ಸ್ವದೇಶಿ ವಸ್ತುಗಳ ಮಾರಾಟದಿಂದ ಆರ್ಥಿಕ ಸ್ವಾವಲಂಬನೆ ಸಾಧ್ಯ: ಅನಂತ್ ಗುರೂಜೀ

KannadaprabhaNewsNetwork |  
Published : Sep 28, 2024, 01:20 AM IST
26ಕೆಕೆಡಿಯು1. | Kannada Prabha

ಸಾರಾಂಶ

ಕಡೂರು, ಸ್ವದೇಶಿ ವಸ್ತುಗಳ ಮಾರಾಟದಿಂದ ಕುಟುಂಬಗಳು ಆರ್ಥಿಕವಾಗಿ ಬಲಗೊಳ್ಳಲು ಸಹಕಾರಿ ಎಂದು ಶಿವಮೊಗ್ಗದ ಯೋಗ ವಿಸ್ಮಯ ಟ್ರಸ್ಟ್ ನ ಅನಂತ್ ಗುರೂಜೀ ಹೇಳಿದರು.

ಪಟ್ಟಣದ ಅರಿವಿನ ಮನೆ ಸೌಹಾರ್ದ ಸಹಕಾರ ಸಂಘದಿಂದ ಸ್ವದೇಶಿ ವಸ್ತುಗಳ ಮಾರಾಟಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ, ಕಡೂರು

ಸ್ವದೇಶಿ ವಸ್ತುಗಳ ಮಾರಾಟದಿಂದ ಕುಟುಂಬಗಳು ಆರ್ಥಿಕವಾಗಿ ಬಲಗೊಳ್ಳಲು ಸಹಕಾರಿ ಎಂದು ಶಿವಮೊಗ್ಗದ ಯೋಗ ವಿಸ್ಮಯ ಟ್ರಸ್ಟ್ ನ ಅನಂತ್ ಗುರೂಜೀ ಹೇಳಿದರು.

ಪಟ್ಟಣದ ಅರಿವಿನ ಮನೆ ಸೌಹಾರ್ದ ಸಹಕಾರ ಸಂಘದಿಂದ ಸ್ವದೇಶಿ ವಸ್ತುಗಳ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವದೇಶಿ ವಸ್ತುಗಳ ಮಾರಾಟದಿಂದ ಗುಡಿ ಕೈಗಾರಿಕೆಗೆ ಮತ್ತಷ್ಟು ಉತ್ತೇಜನ ಸಿಗುತ್ತದೆ. ಲಕ್ಷಾಂತರ ಜನರಿಗೆ ಉದ್ಯೋಗ ದೊರಕಿ ಆರ್ಥಿಕ ಸ್ವಾವಲಂಬಿಗಳಾಗುತ್ತಾರೆ. ಅಲ್ಲದೆ ದೇಶಿ ವಸ್ತುಗಳಿಗೆ ಬೇಡಿಕೆ ಹೆಚ್ಚುವುದರಿಂದ ದೇಶ ಆರ್ಥಿಕವಾಗಿ ಮುನ್ನಡೆಯಲು ಸಹಕಾರಿ. ಪ್ರತಿಯೊಬ್ಬರು ಸ್ವದೇಶಿ ವಸ್ತುಗಳನ್ನು ಬಳಸಿ ಎಂದು ಕರೆ ನೀಡಿದರು.

ಅರಿವಿನ ಮನೆ ಸೌಹಾರ್ದ ಸಹಕಾರ ಸಂಘ ಅಧ್ಯಕ್ಷ ಡಾ.ಸಿ.ಜೆ.ಶಶಿಧರ್ ಮಾತನಾಡಿ, ಉತ್ತಮ ಗುಣಮಟ್ಟದ ಸ್ವದೇಶಿ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಉತ್ತಮ ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿ ಸಾಧ್ಯವಿದೆ. ದಿನಬಳಕೆ ವಸ್ತುಗಳ ಮಾರಾಟ ನಮ್ಮ ಸಹಕಾರ ಸಂಘದಲ್ಲಿ ಈ ಹಿಂದಿನಿಂದಲು ನಡೆಸಿಕೊಂಡು ಬರುತ್ತಿದ್ದು. ಉತ್ತಮ ಆರೋಗ್ಯಕ್ಕೆ ಇದೀಗ ಶುದ್ಧ ಜೇನುತುಪ್ಪ, ಗಾಣದ ಅಡುಗೆಎಣ್ಣೆ, ಮಧುಮೇಹಿ ರವೆ, ಅಕ್ಕಿ, ಸಾವಯವ ಅಕ್ಕಿ ನೀಡಲಾಗುತ್ತಿದೆ. ಇದರ ಉಪಯೋಗ ಪಡೆದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅವಕಾಶ ನಿಮ್ಮ ಮುಂದಿದೆ ಎಂದರು. ಪ್ರಬೋಧಿನಿ ಗುರುಕುಲದ ಅಧ್ಯಕ್ಷ ಭೀಮಪ್ಪ, ಕಡೂರು ನಿವೃತ್ತ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮಲ್ಲಪ್ಪ, ಬೀರೂರು ವಾಸವಿ ವಿದ್ಯಾಪೀಠದ ಅಧ್ಯಕ್ಷ ಗೋಪಾಲಕೃಷ್ಣ, ನರಸಿಂಹಮೂರ್ತಿ ಸೇರಿದಂತೆ ಮತ್ತಿತರರು ಇದ್ದರು.25ಕೆಕೆಡಿಯು1.

ಕಡೂರು ಪಟ್ಟಣದ ಅರಿವಿನ ಮನೆ ಸೌಹಾರ್ದ ಸಹಕಾರ ಸಂಘದ ಸ್ವದೇಶಿ ವಸ್ತುಗಳ ಮಾರಾಟ ಕೇಂದ್ರವನ್ನು ಶಿವಮೊಗ್ಗದ ಅನಂತ್ ಗುರೂಜೀ ಉದ್ಘಾಟಿಸಿದರು, ಭೀಮಪ್ಪ, ಡಾ.ಶಶಿಧರ್, ಮಲ್ಲಪ್ಪ ಇದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ