ಕನ್ನಡಪ್ರಭ ವಾರ್ತೆ ಪುತ್ತೂರು
ಮಿತ್ತೂರು ಬ್ರಹ್ಮಶ್ರೀ ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಭಟ್ ಬಿ. ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಗ.ನಾ. ಭಟ್ ಮೈಸೂರು ರಚಿಸಿದ ‘ಸತಿ ಸಾವಿತ್ರಿ’ ಪುಸ್ತಕದ ಬಗ್ಗೆ ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ ಪರಿಚಯ ಮಾಡಿದರು. ಕೃಷ್ಣಮೂರ್ತಿ ಕೆಮ್ಮಾರ ಅವರ ‘ಪುರಾಣ ರಸಪ್ರಶ್ನಾವಲೀಯ’ವನ್ನು ಯುವ ಬರಹಗಾರ ನವೀನಕೃಷ್ಣ ಎಸ್. ಉಪ್ಪಿನಂಗಡಿ ಪರಿಚಯ ಮಾಡಿದರು.ದ್ವಾರಕಾ ಪ್ರರಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ ಅರ್ತ್ಯಡ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಹೊಸ ಕೃತಿಗಳ ಬಿಡುಗಡೆ:ವಿದ್ವಾನ್ ಗ.ನಾ ಭಟ್ ಅವರ ಸತಿ ಸಾವಿತ್ರಿ, ಕೃಷ್ಣಮೂರ್ತಿ ಕೆಮ್ಮಾರ ಅವರ ಪುರಾಣ ರಸ ಪ್ರಶ್ನಾವಳಿ ಮತ್ತು ಮಿತ್ತೂರು ಪುರೋಹಿತ ಶ್ರೀನಿವಾಸ ಭಟ್ಟ ಪರಿಷ್ಕರಣೆ ಮತ್ತು ಪರಿವರ್ಧನೆ ಮಾಡಿದ ವೇದ ವಸಂತ ಮತ್ತು ವೇದ ಮಾಧವ ಕೃತಿಗಳು ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತ್ತು. ಬಳಿಕ ಕೃಷಿ ಮತ್ತು ಆರ್ಥಿಕ ವಿಚಾರಗೋಷ್ಠಿಯು ನಡೆಯಿತು. ಸನ್ಮಾನ, ಪ್ರತಿಭಾ ಪುರಸ್ಕಾರಸಾವಯವ ಕೃಷಿ ಕ್ಷೇತ್ರದ ಸಾಧಕ ಸುಬ್ರಹ್ಮಣ್ಯ ಭಟ್ಟ ನೆಕ್ಕರೆಕಳೆಯ, ಭಾರತೀಯ ಸೇನೆ, ಕೃಷಿ ಹಾಗೂ ಸಮಾಜ ಸೇವೆಯಲ್ಲಿ ಡಾ.ಗೋಪಾಲಕೃಷ್ಣ ಕಾಂಚೋಡು, ಯಕ್ಷಗಾನ ಹಿಮ್ಮೇಳದಲ್ಲಿ ಪದ್ಯಾಣ ಶಂಕರನಾರಾಯಣ ಭಟ್ಟ, ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಸ್ವಸ್ತಿಕ್ ಭಟ್ ಮುರ್ಗಜೆ, ಸಾಮಾಜಿಕ ಜಾಲತಾಣ ಹಾಗೂ ಆಹಾರೋದ್ಯಮದಲ್ಲಿ ಸುದರ್ಶನ ಭಟ್ಟ ಬೆದ್ರಡಿ ಅವರನ್ನು ಸನ್ಮಾನಿಸಲಾಯಿತು.
ದ್ವಾರಕ ಕಲಾ ಶಾಲೆಯ ಮೂಲಕ ಕೀ ಬೋರ್ಡ್, ಚೆಂಡೆ, ಮದ್ದಲೆ ತರಬೇತಿ ಪಡೆದು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ರಾಮಾಯಣ, ಮಹಾಭಾರತ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಗಣರಾಜ ಕುಂಬ್ಳೆ ಸ್ವಾಗತಿಸಿದರು. ಅಮೃತ ಕೃಷ್ಣಾ ವಂದಿಸಿದರು. ನವೀನಕೃಷ್ಣಾ ಉಪ್ಪಿನಂಗಡಿ ಹಾಗೂ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.