ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟುವಿನಲ್ಲಿರುವ ಮಾರಿಗುಡಿಯ ಪರಿಸರದಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅವರ ವಾರ್ಷಿಕ ಸಾವಿರ ಸಸಿಗಳನ್ನು ನೆಡುವ ಸಸ್ಯ ಶ್ಯಾಮಲಾ ಅಭಿಯಾನ -2026 ಸಂಪನ್ನಗೊಂಡಿತು.
ಪರ್ಯಾವರಣ್ ಸಂರಕ್ಷಣಗತಿ ವಿಧಿ ದಕ್ಷಿಣ ಕರ್ನಾಟಕದ ಸಂಯೋಜಕರಾದ ವೆಂಕಟೇಶ್ ಸಂಗನಲ್ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಬೇಕು ಎಂದು ಕರೆ ನೀಡಿದರು.
ಮೂಡುಬಿದಿರೆ ಪುರಸಭೆಯ ಪರಿಸರ ಅಭಿಯಂತರರು ಆಗಿರುವ ಶಿಲ್ಪ ಅವರು ಮಾತನಾಡಿ, ಎಕ್ಸಲೆಂಟ್ ಸಂಸ್ಥೆಯು ಪರಿಸರ ಸಂರಕ್ಷಣೆಯ ಕೈಂಕರ್ಯದಲ್ಲಿ ಎಂದಿಗೂ ಮುಂಚೂಣಿಯಲ್ಲಿರುತ್ತದೆ ಎಂದರು. ಎಕ್ಸಲೆಂಟ್ ಸಂಸ್ಥೆಯ ಪರಿಸರ ಸಂರಕ್ಷಣೆಯಂತಹ ಕಾರ್ಯಕ್ರಮಗಳಿಗೆ ಮೂಡುಬಿದಿರೆ ಪುರಸಭೆ ಸರ್ವದಾ ಬೆಂಬಲಿಸುತ್ತದೆ ಎಂದು ಅವರು ಭರವಸೆ ನೀಡಿದರು.ಸಮಾರೋಪ ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನಿಯರ್ ಮತ್ತು ದಕ್ಷಿಣ ಕರ್ನಾಟಕ ತ್ಯಾಜ್ಯ ನಿರ್ವಹಣೆ ಇಲಾಖೆಯ ಸಂಯೋಜಕರಾದ ಕೇಶವ ಎಚ್ ಕೆ, ಪರ್ಯಾವರಣ್ ಸಂಸ್ಥೆಯ ಮಂಗಳೂರು ವಿಭಾಗದ ಸಹ ಸಂಯೋಜಕರಾದ ಮಂಜುನಾಥ್ ಶೆಟ್ಟಿ, ಮುಖ್ಯಶಿಕ್ಷಕ ಶಿವಪ್ರಸಾದ್ ಭಟ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ, ಎನ್.ಎಸ್.ಎಸ್ ಅಧಿಕಾರಿ ಅಶೋಕ್, ಸಾರ್ವಜನಿಕ ಸಂಪರ್ಕಅಧಿಕಾರಿ ಸ್ವರೂಪ್ ಜೈನ್ ಮತ್ತಿತರರಿದ್ದರು. ಉಪಮುಖ್ಯ ಶಿಕ್ಷಕ ಜಯಶೀಲ್ ನಿರೂಪಿಸಿ ವಂದಿಸಿದರು.