ದೇವನೂರಿನ ಸರ್ಕಾರಿ ಶಾಲೆಯಲ್ಲಿ ನೂತನ ಕೊಠಡಿ ನಿರ್ಮಾಣ ಕಾಮಗಾರಿಗೆ ಪೂಜೆಕನ್ನಡಪ್ರಭ ವಾರ್ತೆ, ಕಡೂರು
ಕಾಮಗಾರಿಯಲ್ಲಿ ಯಾವುದೇ ರಾಜಿಯಿಲ್ಲ. ಕಳೆದ ಸಾಲಿನಲ್ಲಿ ಜೂ.21ರ ನನ್ನ ಹುಟ್ಟು ಹಬ್ಬದ ದಿನದಂದು ಹಿರೇಮ ಗಳೂರಿನ ಶಾಲೆ ನೂತನ ಕಟ್ಟಡ ಉದ್ಘಾಟಿಸಿ ಹುಟ್ಟುಹಬ್ಬ ಆಚರಿಸಲಾಗಿತ್ತು. ಅದೇ ರೀತಿ ಬರುವ ಜೂ. 21 ರಂದು ದೇವನೂರಿನ ಶಾಲೆಯಲ್ಲಿ ನೂತನ ಕಟ್ಟಡದ ಉದ್ಘಾಟನೆ ಮೂಲಕ ಆಚರಿಸುತ್ತೇನೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು. ಬಿಇಒ ಬದ್ರುದ್ದೀನ್ ಚೋಪ್ದಾರ್ ಮಾತನಾಡಿ, ಈ ಶಾಲೆ ಮಾದರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭವಾಗಿದೆ. ಶಾಸಕರು ಕೊಠಡಿ ನಿರ್ಮಿಸುತ್ತಿರುವುದು ಸಂತಸ ತಂದಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಅಧ್ಯಕ್ಷ ಎಚ್. ಆರ್. ಮಹಾಲಿಂಗಪ್ಪ ಮಾತನಾಡಿ, ನಮ್ಮ ಶಾಲೆಗೆ ಇತಿಹಾಸವಿದೆ. ಮಕ್ಕಳ ಹಾಜರಾತಿಯೂ ಇದೆ. ಆಂಗ್ಲ ಮಾಧ್ಯಮ ಪ್ರಾರಂಭವಾಗಿ ₹50 ಲಕ್ಷ ರೂ ಶಾಸಕರ ನಿಧಿಯಲ್ಲಿ 4 ಕೊಠಡಿಗಳು ನಿರ್ಮಾಣವಾಗುತ್ತಿರುವುದು ಶಿಕ್ಷಣಕ್ಕೆ ಆದ್ಯತೆ ನೀಡಿದಂತಾಗಿದೆ ಎಂದರು. ಗ್ರಾ.ಪಂ. ಅಧ್ಯಕ್ಷೆ ದೀಪಾ ದಕ್ಷಿಣಮೂರ್ತಿ, ಸದಸ್ಯರಾದ ಮಂಜು, ಶಶಿಕಲಾ, ಆನಂದ್, ನಿರ್ಮಿತಿ ಕೇಂದ್ರದ ಚಂದ್ರಶೇಖರ್, ಮುಖಂಡರಾದ ಬಸವ ರಾಜು, ಕುಮಾರ್, ಮುಖ್ಯ ಶಿಕ್ಷಕ ಮಂಜಾನಾಯ್ಕ, ಪರಮೇಶ್, ಪ್ರೇಮಕುಮಾರಿ. ಗ್ರಾಮಸ್ಥರು, ಪೋಷಕರು ಮತ್ತು ಮಕ್ಕಳು ಭಾಗವಹಿಸಿದ್ದರು. 5ಕೆಕೆಡಿಯು3.
ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ದೇವನೂರಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನೂತನ ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಎಚ್. ಡಿ. ತಮ್ಮಯ್ಯ ಚಾಲನೆ ನೀಡಿದರು.