ಕನ್ನಡಪ್ರಭ ವಾರ್ತೆ ಮೈಸೂರು
ಶಿಕ್ಷಣ, ಸಂಸ್ಕಾರ ವ್ಯಕ್ತಿಯ ಪರಿಪೂರ್ಣತೆ ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಿಳಿಸಿದರು.ಕುವೆಂಪುನಗರದ ಭಾವಸಾರ್ ಕ್ಷತ್ರಿಯ ಸಮಾಜ ಶ್ರೀಚಾಮುಂಡೇಶ್ವರಿ ಸೇವಾ ಸಮಿತಿ 11ನೇ ವರ್ಷದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಭಾವಸಾರ್ ಸಮಾಜ ಅತ್ಯಂತ ಶಾಂತಿಪ್ರಿಯ ಸಮಾಜ. ಇತಿಹಾಸ ಗಮನಿಸಿದಾಗ ಜವಳಿ ವ್ಯಾಪಾರ ,ಚಿಲ್ಲರೆ ವಹಿವಾಟು ನಡೆಸಿ ದರ್ಜಿ ಕೆಲಸಗಳನ್ನು ಹೆಚ್ಚಾಗಿ ಅವಲಂಬಿತರಾಗಿದ್ದರು. ಆದರೆ ಇತ್ತೀಚೆಗೆ ಬದಲಾದ ಕಾಲಘಟ್ಟದಲ್ಲಿ ಉದ್ಯಮಿಗಳಾಗಿ, ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಉದ್ಯೋಗಗಳನ್ನು ಮಾಡುವ ಮೂಲಕ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಆದರೆ ಇದೆಲ್ಲದ್ದಕ್ಕಿಂತ ಮಕ್ಕಳನ್ನು ಹೆಚ್ಚು ಶಿಕ್ಷಿತರನ್ನಾಗಿ ಮಾಡಿದಾಗ ಮಾತ್ರ ಭವಿಷ್ಯದಲ್ಲಿ ನೆಲೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಮನೆಯಲ್ಲಿ ಎಷ್ಟೇ ಬಡತನ, ಆರ್ಥಿಕ ಸಂಕಷ್ಟ ಇದ್ದರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವುದರಲ್ಲಿ ಹಿಂದೆ ಬೀಳಬಾರದು. ಆಗ ಮಾತ್ರ ಮಕ್ಕಳನ್ನು ಭವಿಷ್ಯದ ಆಸ್ತಿಗಳನ್ನಾಗಿ ರೂಪಿಸಲು ಸಾಧ್ಯ. ಕೇವಲ ದುಡ್ಡಿನ ಹಿಂದೆ ಬಿದ್ದರೆ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಿಲ್ಲ ಎಂದರು.
ಕುಲಕಸುಬು ಬದುಕಿಗೆ ಮುಖ್ಯ ಆಧಾರ. ಆದರೆ ಶಿಕ್ಷಣ ನೀಡುವುದು ಪೋಷಕರ ಮಹತ್ತರ ಜವಾಬ್ದಾರಿ. ಸಂವಿಧಾನ ಮೀಸಲಾತಿ ನೀಡಿದೆ. ಅದರ ಉಪಯೋಗ ಪಡೆದುಕೊಂಡು ಉಳ್ಳವರ ನಡುವಿನ ಪೈಪೋಟಿಯ ನಡುವೆ ಹೆಚ್ಚು ಶಿಕ್ಷಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಆ ಮೂಲಕ ಎಲ್ಲಾ ರಂಗದಲ್ಲೂ ಸಮಾಜದ ಛಾಪನ್ನು ಮೂಡಿಸಲು ಸಾಧ್ಯ ಎಂದರು.ಇದೇ ವೇಳೆ ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಬಿ.ಯು. ಅಮೂಲ್ಯ, ಆರ್. ರಕ್ಷಾ, ಡಿ. ಪ್ರಿಯಾಂಕಾ, ಜಿ.ವಿ. ಲಕ್ಷ್ಮಿ, ಬಿ.ಎ. ಭವಿತಾ, ಬಿ.ಎಂ. ವರ್ಷಿಣಿ, ದ್ವಿತೀಯ ಪಿಯುಸಿಸ್ಸಿ ಹೆಚ್ಚು ಅಂಕ ಪಡೆದ ಆರ್. ನಿಧಿ, ಮಲ್ಲಿಕಾರ್ಜುನ, ಆದರ್ಶ, ವಿ. ವೈಷ್ಣವಿ, ಗೀತಾ ಸಂಭ್ರಮ, ಪಿ.ವಿ. ಮನೋಜ್, ಆರ್.ವಿ. ದೇವಿಪ್ರಸಾದ್, ಎನ್.ಎಸ್. ವೈಷ್ಣವಿ ಮತ್ತು ಕೆ. ರಕ್ಷಿತಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಭಾವಸಾರ್ ಕ್ಷತ್ರಿಯ ಮಂಡಳಿಯ ಅಧ್ಯಕ್ಷ ಶಿವಾಜಿರಾವ್ ರಾಂಪುರೆ, ವಿಠ್ಠಲ ರುಕ್ಮಿಣಿ ಕಲ್ಯಾಣ ಮಂಟಪದ ಅಧ್ಯಕ್ಷ ಜಯರಾಮ್ ರಾವ್ ಲಾಳಿಗೆ, ಚಾಮುಂಡೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಬಿ.ಟಿ. ಮಂಜುನಾಥ್ ಬಕರೆ, ಬಾಬು ತಾಪ್ಸೆ, ನಾಗೇಂದ್ರರಾವ್ ಪಾಟಂಕರ್, ಉಮೇಶ್ ನಾಯಕ್, ಸಂಜಯ್ ಕುಮಾರ್ ರಂಪುರೆ, ಗಿರೀಶ್ ಪತಂಗೆ, ರಾಜೇಶ್ ಕುತ್ನಿಕರ್, ಸತ್ಯನಾರಾಯಣ ಪಾಟಂಕರ್, ಗೋಪಾಲಕೃಷ್ಣರಾವ್, ವಾಸುದೇವರಾವ್ ಸಿಂತ್ರೆ, ಬಾಲಾಜಿ ರಾವ್ ನಾಯಕ್, ಹೇಮಂತ್ ಮಾವಾಟ್ಕರ್, ಅನಿಲ್ ಬೇದ್ರೆ, ಸತೀಶ್ ಕುತ್ನಿಕರ್, ಮಹೇಂದ್ರ ರಾಂಪುರೆ, ಸುರೇಶ್ ವಾಂಜ್ರೆ, ಕೃಷ್ಣ ತಾಪ್ಸೆ, ರಾಘವೇಂದ್ರ ದೊಂಗಡೆ, ವಿನೋದ್ ಹಲಾಲೆ ಮೊದಲಾದವರು ಇದ್ದರು.