- ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತಿರುವಿನ ಘಟ್ಟ: ಎಸ್‌ಎಸ್‌ಎಲ್‌ಸಿ ಟಾಪರ್ಸ್ಗೆೆ ಬಹುಮಾನ
ಕನ್ನಡಪ್ರಭ ವಾರ್ತೆ, ಬೀರೂರು: ಶಿಕ್ಷಣದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿಗಳ ಬದುಕಿನ ತಿರುವಿನ ಘಟ್ಟವಾಗಿದ್ದು, ಇದರಲ್ಲಿ ಹೆಚ್ಚು ಅಂಕಗಳಿಸಿದರೇ ಮುಂದೆ ನಿಮ್ಮ ಜೀವನಕ್ಕೆ ಮಾರ್ಗಸೂಚಿಗಳಾಗಿ ಉನ್ನತ ಭವಿಷ್ಯ ಸಾಧ್ಯವಾಗಲಿದೆ. ಪರೀಕ್ಷೆಯಲ್ಲಿ ಆದಷ್ಟು ಹೆಚ್ಚು ಅಂಕ ಗಳಿಸಲು ಪ್ರಯತ್ನಿಸಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಾರ್ಗದ ಮಧು ಹೇಳಿದರು. ಪಟ್ಟಣದ ಮಾರ್ಗದ ಮಹದೇವಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶಾಲೆ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಶಾರದ ಪೂಜೆ, 2025 ನೇ ಸಾಲಿನ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಪ್ರವೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪುರಸ್ಕರಿಸುತ್ತಾ ಬರಲಾಗಿದೆ. ಅದೇ ರೀತಿ ಈಬಾರಿಯೂ ಬಹುಮಾನ ನೀಡಲಾಗುತ್ತಿದೆ. 2025 ಶೈಕ್ಷಣಿಕ ವಲಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತಮವಾಗಿ ಬರೆದು ಶಾಲೆ ಮತ್ತು ನಿಮ್ಮ ಪೋಷಕರಿಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು.2025 ನೇ ಸಾಲಿನಲ್ಲಿ ಶೇ. 90 ಅಂಕ ಗಳಿಸುವ ಎಲ್ಲಾ ಮಕ್ಕಳಿಗೂ ಪ್ರೋತ್ಸಾಹ ಧನ ನೀಡುವ ಜೊತೆಗೆ ಮುಂದಿನ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವುದಾಗಿ ಸುರೇಶ್ ದೂರವಾಣಿ ಮೂಲಕ ಸಂದೇಶ ನೀಡಿದರು.ಶಾಲೆ ಮುಖ್ಯಶಿಕ್ಷಕ ವೈ.ಟಿ.ಬಾಬು ಮಾತನಾಡಿ, ಬಡ, ಕೂಲಿ ಕಾರ್ಮಿಕರ ಮಕ್ಕಳೆ ಹೆಚ್ಚಿಗೆ ಇರುವ ಈ ಶಾಲೆ ಆರಂಭದಿಂದ ಇಲ್ಲಿಯವರೆಗೂ ಮಾರ್ಗದ ಅಣ್ಣಯ್ಯನವರು ಶಾಲೆ ತೆರೆಯಲು ಭೂಮಿ, ಕಟ್ಟಡಕ್ಕೆ ಅನುದಾನ ನೀಡಿ ಶಾಲೆ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಅವರ ನಿಧನಾನಂತರ ಮಕ್ಕಳಾದ ಸುರೇಶ್ ಶಾಲೆ ಕಾಂಪೌಂಡ್, ಗೇಟ್ ಮತ್ತಿತರ ಮೂಲಭೂತ ಸೌಕರ್ಯ ನೀಡಿದ್ದಾರೆ. ಮಾರ್ಗದ ಮಹದೇವಪ್ಪ ಅವರ ಕುಟುಂಬ ಈ ಶಾಲೆಗೆ ಅನೇಕ ಕೊಡುಗೆ ನೀಡಿ, ಪ್ರತಿಭಾವಂತ ಮಕ್ಕಳಿಗೆ ಪ್ರತಿವರ್ಷ ₹35 ಸಾವಿರ ಬಹುಮಾನ ನೀಡುತ್ತಿದೆ ಎಂದರು. ಇದೇ ಕುಟುಂಬದ ಮತೋರ್ವ ಸದಸ್ಯ ಸೋಮಶೇಖರ್ ಸಹ ಮಕ್ಕಳಿಗೆ ಪರೀಕ್ಷೆ ಬರೆಯಲು ಪೆನ್‌ಗಳನ್ನು ನೀಡಿದರು.ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ದೀಪು ₹10 ಸಾವಿರ, ದ್ವಿತೀಯ ಸ್ಥಾನ ತಸ್ಲೀಮಾ ₹5 ಸಾವಿರ, ತೃತೀಯ ಸ್ಥಾನ ಪಡೆದ ಭರತ್‌ಗೆ ₹5 ಸಾವಿರ ಮತ್ತು ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ ಸುಪ್ರೀತ್‌ಗೆ ₹5 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಇದೇ ಸಂಧರ್ಭದಲ್ಲಿ ಶಿಕ್ಷಕರಾದ ಪಿ.ಎಂ.ಉಷಾ, ಕೆ.ಪಿ.ಪ್ರಸನ್ನಕುಮಾರ್, ಬಿ.ಕೆ.ನಟರಾಜ್,ಎ.ಶಿವು,ಎ.ವಿ.ಹರೀಶಪ್ಪ, ಎಂ.ಬಿ. ರಾಜಶೇಖರ್,ಎ.ವಸಂತ, ಅರುಣ ಕುಮಾರಿ, ಎಸ್.ಎಸ್.ಮಂಜುಳಾ ಹಾಗೂ ಸುಧಾಕರ್ ಮತ್ತು ಸಿಬ್ಬಂದಿ ಇದ್ದರು.14 ಬೀರೂರು 1ಬೀರೂರಿನ ಮಾರ್ಗದ ಮಹದೇವಪ್ಪ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ದಾನಿ ಮಾರ್ಗದ ಮಹದೇವಪ್ಪ ಕುಟುಂಬದ ಪರವಾಗಿ ಮಾರ್ಗದ ಮಧು ಬಹುಮಾನ ನೀಡಿದರು. ಮುಖ್ಯ ಶಿಕ್ಷಕ ವೈ.ಟಿ.ಬಾಬು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.