ಚರ್ಚ್ ವಠಾರದ ಎಲ್ಲಾ ವಿದ್ಯುತ್ ಬೆಳಕನ್ನು ನಂದಿಸಿ ನಂತರ ಒಂದು ದೊಡ್ಡ ಮೇಣದ ಬತ್ತಿಗೆ, ಯೇಸುವನ್ನು ಶಿಲುಬೆಗೆ ಏರಿಸಿದಾಗ ಹೊಡೆದಿರುವಂತಹ ಮೊಳೆಗಳನ್ನು ಚುಚ್ಚಲಾಯಿತು. ಬಳಿಕ ಹೊಸ ಬೆಂಕಿಯಿಂದ ಮೇಣದ ಬತ್ತಿಯನ್ನು ಹೊತ್ತಿಸಲಾಗುತ್ತದೆ.
ಕನ್ನಡಪ್ರಭ ವಾರ್ತೆ ಪುತ್ತೂರು
ನಗರದ ಮಾಯ್ ದೆ ದೇವುಸ್ ಚರ್ಚ್ ನಲ್ಲಿ ಯೇಸಕ್ರಿಸ್ತನ ಪುನರ್ಜನ್ಮವನ್ನು ಸಾರುವ ಈಸ್ಟರ್ ಹಬ್ಬವನ್ನು ಶನಿವಾರ ಶ್ರದ್ಧಾ ಭಕ್ತಿಗಳೊಂದಿಗೆ ಆಚರಿಸಲಾಯಿತು. ಚರ್ಚ್ ವಠಾರದ ಎಲ್ಲಾ ವಿದ್ಯುತ್ ಬೆಳಕನ್ನು ನಂದಿಸಿ ನಂತರ ಒಂದು ದೊಡ್ಡ ಮೇಣದ ಬತ್ತಿಗೆ, ಯೇಸುವನ್ನು ಶಿಲುಬೆಗೆ ಏರಿಸಿದಾಗ ಹೊಡೆದಿರುವಂತಹ ಮೊಳೆಗಳನ್ನು ಚುಚ್ಚಲಾಯಿತು. ಬಳಿಕ ಹೊಸ ಬೆಂಕಿಯಿಂದ ಮೇಣದ ಬತ್ತಿಯನ್ನು ಹೊತ್ತಿಸಲಾಗುತ್ತದೆ. ಈ ಮೇಣದ ಬತ್ತಿಯನ್ನು ಹಿಡಿದ ಯಾಜಕರು ಜನರ ನಡುವಿನಿಂದ ಹೋಗುವಾಗ ಇದು ಯೇಸಕ್ರಿಸ್ತರ ಜ್ಯೋತಿಯು ಎಂದು ಉದ್ಗರಿಸಿದಾಗ ಎಲ್ಲಾ ಭಕ್ತಾದಿಗಳು ದೇವರಿಗೆ ಮಹಿಮೆ ಸಲ್ಲಲ್ಲಿ ಎಂದು ಜೈಕಾರವನ್ನು ಕೂಗುತ್ತಾ ಆ ಜ್ಯೋತಿಯಿಂದ ತಮ್ಮಲ್ಲಿ ಇರುವ ಮೇಣದ ಬತ್ತಿಯನ್ನು ಹೊತ್ತಿಸುತ್ತಾರೆ. ಧಾರ್ಮಿಕ ವಿಧಿವಿಧಾನಗಳು, ಬೈಬಲ್ ನ ಹಳೆ ಒಡಂಬಡಿಕೆಯ ಮೂರು ವಚನಗಳು, ಸ್ತುತಿ ಗೀತೆಗಳು, ಆದನಂತರ ಪುನರುತ್ಥಾನ ಯೇಸುವಿನ ಪ್ರತಿಮೆಯು ಅನಾವರಣಗೊಳಿಸಲಾಗುತ್ತದೆ. ವಂದನೀಯ ಅಶೋಕ್ ರಾಯನ್ ಕ್ರಾಸ್ತಾ ಅವರು ತಮ್ಮ ಪ್ರವಚನದಲ್ಲಿ ಈ ದಿವಸ ಜಾಗರಣೆಯ ರಾತ್ರಿ. ನಮಗೆಲ್ಲರಿಗೂ ರಕ್ಷಣೆಯನ್ನು ಅವರು ನೀಡಿದ್ದಾರೆ. ಅಂದರೆ ಯೇಸು ಕ್ರಿಸ್ತರು ಜೀವಂತಗೊಂಡು ತನ್ನ ತಂದೆಯೊಂದಿಗೆ ಐಕ್ಯರಾಗುವುದರ ಜೊತೆಗೆ ಎಲ್ಲಾ ಕ್ರೈಸ್ತ ಅನುಯಾಯಿಗಳಿಗೆ ಪುನರುತ್ಥಾನ ಕರುಣಿಸಿದ ಪವಿತ್ರ ದಿನವಿದು, ಪ್ರತಿಯೊಬ್ಬರು ಇದರ ಭರವಸೆಯೊಂದಿಗೆ ಜೀವಿಸಲು ಕರೆಕೊಟ್ಟರು.
ವಂ.ರೂಪೇಶ್ ತಾವ್ರೋ ಅವರು ಪಾತ್ರೆಯಲ್ಲಿ ಇಟ್ಟಿರುವ ನೀರನ್ನು ಮೇಣದ ಬತ್ತಿಯನ್ನು ಮುಳುಗಿಸುವುದರ ಮುಖಾಂತರ ಆಶೀರ್ವದಿಸಿ ಮೇಣದಬತ್ತಿಯಿಂದ ಎಲ್ಲಾ ಭಕ್ತಾದಿಗಳು ಯೇಸು ಕ್ರಿಸ್ತರು ನಮಗೆ ನೀಡಿರುವ ಪುನರುತ್ಥಾನವನ್ನು ವಿಶ್ವಾಸಿಸುತ್ತೇವೆ ಎನ್ನುವ ವಾಗ್ದಾನವನ್ನು ನವೀಕರಿಸಿದ ನಂತರ ಪವಿತ್ರ ನೀರನ್ನು ಭಕ್ತಾದಿಗಳಿಗೆ ಸಿಂಪಡಿಸಿ ಎಲ್ಲರನ್ನು ಪಾವನ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.