ಮೌಲ್ಯದೊಂದಿಗೆ ಜ್ಞಾನ ನೀಡುವ ಶಿಕ್ಷಣ ಇಂದಿನ ಅಗತ್ಯ-ಮಾರುತಿ ಶಿಡ್ಲಾಪೂರ

KannadaprabhaNewsNetwork |  
Published : Nov 07, 2025, 02:30 AM IST
ಫೋಟೋ : 6ಎಚ್‌ಎನ್‌ಎಲ್1 | Kannada Prabha

ಸಾರಾಂಶ

ಮೌಲ್ಯದೊಂದಿಗೆ ಜ್ಞಾನ ನೀಡುವ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಮಕ್ಕಳನ್ನು ಕೇವಲ ಅಂಕ ಶಿಕ್ಷಣಕ್ಕೆ ಸಿದ್ಧತೆ ಮಾಡುತ್ತಿರುವುದೇ ಹತ್ತು ಹಲವು ಅನಾರೋಗ್ಯಕರ ಬೆಳವಣಿಗೆಗಳಿಗೆ ಕಾರಣವಾಗುತ್ತಿದೆ ಎಂದು ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ತಿಳಿಸಿದರು.

ಹಾನಗಲ್ಲ: ಮೌಲ್ಯದೊಂದಿಗೆ ಜ್ಞಾನ ನೀಡುವ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಮಕ್ಕಳನ್ನು ಕೇವಲ ಅಂಕ ಶಿಕ್ಷಣಕ್ಕೆ ಸಿದ್ಧತೆ ಮಾಡುತ್ತಿರುವುದೇ ಹತ್ತು ಹಲವು ಅನಾರೋಗ್ಯಕರ ಬೆಳವಣಿಗೆಗಳಿಗೆ ಕಾರಣವಾಗುತ್ತಿದೆ ಎಂದು ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ತಿಳಿಸಿದರು. ಗುರುವಾರ ತಾಲೂಕಿನ ಅರಿಷಿಣಗುಪ್ಪಿ ಸರ್ಕಾರಿ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಯೋಜಿಸಿದ ಮಕ್ಕಳ ಮಾನಸಿಕ ಬೌದ್ಧಿಕ ಸ್ವಾಸ್ಥ್ಯ ಹಾಗೂ ಶಿಕ್ಷಣ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುರುಕುಲ ಶಿಕ್ಷಣ ಈಗ ಬೇಕಾಗಿದೆ. ಆದರೆ ಅಂತಹ ಮನಸ್ಸು ಪಾಲಕರು ಮತ್ತು ಶಿಕ್ಷಕರ ನಡುವೆ ಚರ್ಚೆಯಾಗಬೇಕು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅತ್ಯಂತ ಆತುರವಿಲ್ಲದ, ಶುದ್ಧ ಚಾರಿತ್ರ್ಯ ಶಿಕ್ಷಣ ನೀಡಬೇಕು. ಈಗ ಮಕ್ಕಳ ಮನಸ್ಸು ಯಾಂತ್ರಿಕವಾಗುತ್ತಿದ್ದು, ಮೊಬೈಲ್ ಹಾಗೂ ಟಿವಿಗಳು ನಮ್ಮನ್ನು ನಿಯಂತ್ರಿಸುತ್ತಿವೆ. ಮಕ್ಕಳಿಗೆ ಜಂಕ್ ಫುಡ್ ಬೇಡ ಎಂದು ಹೇಳಿದರೆ ಸಾಲದು. ಅದನ್ನು ಬಳಸದಂತೆ ನಿಗಾ ವಹಿಸಬೇಕು. ಮಕ್ಕಳ ಚಲನವಲನಗಳನ್ನು ಗಮನಿಸಿದರೆ ಮಾತ್ರ ನಮ್ಮ ಮಕ್ಕಳು ಉತ್ತಮ ಸಂಸ್ಕಾರಕ್ಕೆ ಬರಬಲ್ಲವು. ನಾಳೆಗಾಗಿ ಇಂದೇ ಮಕ್ಕಳತ್ತ ಗಮನ ಹರಿಸಿ ಎಂದರು. ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆಯ ಕೃಷಿ ಯೋಜನೆ ಸಂಚಾಲಕ ಮಹಂತೇಶ ಹರಕುಣಿ ಮಾತನಾಡಿ, ಎಲ್ಲ ಸಂದರ್ಭಗಳಲ್ಲಿ ನಮ್ಮ ಮನೆ ಮತ್ತು ಮಕ್ಕಳ ಹಿತಕ್ಕೆ ಅಡ್ಡಿಯಾಗದಂತೆ ನಿರ್ವಹಣೆ ಬೇಕಾಗಿದೆ. ಈಗ ಮಕ್ಕಳ ಕೈಗೆ ಕೊಡಬೇಕಾದ ವಸ್ತು ಹಾಗೂ ಆಹಾರದ ಬಗ್ಗೆ ಅತ್ಯಂತ ಗಂಭಿರವಾಗಿ ಯೋಚಿಸಬೇಕಾಗಿದೆ. ನಮ್ಮ ದೇಶೀಯ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮುಂದಾಗೋಣ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿದ್ಧ ಆಹಾರದ ಅವಗಡಗಳ ಬಗ್ಗೆ ತಿಳಿದೂ ನಾವು ಅದಕ್ಕೆ ಮೋಹಿತರಾಗುತ್ತಿರುವುದು ವಿಪರ್ಯಾಸ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಗ್ರಾಮ ಗ್ರಾಮಗಳಲ್ಲಿ ಇಂತಹ ಜಾಗೃತಿಗೆ ಮುಂದಾಗಿದೆ. ಇದಕ್ಕೆ ಗ್ರಾಮಸ್ಥರು, ಮಕ್ಕಳ ಪಾಲಕರ ಸಹಕಾರ ಬೇಕು ಎಂದರು. ಮುಖ್ಯೋಪಾಧ್ಯಾಯಿನಿ ಸುಜಾತ ಬೆಣಗೇರಿ ಅಧ್ಯಕ್ಷತೆವಹಿಸಿದ್ದರು. ಗಿರೀಶಗೌಡ ಪಾಟೀಲ, ರಮೇಶ ಮೂಡುರ, ಚಂದ್ರಪ್ಪ ಸುಂಕದ, ಕಿರಣ ಹಿತ್ತಲಮನಿ, ರುದ್ರಗೌಡ ಬಣಕಾರ, ರಾಕೇಶ ಬಣಕಾರ, ಕಿರಣ ಹಿತ್ತಲಮನಿ, ದೇವೇಂದ್ರಪ್ಪ ಹುಲಮನಿ, ಶಿಕ್ಷಕರಾದ ಕೆ.ಶಶಿಧರರಾವ, ಎಚ್.ಎ.ಶೀಲಾ, ಅಶ್ವಿನಿ ಸಾತೇನಹಳ್ಳಿ, ಭಾಗ್ಯಾ ಸಾವಕ್ಕನವರ, ಎಚ್.ಆರ್.ಸಾಧಿಕ, ಲತಾ ಬಣಕಾರ, ದೇವಿಂದ್ರಪ್ಪ ಹುಲಮನಿ ಅತಿಥಿಗಳಾಗಿದ್ದರು.

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ