ಬಾಲ ಕಾರ್ಮಿಕರನ್ನು ಶಿಕ್ಷಣವಂತರನ್ನಾಗಿ ರೂಪಿಸಿ

KannadaprabhaNewsNetwork |  
Published : Nov 07, 2024, 11:48 PM IST
ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರವನ್ನು ವಿತರಿಸಲಾಯಿತು. | Kannada Prabha

ಸಾರಾಂಶ

ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸಿಗುವ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು

ಗದಗ: ಕಾರ್ಮಿಕರು ಒಗ್ಗಟ್ಟಾಗಿ ಬಾಲ ಕಾರ್ಮಿಕರನ್ನು ಗುರುತಿಸಿ ಕಾರ್ಮಿಕ ಪದ್ಧತಿ ನಿಷೇಧಿಸಿ ಶಿಕ್ಷಣವಂತರನ್ನಾಗಿ ರೂಪಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಸಿ.ಎಸ್. ಶಿವನಗೌಡ್ರ ಹೇಳಿದರು.

ನಗರದ ಕಾಟನ್ ಮಾರ್ಕೆಟ್ ರಸ್ತೆಯಲ್ಲಿರುವ ಹಂಜಿಗಿಯವರ ಕಾಂಪ್ಲೆಕ್ಸ್‌ನಲ್ಲಿ ಕಾರ್ಮಿಕ ಕಲ್ಯಾಣ ಸಂಸ್ಥೆ, ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟ, ಅಮರಶಿಲ್ಪಿ ಜಕಣಾಚಾರಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ, ಸೆಂಟರಿಂಗ್ ಮತ್ತು ಬಾರಬೆಂಡಿಂಗ್ ಮೇಸ್ತ್ರಿಗಳ ಸಂಘದಿಂದ ನಡೆದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳ ಪ್ರೋತ್ಸಾಹ ಪೂರ್ವಕ, ಸಮವಸ್ತ್ರ ವಿತರಣಾ ಸಮಾರಂಭ ಹಾಗೂ ಬಾಲಕಾರ್ಮಿಕ, ಕಿಶೋರ ಕಾರ್ಮಿಕ ಪದ್ಧತಿ ನಿಷೇಧ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಶೈಲ್‌ ಸೋಮನಕಟ್ಟಿ ಮಾತನಾಡಿ, ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸಿಗುವ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು. ಬಾಲ ಕಾರ್ಮಿಕ, ಕಿಶೋರ ಕಾರ್ಮಿಕರ ಪದ್ಧತಿ ನಿಷೇಧದ ಜನ ಜಾಗೃತಿ ಎಲ್ಲ ಕಾರ್ಮಿಕರಿಗೂ ತಿಳಿಸುವಂತ ಕಾರ್ಯಕ್ರಮ ರೂಪಿಸಬೇಕೆಂದು ತಿಳಿಸಿದರು.

ಈ ವೇಳೆ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನವರೀನ ನದಾಫ, ಜ್ಯೋತಿ ಕುರಟ್ಟಿ, ಪೂಜಾ ಹಾಲನವರ, ಚಿಂಚನಾ ಬೇಟಗೇರಿ, ಹೊನ್ನೆಪ್ಪ ಭಗವತಿ, ಯಲ್ಲಪ್ಪ ಕಿರೇಸೂರ, ತೇಜಸ್ವಿನಿ ಮೇಗಲಮನಿ, ಅನು ಮೇಗಲಮನಿ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು. ನಗರಸಭೆ ಸದಸ್ಯ ಚಂದ್ರು ಪಿ. ಕರಿಸೋಮನಗೌಡರ, ಕಾರ್ಮಿಕ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮಹಮ್ಮದ ಇರ್ಫಾನ ಡಂಬಳ ಮಾತನಾಡಿದರು.

ಉಮರಫಾರೂಕ್‌ ಹುಬ್ಬಳ್ಳಿ, ಈಶಪ್ಪ ಬಳ್ಳಾರಿ, ಶಂಕರಗೌಡ ಭರಮಗೌಡ್ರ, ಭೀಮಪ್ಪ ಪೂಜಾರ, ಮಹಮ್ಮದ ಈಟಿ, ಎಸ್.ಪಿ. ಕರಿಸೋಮನಗೌಡರ, ಮಲ್ಲಪ್ಪ ಜೀವಣ್ಣವರ, ಕೆ.ಬಿ. ಕುಡಗುಂಟಿ, ಮಹಮ್ಮದ ಶಫೀ ಸಿದ್ಧಿ, ಆನಂದ ಮಾರನಬಸರಿ, ಜಾವೇದ ಹರ್ಲಾಪೂರ, ಮಂಜುನಾಥ ನಿರಂಜನ, ರಂಗನಗೌಡರ, ಮೆಹಬೂಬಅಲಿ ಮೊಮಿನ್, ಶೌಕತ ಯರಂಡಿವಾಲೆ, ಇಬ್ರಾಹಿಂ ಹಳ್ಳಿಕೇರಿ, ಸಂಗಮೇಶ ಕೂಡ್ಲಪ್ಪನವರ, ಚನ್ನವೀರಗೌಡ ಪಾಟೀಲ, ದುರಗಪ್ಪ ಗುಡಿಮನಿ, ನೂರಅಹ್ಮದ ಶಿರಹಟ್ಟಿ, ರಫೀಕ ಕರೇಕಾಯಿ, ಶೌಕತ್ ಧಾರವಾಡ ಸೇರಿದಂತೆ ಇತರರು ಇದ್ದರು.

ನಿಂಗಪ್ಪ ಕಟ್ಟಿಮನಿ ಸ್ವಾಗತಿಸಿದರು. ನಾಸೀರ ಚಿಕೇನಕೊಪ್ಪ ನಿರೂಪಿಸಿದರು. ಮಹಮ್ಮದ ಯಸೂಫ ಬೇಪಾರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ