ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ಗೆ ಭೇಟಿ ಕೊಟ್ಟು ಅಡುಗೆ ಮನೆ, ಊಟದ ಹಾಲ್, ಕೊಠಡಿ, ಶೌಚಾಲಯ, ಸ್ನಾನ ಗೃಹವನ್ನು ಪರಿಶೀಲಿಸಿದರು. ಹಾಸ್ಟೆಲ್ ಕಟ್ಟಡ ಹಳೆಯದು ಎನ್ನುವುದನ್ನು ಹೊರತುಪಡಿಸಿ ಉಳಿದಂತೆ ಸ್ವಚ್ಛತೆ, ನಿರ್ವಹಣೆ, ಅಡುಗೆ ಮನೆ ನಿರ್ವಹಣೆಯನ್ನು ಸಹ ಉತ್ತಮವಾಗಿ ನಿರ್ವಹಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಾಂಡವಪುರ: ಪಟ್ಟಣದ ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್ ಗಳಿಗೆ ಜಿಲ್ಲೆಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿವೈಎಸ್ಪಿ ಅಶೋಕ್ ಕುಮಾರ್ ಅವರು ದಿಢೀರ್ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ಪಟ್ಟಣದ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕ- ಬಾಲಕೀಯರ ಹಾಸ್ಟೆಲ್ ಗಳಿಗೆ ಭೇಟಿಕೊಟ್ಟು ಅಲ್ಲಿನ ಸ್ವಚ್ಛತೆ, ನಿರ್ವಹಣೆ, ಶೌಚಾಲಯಗಳ ನಿರ್ವಹಣೆ ಸೇರಿದಂತೆ ಮೂಲ ಸೌಕರ್ಯಗಳ ಕುರಿತು ಪರಿಶೀಲಿಸಿ ಮಾಹಿತಿ ಪಡೆದರು.
ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ಗೆ ಭೇಟಿ ಕೊಟ್ಟು ಅಡುಗೆ ಮನೆ, ಊಟದ ಹಾಲ್, ಕೊಠಡಿ, ಶೌಚಾಲಯ, ಸ್ನಾನ ಗೃಹವನ್ನು ಪರಿಶೀಲಿಸಿದರು. ಹಾಸ್ಟೆಲ್ ಕಟ್ಟಡ ಹಳೆಯದು ಎನ್ನುವುದನ್ನು ಹೊರತುಪಡಿಸಿ ಉಳಿದಂತೆ ಸ್ವಚ್ಛತೆ, ನಿರ್ವಹಣೆ, ಅಡುಗೆ ಮನೆ ನಿರ್ವಹಣೆಯನ್ನು ಸಹ ಉತ್ತಮವಾಗಿ ನಿರ್ವಹಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ರೀತಿ ಸ್ವಚ್ಛತೆ ನಿರ್ವಹಣೆ ಮಾಡಿ ಎಂದು ಅಡುಗೆ ಸಹಾಯಕಿ ಸುನೀತ ಅವರಿಗೆ ಸೂಚಿಸಿದರು.
--------------
ರೇವಂತ್ ರಾಜೀವ್ ಕಂಚಿನ ಪದಕ, ಅಭಿನಂದನೆ
ಪಾಂಡವಪುರ: ಇಂಡಿಯಾ ಸ್ಕಿಲ್ ಸ್ಪರ್ಧೆ ಪ್ರಯುಕ್ತ ನಡೆದ ಕರ್ನಾಟಕ ಸ್ಕಿಲ್ ಒಲಂಪಿಕ್ಸ್ 2025- 26 ಸ್ಪರ್ಧೆಯಲ್ಲಿ ಮೊಬೈಲ್ ಅಪ್ಲಿಕೇಶನ್ ವಿಭಾಗದಲ್ಲಿ ಪಟ್ಟಣದ ಯುವಕ ರೇವಂತ್ ರಾಜೀವ್ ಕಂಚಿನ ಪದಕ ಪಡೆದು ತಾಲೂಕು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಪದಕ, ಪ್ರಮಾಣ ಪತ್ರ, ಸ್ಮರಣಿಕೆಯನ್ನು ಬೆಂಗಳೂರಿನ ಲಲಿತ್ ಅಶೋಕ ಹೋಟೆಲ್ ನಲ್ಲಿ ಬುಧವಾರ ಸಂಜೆ ನಡೆದ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಕೌಶಲ್ಯ ಮತ್ತು ಉದ್ಯಮಶೀಲತಾ ಅಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ ರುದ್ರಪ್ಪ ಪಾಟೀಲ್, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಲಕ್ಷ್ಮಿಕಾಂತಮ್ಮ ನಾಯಕ್, ವ್ಯವಸ್ಥಾಪಕ ನಿರ್ದೇಶಕ ರವಿ ತಿರ್ಲಾಪುರ್ ವಿತರಿಸಿದರು.
ಸ್ಕಿಲ್ ಒಲಂಪಿಕ್ಸ್ ನಲ್ಲಿ ಪದಕ ಪಡೆದ ರೇವಂತ್ ರಾಜೀವ್ ರನ್ನು ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್. ಧನ್ಯ ಕುಮಾರ್, ಶಿಕ್ಷಕ ಎಂ.ಎಚ್.ನಂದೀಶ್, ಕ್ರೀಡಾ ತರಬೇತುದಾರ ಆರ್.ಪಿ.ರವಿ, ಪ್ರಗತಿಪರ ರೇಷ್ಮೆ ಕೃಷಿಕ ಶಂಕಹಳ್ಳಿ ಕುಮಾರ್, ಉಪನ್ಯಾಸಕ ದೊಡ್ಡಬ್ಯಾಡರಹಳ್ಳಿ ಧನಂಜಯ, ನಿವೃತ್ತ ಶಿಕ್ಷಕರಾದ ಚಂದ್ರಶೇಖರಯ್ಯ, ಎಸ್.ಮಲ್ಲಿಕಾರ್ಜುನಗೌಡ ಇತರರು ಅಭಿನಂದಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.