸರನ್ನು ಸೇರಿಸಿ ನಕಲಿ ಪಿಂಚಣಿ ಆದೇಶ ಪ್ರತಿಗಳನ್ನು 2023ರಲ್ಲಿ ಈ ಭಾಗದ ಜನತೆಗೆ ನೀಡುವ ಮೂಲಕ ಏನು ತಿಳಿಯದ ಮುಗ್ಧ ಜನತೆಗೆ ವಂಚಿಸಿ ದಂಪತಿಗಳಿಬ್ಬರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಪಿಂಚಣಿ ಸಿಗದೆ ಪರದಾಟ:ಈ ಭಾಗದ ನೂರಾರು ಜನರಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವುದಾಗಿ ಹಣ ಪಡೆದು ನಕಲಿ ಪಿಂಚಣಿ ಆದೇಶ ಪ್ರತಿ ಇಟ್ಟುಕೊಂಡು ಫಲಾನುಭವಿಗಳು ಇಂದು ನಾಳೆ ಹಣ ಬರುತ್ತದೆ ಎಂದು ಹಿರಿಯ ನಾಗರಿಕರು ವಿಧವಾ ವೇತನ, ಸಂಧ್ಯಾ ಸುರಕ್ಷಾ ಇನ್ನಿತರ ಆದೇಶ ಪ್ರತಿಗಳನ್ನು ಇಟ್ಟುಕೊಂಡು ಫಲಾನುಭವಿಗಳು ಪಿಂಚಣಿ ಹಣಕ್ಕಾಗಿ ಪರದಾಡಿದ ಘಟನೆಯಿಂದ ಈ ಪ್ರಕರಣ 2024ರಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ನೂರಾರು ಜನರಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವುದಾಗಿ ದಂಪತಿಗಳಿಬ್ಬರು ಹಣ ಪಡೆದು 2022 ರಲ್ಲಿ ನೀಡಿರುವ ನಕಲಿ ಆದೇಶ ಪ್ರತಿಗಳನ್ನು 2024ರಲ್ಲಿ ಫಲಾನುಭವಿಗಳಿಂದ ಬೆಳಕಿಗೆ ಬಂದಿರುವುದರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಪಟ್ಟಣದ ತಾಲೂಕು ದಂಡಾಧಿಕಾರಿಗಳಿಗೆ ನಕಲಿ ಆದೇಶ ಪ್ರತಿಗಳನ್ನು ನೀಡುವ ಮೂಲಕ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಧನಂಜಯ್, ಗ್ರೇಡ್ 2, ತಹಸೀಸಿಲ್ದಾರ್ ಹನೂರು