ಕನ್ನಡಪ್ರಭ ವಾರ್ತೆ ಕಲಬುರಗಿ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಇಲ್ಲಿಯವರೇ ಆಗಿರುವುದರಿಂದ ಎಲ್ಲವೂ ಅವರಿಗೆ ಮಾತ್ರ ಗೊತ್ತು ಎಂದರು.
ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಈ ರೀತಿಯ ಚರ್ಚೆಗಳು ನಡೆಯುತ್ತಲೇ ಬಂದಿವೆ.ರಾಜಕೀಯದಲ್ಲಿ ಇವೆಲ್ಲಾ ಮಾಮೂಲು ಎಂದು ವ್ಯಾಖ್ಯಾನಿಸಿದರು.
ಬಿಜೆಪಿ ಹಾಗೂ ಆರ್.ಎಸ್.ಎಸ್ ಶಾಂತಿ ಕದಡಲು ಬಹಳ ಪ್ರಯತ್ನ ಮಾಡುತ್ತಿವೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸೃಷ್ಟಿಯಾದ ಅಶಾಂತಿಯ ವಾತಾವರಣದಲ್ಲಿ ಶೇ.90ರಷ್ಟು ಎರಡೇ ತಿಂಗಳಲ್ಲಿ ಕಡಿಮೆಯಾಗಿದೆ ಎಂದು ನುಡಿದರು.
ಯಾರೇ ಆಗಲಿ ಯಾವುದೇ ಧರ್ಮ, ಜಾತಿ, ಭಾಷೆಯ ಹೆಸರಿನಲ್ಲಿ ಶಾಂತಿ ಕದಡುವ ಯತ್ನಕ್ಕೆ ಕೈ ಹಾಕಿದರೆ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯದ ಗೃಹ ಸಚಿವರಿಗೆ ಮನವಿ ಮಾಡಿದರು.ವಿಜಯಪುರದಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದ ವ್ಯಕ್ತಿ ಸಂಘ ಪರಿವಾರಕ್ಕೆ ಸೇರಿದವನು ಎಂಬುದು ಎಲ್ಲರಿಗೂ ಗೊತ್ತಿದೆ. ಸಂಘ ಪರಿವಾರದವರು ಕೆಲವು ಕಡೆ ಬುರ್ಖಾ ಧರಿಸಿ ಗಲಾಟೆ ಮಾಡುತ್ತಾರೆ. ಉದಯಗಿರಿ ಗಲಾಟೆ ಹೊಸದೇನೂ ಅಲ್ಲ. ಆರ್.ಎಸ್.ಎಸ್ ಗೆ ನೂರು ವರ್ಷ ತುಂಬುತ್ತಿರುವ ಹಿನ್ನೆಲೆ ಪಿತೃ ಪಕ್ಷ ಆಚರಣೆ ಹೆಸರಿನಲ್ಲಿ ಹೀಗೆಲ್ಲಾ ಮಾಡುತ್ತಾರೆ ಎಂದು ವಿಶ್ಲೇಷಿಸಿದರು.
ಉದಯಗಿರಿ ಮಾದರಿಯ ಚಿಂತನೆಗಳನ್ನು ಅನುಷ್ಠಾನಕ್ಕೆ ತರಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಅದು ಸಾಧ್ಯವಿಲ್ಲ. ಶಾಂತಿ ಕದಡುವ ಯತ್ನ ಇವರೇ ಮಾಡುತ್ತಿದ್ದಾರೆ. ಈ ಕುರಿತು ತನಿಖೆ ನಡೆಯಬೇಕು ಎಂದರು.