65 ವರ್ಷಗಳ ಬಳಿಕ ನಡೆಯುತ್ತಿರುವ ಜಾತ್ರೆ । ಅದ್ಧೂರಿ ಆಚರಣೆಗೆ ಎಲ್ಲ ಸಿದ್ಧತೆ ಪೂರ್ಣಪರಶಿವಮೂರ್ತಿ ದೋಟಿಹಾಳ
ಆರೂವರೆ ದಶಕಗಳಿಂದ ಸ್ಥಗಿತಗೊಂಡಿದ್ದ ಪಟ್ಟಣದ ಗ್ರಾಮ ದೇವತೆ ದ್ಯಾಮವ್ವ ದೇವಿಯ ಜಾತ್ರಾ ವೈಭವ ಇಂದಿನಿಂದ ಮರುಕಳಿಸಲಿದ್ದು, ಅದ್ಧೂರಿ ಜಾತ್ರೆಗೆ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ.
65 ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಜಾತ್ರೆಯನ್ನು ಪುನಃ ಆರಂಭ ಮಾಡಬೇಕೆಂದುಕೊಂಡ ಭಕ್ತರು ಏ.9 ರಿಂದ ಏ.20 ರವರೆಗೆ 11 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಸಲು ತೀರ್ಮಾನಿಸಿದ್ದರು. ಅದರಂತೆ ಈಗ ಜಾತ್ರೆ ಆಚರಣೆಗೆ ಪಟ್ಟಣ ಸಜ್ಜುಗೊಂಡಿದೆ.ಬೆಳ್ಳಿಮೂರ್ತಿ ಪ್ರತಿಷ್ಠಾಪನೆ:
ಕಾರ್ಯಕ್ರಮಗಳ ವಿವರ:
ದೇವಿಯ ಪೂಜೆ ನಂತರ ಕಂಕಣ ಧಾರಣೆ ಮಾಡುವುದು, ನಂತರ ಪಟ್ಟಣದ ಎಲ್ಲ ದೇವಸ್ಥಾನಗಳಲ್ಲಿಯೂ ನಂದಾದೀಪ ಬೆಳಗಿಸಲಾಗುತ್ತದೆ. ನಂತರ ದ್ಯಾಮವ್ವ ದೇವಿಯ ಕಳಸ ಸೇರಿ ಒಟ್ಟು ಆರು ಕಳಸಗಳನ್ನು ಮೆರವಣಿಗೆ ಮೂಲಕ ತರಲಾಗುತ್ತದೆ. ಏ.10 ರಂದು ಬ್ರಾಹ್ಮಿ ಮಹೂರ್ತದಲ್ಲಿ ಸಪ್ತ ಭಜನೆ ಪ್ರಾರಂಭವಾಗಿ ಏಳು ದಿನಗಳವರೆಗೆ ಅಹೋರಾತ್ರಿ ಸಪ್ತಭಜನೆ ನಡೆಯಲಿದೆ. ಏ. 16ರಂದು ದ್ಯಾಮವ್ವ ದೇವಿಯನ್ನು ಗಂಗಾಸ್ನಾನಕ್ಕೆ ಕರೆದೊಯ್ಯುವುದು, ಪುರಪ್ರವೇಶ, ವಿವಿಧ ಮನೆಗಳಲ್ಲಿ ಉಡಿ ತುಂಬುವುದು ನಂತರ ದೇವಿಯು ಗುಡಿಯಿಂದ ಪೂಜೆಗೊಂಡು ದ್ಯಾಮವ್ವ ದೇವಿಯ ಕಟ್ಟೆಗೆ ತಲುಪುವುದು ನಂತರ ಇತರೆ ಧಾರ್ಮಿಕ ಹಾಗೂ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಎಲ್ಲ ದೇವಸ್ಥಾನಗಳಲ್ಲಿ ನಂದಾದೀಪ ಹಾಕುವ ಪೂರ್ವದಲ್ಲಿ ಭಕ್ತರು ಕಾಯಿ ಒಡೆಸುವ ಕಾರ್ಯ ಮುಗಿಸಬೇಕು. ಏ. 9ರಿಂದ ಏ. 20ರವರೆಗೆ ಕಾಯಿ ಒಡೆಸುವಂತಿಲ್ಲ, ಕುಟ್ಟುವುದು, ಬೀಸುವುದು, ರೊಟ್ಟಿ ಬಡಿಯಬಾರದು, ಕೆಲವು ಮಿಷನ್ ಬಂದ್ ಮಾಡಬೇಕು ಸೇರಿದಂತೆ ವಿವಿಧ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ದೇವಸ್ಥಾನ ಸಮಿತಿ ಪ್ರಕಟಣೆ ಹೊರಡಿಸಿದೆ.