ಮಕ್ಕಳಿಗೆ ವೈಚಾರಿಕತೆ, ಹೃದಯವಂತಿಕೆಯ ಶಿಕ್ಷಣ ನೀಡಿ: ನಿಶ್ಚಲಾನಂದನಾಥ ಶ್ರೀಗಳ ಸಲಹೆ

KannadaprabhaNewsNetwork |  
Published : Jan 14, 2025, 01:03 AM IST
13ಕೆಎಂಎನ್ ಡಿ20 | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಬುದ್ಧಿವಂತಿಕೆ, ಹೃದಯವಂತಿಕೆ, ವೈಚಾರಿಕತೆ ಮಕ್ಕಳಲ್ಲಿ ಕಡಿಮೆಯಾಗುತ್ತಿದೆ. ಜ್ಞಾನಾರ್ಜನೆ ಜೊತೆಗೆ ಶಾಲೆಗಳಲ್ಲಿ ಹೃದಯವಂತಿಕೆಯನ್ನು ಬೆಳೆಸಲು ಶಿಕ್ಷಕರು ಈಗಿನಿಂದಲೇ ಮಕ್ಕಳನ್ನು ‌ಅಣಿಗೊಳಿಸಬೇಕು. ಪೋಷಕರು ಮಕ್ಕಳಿಗೆ ಶಿಕ್ಷಣ ನೀಡಿದರಷ್ಟೇ ಸಾಲದು, ದಿನನಿತ್ಯದ ಕಷ್ಟ- ಕಾರ್ಪಣ್ಯಗಳ ಅರಿವು ಮೂಡಿಸಬೇಕು. ಇಲ್ಲದಿದ್ದರೆ ಮುಂದೊಂದು ದಿನ ದೊಡ್ಡ ದಂಡವನ್ನು ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಮಕ್ಕಳಿಗೆ ಶಿಕ್ಷಣದ ಜತೆ ವೈಚಾರಿಕತೆ ಹಾಗೂ ಹೃದಯವಂತಿಕೆಯ ಶಿಕ್ಷಣ ನೀಡಿದರೆ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಶ್ರೀಗಳು ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಸರ್ವಶಿವ ಎಜುಕೇಶನ್ ಟ್ರಸ್ಟ್ ಹಾಗೂ ಗ್ಲೋಬಲ್ ಇಂಟರ್ನ್ಯಾಷನಲ್ ಸ್ಕೂಲ್ ವತಿಯಿಂದ ಆಯೋಜಿಸಿದ್ದ ಗ್ಲೋಬಲ್ ದಶಮಾನೋತ್ಸವ 2025 ಹಾಗೂ ಶಾಲಾ ವಾರ್ಷಿಕೋತ್ಸವದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇತ್ತೀಚಿನ ದಿನಗಳಲ್ಲಿ ಬುದ್ಧಿವಂತಿಕೆ, ಹೃದಯವಂತಿಕೆ, ವೈಚಾರಿಕತೆ ಮಕ್ಕಳಲ್ಲಿ ಕಡಿಮೆಯಾಗುತ್ತಿದೆ. ಜ್ಞಾನಾರ್ಜನೆ ಜೊತೆಗೆ ಶಾಲೆಗಳಲ್ಲಿ ಹೃದಯವಂತಿಕೆಯನ್ನು ಬೆಳೆಸಲು ಶಿಕ್ಷಕರು ಈಗಿನಿಂದಲೇ ಮಕ್ಕಳನ್ನು ‌ಅಣಿಗೊಳಿಸಬೇಕು. ಪೋಷಕರು ಮಕ್ಕಳಿಗೆ ಶಿಕ್ಷಣ ನೀಡಿದರಷ್ಟೇ ಸಾಲದು, ದಿನನಿತ್ಯದ ಕಷ್ಟ- ಕಾರ್ಪಣ್ಯಗಳ ಅರಿವು ಮೂಡಿಸಬೇಕು. ಇಲ್ಲದಿದ್ದರೆ ಮುಂದೊಂದು ದಿನ ದೊಡ್ಡ ದಂಡವನ್ನು ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವೈಜ್ಞಾನಿಕ ಮನೋಭಾವನೆ, ಸಂಸ್ಕಾರ ಇವುಗಳನ್ನು ಜೀವನದುದ್ದಕ್ಕೂ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಸಮಾಜಕ್ಕೆ ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಜೊತೆಗೆ ತಾವು ಹುಟ್ಟಿ ಬೆಳೆದ ಗ್ರಾಮಕ್ಕೆ ಏನನ್ನಾದರೂ ಸೇವೆ ನೀಡುವ ಜೊತೆಗೆ ಪೋಷಕರು, ಹಿರಿಯರು, ಶಿಕ್ಷಕರು ಹಾಗೂ ಸಮಾಜವನ್ನು ಗೌರವಿಸುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕೆಂದರು,

ಭಾರತೀಯ ಸಂಸ್ಕೃತಿ ಧರ್ಮವನ್ನು ರಕ್ಷಣೆ ಮಾಡಬೇಕಾದದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಇದಕ್ಕೆ ಒಗ್ಗಟ್ಟಿನ ಮಂತ್ರದ ಅವಶ್ಯಕತೆ ಇದ್ದು, ಮಕ್ಕಳು ಸಮಾಜ- ವಿಜ್ಞಾನದ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕು. ಜೀವನದ ಇತಿಹಾಸ ಸಂಸ್ಕೃತಿ, ರಾಷ್ಟ್ರೋದ್ಯೇವೋಭವ ಎಂಬ ನೀತಿಯಂತೆ ಉತ್ತಮ ರಾಷ್ಟ್ರವನ್ನು ನಿರ್ಮಾಣ ಮಾಡಬೇಕಿದೆ ಎಂದು ಕರೆ ನೀಡಿದರು.

ಹಾಸ್ಯ ಕಲಾವಿದ ಗಿಲ್ಲಿ ನಟ ನಟರಾಜು ಹಾಸ್ಯದ ಮಾತಿನ ಮೂಲಕ ಪೋಷಕರು, ಮಕ್ಕಳನ್ನು ರಂಜಿಸಿದರು. ಸಂಸ್ಥೆ ಅಧ್ಯಕ್ಷ ಶಿವನಂಜಯ್ಯ ಪ್ರಾಸ್ತಾವಿಕವಾಗಿ ನುಡಿದರು. ಬಿಇಒ ಸಿ.ಎಚ್.ಕಾಳಿರಯ್ಯ ವಿಜೇತ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಬಹುಮಾನ ವಿತರಿಸಿದರು.

ವಿನುತ‌ ಉದಯ್, ಪುರಸಭೆ ಅಧ್ಯಕ್ಷೆ ಕೋಕಿಲ ಅರುಣ್, ಸದಸ್ಯೆ ಬಿ.ಸಿ.ಸರ್ವಮಂಗಳ, ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ. ಎಸ್. ಸಂತೋಷ್ ಗೌಡ, ‌‌‌‌ಉಪಾಧ್ಯಕ್ಷ ಚಂದ್ರ ನಾಯಕ್, ಕಾರ್ಯದರ್ಶಿ ಜ್ಯೋತಿ ಗಿರೀಶ್, ಮುಖ್ಯ ಶಿಕ್ಷಕಿ ಎ.ಬಿ,ಪಾವನ, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೃಢ ಸಂಕಲ್ಪ, ಅಚಲ ವಿಶ್ವಾಸದಿಂದ ಯಶಸ್ಸು ಸಾಧ್ಯ
ಧಾರ್ಮಿಕ, ಪ್ರಾಚೀನ ಮಾಹಿತಿಯುಳ್ಳ ಕ್ಯಾಲೆಂಡರ್ ಬಿಡುಗಡೆ