ಕೋಟಿಲಿಂಗೇಶ್ವರದಲ್ಲಿ ದಸರಾ ಬೊಂಬೆ ಪ್ರದರ್ಶನ

KannadaprabhaNewsNetwork |  
Published : Oct 08, 2024, 01:12 AM IST
೭ಕೆಜಿಎಫ್೧ನವರಾತ್ರಿ ಪ್ರಯುಕ್ತ ಕಮ್ಮಸಂದ್ರ ಕೋಟಿಲಿಂಗದಲ್ಲಿ ಇಡಲಾಗಿರುವ ಬೊಂಬೆಗಳು | Kannada Prabha

ಸಾರಾಂಶ

ದಸರಾ ಉತ್ಸವದಲ್ಲಿ ಜಂಬೂ ಸವಾರಿಯ ಮೆರವಣಿಗೆ, ಮಂಗಳ ವಾದ್ಯ, ಸಪ್ತ ಮಾತೃಕೆಯರು, ನವ ದುರ್ಗೆಯರು, ಶ್ರೀನಿವಾಸ ಕಲ್ಯಾಣ, ವೈಕುಂಠ, ಕಂಚಿ ಗರುಡೋತ್ಸವ, ಶಿವ ಪಾರ್ವತಿ, ಲಕ್ಷ್ಮಿನಾರಾಯಣ, ವಿಷ್ಟವಿನ ದಶಾವಾತಾರ, ರಾಜಸ್ಥಾನಿ ವಾದ್ಯವೃಂದ, ಸಿಪಾಯಿ, ಮೈಸೂರಿನ ಚನ್ನಯ್ಯ ಕುಸ್ತಿ, ಅಖಾಡವನ್ನು ಬಿಂಬಿಸುವ ಬೊಂಬೆಗಳು ಮತ್ತೆ ಮತ್ತೆ ನೋಡಬೇಕೆನಿಸುತ್ತವೆ,

ಕನ್ನಡಪ್ರಭ ವಾರ್ತೆ ಕೆಜಿಎಫ್ದಸರಾ ಉತ್ಸವಕ್ಕೂ ಬೊಂಬೆಗಳ ಪ್ರದರ್ಶನಕ್ಕೂ ಶತಮಾನಗಳ ನಂಟಿದ್ದು, ಕೆಜಿಎಫ್ ತಾಲೂಕಿನ ಪ್ರಖ್ಯಾತ ಕೋಟಿಲಿಂಗೇಶ್ವರ ದೇವಾಲಯದಲ್ಲಿ ದಸರಾ ಬೊಂಬೆಗಳ ಪ್ರದರ್ಶನ ದೇವಾಲಯಕ್ಕೆ ಬರುವ ಭಕ್ತರನ್ನು ಆಕರ್ಷಿಸುತ್ತಿದೆ.ಪ್ರತಿ ವರ್ಷ ನವರಾತ್ರಿ ಸಂದರ್ಭದಲ್ಲಿ ದಸರಾ ಬೆಂಬೆಗಳ ಪ್ರದರ್ಶನ ಏರ್ಪಡಿಸುತ್ತಾರೆ, ಇಲ್ಲಿ ೩ ಸಾವಿರಕ್ಕೂ ಹೆಚ್ಚು ಬೊಂಬೆಗಳನ್ನು ಒಪ್ಪ, ಓರಣವಾಗಿ ಜೋಡಿಸಲಾಗಿದೆ, ನವರಾತ್ರಿ ಮೂರು ದಿನಗಳ ಮುಂಚೆಯೇ ಸತತ ಪರಿಶ್ರಮದಿಂದ ಬೊಂಬೆಗಳನ್ನು ಜೋಡಿಸಿದ್ದು, ದೇಶದ ವಿವಿಧ ರಾಜ್ಯಗಳ ಜಾನಪದ ಕಲೆಗಳನ್ನು ಬಿಂಬಿಸುವ ಬೊಂಬೆಗಳು ಆಯಾ ರಾಜ್ಯಗಳ ಕಲೆ ಮತ್ತು ಸಂಸ್ಕೃತಿ ಬಿಂಬಿಸುತ್ತಿವೆ.ವೈವಿದ್ಯಮಯ ಬೋಂಬೆಗಳು

ದಸರಾ ಉತ್ಸವದಲ್ಲಿ ಜಂಬೂ ಸವಾರಿಯ ಮೆರವಣಿಗೆ, ಮಂಗಳ ವಾದ್ಯ, ಸಪ್ತ ಮಾತೃಕೆಯರು, ನವ ದುರ್ಗೆಯರು, ಶ್ರೀನಿವಾಸ ಕಲ್ಯಾಣ, ವೈಕುಂಠ, ಕಂಚಿ ಗರುಡೋತ್ಸವ, ಶಿವ ಪಾರ್ವತಿ, ಲಕ್ಷ್ಮಿನಾರಾಯಣ, ವಿಷ್ಟವಿನ ದಶಾವಾತಾರ, ರಾಜಸ್ಥಾನಿ ವಾದ್ಯವೃಂದ, ಸಿಪಾಯಿ, ಮೈಸೂರಿನ ಚನ್ನಯ್ಯ ಕುಸ್ತಿ, ಅಖಾಡವನ್ನು ಬಿಂಬಿಸುವ ಬೊಂಬೆಗಳು ಮತ್ತೆ ಮತ್ತೆ ನೋಡಬೇಕೆನಿಸುತ್ತವೆ, ಶ್ರೀಕೃಷ್ಣ ಕುಟೀರವಂತೂ ನೋಡುಗರಲ್ಲಿ ಭಕ್ತಿ ಭಾವ ಮೂಡಿಸುತ್ತದೆ.ಅಧುನಿಕತೆ ಬಿಂಬಿಸುವ ಕ್ರಿಕೆಟ್ ಕ್ರೀಡಾಂಗಣ, ಲಲನೆಯರ ಜಲಕ್ರೀಡೆ, ಹಣ್ಣು ಮತ್ತು ತರಕಾರಿ ಅಂಗಡಿ, ದಿನಸಿ ಅಂಗಡಿ, ಮೆಟಲ್ ಸ್ಟೋರ್, ಬೇಕರಿ ಆಭರಣದ ಅಂಗಡಿ, ಪಾದರಕ್ಷೆ ಅಂಗಡಿಗಳು ಕೂಡ ಬೊಂಬೆ ಪ್ರದರ್ಶನದಲ್ಲಿವೆ, ಶಿವನ ಜಡೆಯಿಂದ ಧುಮುಕುವ ಗಂಗೆ ಗಮನ ಸೆಳೆಯುತ್ತದೆ.ಆಡಳಿತಾಧಿಕಾರಿ ಕುಮಾರಿ ಆಸಕ್ತಿ

ನವರಾತ್ರಿ ಆಚರಣೆಯ ಆರಂಭದ ದಿನದಿಂದ ೯ ದಿನಗಳ ವರೆಗೆ ಬೊಂಬೆಗಳ ಪ್ರದರ್ಶನ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಬೊಂಬೆಗಳ ಪ್ರದರ್ಶನ ಇರುತ್ತದೆ, ಬೆಳಗ್ಗೆ ೧೦ ರಿಂದ ರಾತ್ರಿ ೮ ಗಂಟೆ ವರಗೆ ಬೊಂಬೆಗಳನ್ನು ನೋಡಲು ಮುಕ್ತ ಅವಕಾಶವಿದೆ. ದೇವಾಲಯದ ಕಾರ್ಯದರ್ಶಿ ಕುಮಾರಿ ಅವರು ಪ್ರತಿವರ್ಷ ಬೊಂಬೆಗಳನ್ನು ಪ್ರತಿಷ್ಟಾಪನೆ ಮಾಡಿ ಪ್ರತಿ ರಾತ್ರಿ ವಿಶೇಷ ಪೂಜೆ ನೇರವೇರಿಸುತ್ತಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ