‘ಪ್ರೇಮದ ಊರಲಿ’ ಶೋ ವೇಳೆ ಭಾರತಿ ಟಾಕೀಸ್ ಚಾವಣಿ ಕುಸಿತ

KannadaprabhaNewsNetwork |  
Published : Oct 01, 2026, 04:00 AM ISTUpdated : Oct 01, 2026, 04:39 AM IST
Bengaluru Theater roof collapse

ಸಾರಾಂಶ

ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯ ಪರಿಣಾಮದಿಂದ ದಾಸರಹಳ್ಳಿಯಲ್ಲಿರುವ ‘ಭಾರತಿ’ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನದ ವೇಳೆ ಚಾವಣಿ ಕುಸಿದು ಬಿದ್ದು ಅವಘಡ ಸಂಭವಿಸಿದೆ. ಈ ವೇಳೆ ‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದಿದ್ದ ಮೂರು ಪ್ರೇಕ್ಷಕರಿಗೆ ಪೆಟ್ಟಾಗಿದೆ. ಗಾಯಾಳುಗಳನ್ನು ಸಮೀಪದ ಪೀಪಲ್ ಟ್ರೀ ಆಸ್ಪತ್ರೆಗೆ ಸೇರಿಸಲಾಗಿದೆ.

ಪೀಣ್ಯ ದಾಸರಹಳ್ಳಿ‌ : ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯ ಪರಿಣಾಮದಿಂದ ದಾಸರಹಳ್ಳಿಯಲ್ಲಿರುವ ‘ಭಾರತಿ’ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನದ ವೇಳೆ ಚಾವಣಿ ಕುಸಿದು ಬಿದ್ದು ಅವಘಡ ಸಂಭವಿಸಿದೆ. ಈ ವೇಳೆ ‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದಿದ್ದ ಮೂರು ಪ್ರೇಕ್ಷಕರಿಗೆ ಪೆಟ್ಟಾಗಿದೆ. ಗಾಯಾಳುಗಳನ್ನು ಸಮೀಪದ ಪೀಪಲ್ ಟ್ರೀ ಆಸ್ಪತ್ರೆಗೆ ಸೇರಿಸಲಾಗಿದೆ.

ಸಿನಿಮಾ ಶೋ ಅರ್ಧಕ್ಕೆ ಮೊಟಕು:

ದಾಸರಹಳ್ಳಿಯ ಭಾರತಿ’ ಚಿತ್ರಮಂದಿರದಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಪ್ರದರ್ಶನದ ವೇಳೆ ಚಾವಣಿ ಕುಸಿದು ಬಿದ್ದಿದೆ. ಈ ಘಟನೆ ನಡೆದ ಕೂಡಲೇ ಸಿನಿಮಾ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಸಿನಿಮಾ ‘ಮಧ್ಯಂತರಕ್ಕೂ ಕೆಲವೇ ನಿಮಿಷಗಳ ಮುಂಚೆ ಜೋರಾಗಿ ಮಳೆ ಬರುತ್ತಿತ್ತು. ಆಗ ಚಾವಣಿ ಬಿದ್ದ ಶಬ್ದ ಕೇಳಿಸಿತು. ಮಳೆಯಿಂದಾಗಿ ಶೀಟ್ ನೆನೆದು ಕೆಳಗೆ ಬಿದ್ದಿದೆ. ಅಲ್ಲಿ ಕುಳಿತಿದ್ದ ಮೂವರಿಗೆ ಗಾಯ ಆಗಿದೆ. ಇಬ್ಬರ ತಲೆ ಹಾಗೂ ಇನ್ನೊಬ್ಬರ ಕಾಲಿಗೆ ಪೆಟ್ಟಾಗಿದೆ. ತಲೆಯಿಂದ ರಕ್ತ ಸೋರುತ್ತಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ರಮಂದಿರದ ಪರದೆ ಹತ್ತಿರವೂ ಮಳೆ ನೀರು ಸೋರುತ್ತಿತ್ತು. ಒಂದು ವೇಳೆ ಇನ್ನೂ ಜೋರಾಗಿ ಮಳೆ ಬಂದಿದ್ದರೆ ಪೂರ್ತಿ ಬೀಳುವ ಸಾಧ್ಯತೆ ಇತ್ತು. ಆಸನಗಳು ನೋಡಲು ಚೆನ್ನಾಗಿದೆ. ಆದರೆ ಚಾವಣಿ ಪರಿಸ್ಥಿತಿ ಈ ರೀತಿ ಇದೆ’ ಎಂದು ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಭಾರತಿ ಚಿತ್ರಮಂದಿರವನ್ನು ಮುಚ್ಚಲಾಗುತ್ತದೆ ಎಂಬ ಮಾಹಿತಿಯನ್ನು ಚಿತ್ರಮಂದಿರದವರೇ ತಿಳಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಚಿತ್ರಮಂದಿರವನ್ನು ಪ್ರಾರಂಭಿಸಿದರು. ಚಿತ್ರಮಂದಿರದಲ್ಲಿ ಕೆಲವು ಬದಲಾವಣೆಗಳನ್ನು ಕೂಡ ಮಾಡಲಾಗಿದ್ದು ಬದಲಾವಣೆ ಮಾಡುವಾಗ ಸರಿಯಾಗಿ ಕೆಲಸ ಮಾಡದೆ ಇರುವುದಕ್ಕೆ ಈ ರೀತಿಯಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

7.30ರ ಶೋ ಆರಂಭ:

ಯಾವುದೇ ರಿಪೇರಿ ಮಾಡದೆ ಪ್ರೇಕ್ಷಕರ ಜೀವಕ್ಕೂ ಬೆಲೆ ಇಲ್ಲದೆ ಪ್ರೇಮದ ಊರಲಿ ಸಿನಿಮಾದ 7.30ರ ಶೋ ಪ್ರಾರಂಭಿಸಿದ್ದಾರೆ. ಮತ್ತೆ ಏನಾದರೂ ಆದರೆ ಯಾರು ಜವಬ್ದಾರಿ ಎಂದು ಥೀಯೆಟರ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮಾಫಿ ಸಾಕ್ಷಿ ಪ್ರದೂಷ್‌ ಹೇಳಿಕೆ ದಾಖಲು ಅ. 5ರಂದು ಮುಂದುವರಿಕೆ
ನಗರದಲ್ಲಿ ಮತ್ತೆ ಮಳೆಗೆ ಜನ ಹೈರಾಣು