ಭವಿಷ್ಯದ ಸವಾಲು ಎದುರಿಸಲು ಶಿಕ್ಷಣ ಅಗತ್ಯ: ಎಚ್.ಎ. ಪರಶುರಾಮಪ್ಪ

KannadaprabhaNewsNetwork |  
Published : Jul 10, 2025, 01:46 AM IST
ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಯುವ ಅವೃತ್ತಿ ಬಿಡುಗಡೆ ಸಮಾರಂಭ | Kannada Prabha

ಸಾರಾಂಶ

ತರೀಕೆರೆ, ಶಿಕ್ಷಣ ನೀಡುವ ಜ್ಞಾನ ಜೀವನದಲ್ಲಿ ಬದಲಾವಣೆ ತಂದುಕೊಡುವ ಜತೆಗೆ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎ. ಪರಶುರಾಮಪ್ಪ ಹೇಳಿದರು.

ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಯುವ ಅವೃತ್ತಿ ಬಿಡುಗಡೆ ಸಮಾರಂಭ

ಕನ್ನಡಪ್ರಭ ವಾರ್ತೆ. ತರೀಕೆರೆ

ಶಿಕ್ಷಣ ನೀಡುವ ಜ್ಞಾನ ಜೀವನದಲ್ಲಿ ಬದಲಾವಣೆ ತಂದುಕೊಡುವ ಜತೆಗೆ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎ. ಪರಶುರಾಮಪ್ಪ ಹೇಳಿದರು.

ಮಂಗಳವಾರ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ನಡೆದ ಕನ್ನಡಪ್ರಭ ಯುವ ಅವೃತ್ತಿ ಬಿಡುಗಡೆಗೊಳಿಸಿ ಮಾತನಾಡಿದರು. ಶಿಕ್ಷಣದ ಮುಖ್ಯ ಉದ್ದೇಶವೇ ಜ್ಞಾನ, ಕನ್ನಡಪ್ರಭ ಯುವ ಅವೃತ್ತಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಪೂರಕ ವಾಗಿದೆ. ಪುಸ್ತಕವನ್ನು ಭಕ್ತಿ, ಶ್ರದ್ಧೆಯಿಂದ ಆರಾಧನೆ ಮಾಡಿ ಅಧ್ಯಯನ ಮಾಡಿ ಭವಿಷ್ಯ ಉಜ್ವಲವಾಗುತ್ತದೆ ಎಂದರು.

ಸಮೂಹ ಮಾದ್ಯಮಗಳು ವಿಸ್ತಾರವಾದ ಮಾಹಿತಿ ಕೊಡುತ್ತವೆ. ಪತ್ರಿಕೆಗೆ ಅಗಾಧವಾದ ಶಕ್ತಿ ಇದೆ. ಸಮಾಜಮುಖಿ ಶಿಕ್ಷಣ ದೃಷ್ಠಿ ಯಿಂದ ಕನ್ನಡ ಪ್ರಭ ಪತ್ರಿಕೆ ಮಾರ್ಗದರ್ಶನ ನೀಡುತ್ತಿದೆ. ಪಠ್ಯದ ವಿವಿಧ ವಿಷಯಗಳಲ್ಲಿ ಪ್ರಶ್ನೆಗಳನ್ನು ಸಿದ್ದಪಡಿಸುತ್ತಿದೆ. ಈ ಪ್ರಶ್ನೋತ್ತರಗಳನ್ನು ಚೆನ್ನಾಗಿ ಓದಿದರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಮನೋಸ್ಥೈರ್ಯ ಬರುತ್ತದೆ ಎಂದರು.ಸಮಯವನ್ನು ಉಪಯೋಗಿಸಿಕೊಂಡು ಅಧ್ಯಯನ ಶೀಲರಾಗಿ, ಓದಿದಷ್ಟೂ ಬರೆಯಬೇಕು, ವಿದ್ಯಾರ್ಥಿ ಜೀವನದಲ್ಲಿ ನಾವೆಷ್ಟು ಪರಿಶ್ರಮ ಹಾಕುತ್ತೇವೋ ಅಷ್ಟು ನಮ್ಮಭವಿಷ್ಯ ಉಜ್ವಲವಾಗುತ್ತದೆ. ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡು ಜ್ಞಾನ ಹೆಚ್ಚು ಮಾಡಿಕೊಳ್ಳಲು ಕನ್ನಡಪ್ರಭ ಯುವ ಅವೃತ್ತಿ ಸೂಕ್ತವಾಗಿದೆ. ಬರಲಿರುವ ವಾರ್ಷಿಕ ಪರೀಕ್ಷೆಗಳಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ಉತ್ತಮವಾಗಿ ಉತ್ತೀರ್ಣ ರಾಗಿ ನೂರಕ್ಕೆ ನೂರರಷ್ಟು ಫಲಿತಾಂಶ ತರಬೇಕು ಎಂದು ಶುಭ ಕೋರಿದರು.ಶಾಲೆ ಮುಖ್ಯ ಶಿಕ್ಷಕ ಕೆ.ಟಿ.ಹಾಲೇಶ್ ಮಾತನಾಡಿ ಪ್ರತಿನಿತ್ಯ ಬೆಳಿಗ್ಗೆ 5.45ಕ್ಕೆ ಕನ್ನಡಪ್ರಭ ಯುವ ಅವೃತ್ತಿ ಶಾಲೆಗೆ ಬರುತ್ತದೆ. ಪೂರ್ವ ಪಶ್ಟಿಮ ದಕ್ಷಿಣ ಉತ್ತರ 4 ದಿಕ್ಕುಗಳ ಸುದ್ದಿಗಳು, ಘಟನೆಗಳು ಮನೆಗೆ ಮನಸ್ಸಿಗೆ ಪತ್ರಿಕೆ ತಲುಪಿಸುತ್ತದೆ, ವಿದ್ಯಾರ್ಥಿಗಳಿಗಾಗಿ ಕೇವಲ 1 ರು.ಗಳಲ್ಲಿ ಪೂರ್ಣ ವಿವರಗಳು ಪತ್ರಿಕೆಯಲ್ಲಿ ಇರುತ್ತದೆ. ಉದ್ಯೋಗದ ಮಾಹಿತಿಯೂ ಕೂಡ ಇರುತ್ತದೆ, ಸ್ಥಳೀಯ, ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಸುದ್ದಿಗಳು ಇರುತ್ತದೆ.ಉತ್ತಮ ಫಲಿತಾಂಶಕ್ಕೆ ಪತ್ರಿಕೆ ಉತ್ತಮ ಸಾಧನೆಯಾಗಿದೆ ಎಂದು ಹೇಳಿದರು. ಕ್ಷೇತ್ರ ಸಂಪನ್ಮೂಲ ಅಧಿಕಾರಿ ರಾಘವೇಂದ್ರ ಮಾತನಾಡಿ ತಾಲೂಕಿನಲ್ಲಿ ಉತ್ತಮ ಪ್ರೌಢಶಾಲೆಗಳಿವೆ. ಪತ್ರಿಕೆ ಅತ್ಯುತ್ತಮವಾದ ಗೆಳೆಯ, ನಿಮ್ಮ ಪಠ್ಯಗಳ ಜೊತೆಗೆ ಸಾರಸ್ವತ ವಿಷಯಗಳು ಇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪತ್ರಿಕೆ ಅತ್ಯುತ್ತಮ ಸಾಧನೆ. ಸಮಕಾಲೀನ ವಿಷಯಗಳು ಇರುತ್ತದೆ ಎಂದು ಹೇಳಿದರು.

ಪತ್ರಕರ್ತ ಅನಂತ ನಾಡಿಗ್ ಮಾತನಾಡಿ ಕನ್ನಡಪ್ರಭ ಯುವ ಅವೃತ್ತಿಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುವ ರೀತಿಯಲ್ಲಿ ಗಣಿತ, ವಿಜ್ಞಾನ, ಸಾಮಾನ್ಯ ವಿಜ್ಞಾನ, ರಸಪ್ರಶ್ನೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವ ‍ವಿವಿಧ ವಿವರಗಳು ಮತ್ತಿತರ ಮಾಹಿತಿಗಳನ್ನು ಪತ್ರಿಕೆ ಒಳಗೊಂಡಿರುತ್ತದೆ. ವಿದ್ಯಾರ್ಥಿಗಳು ಈ ಅವಕಾಶ ಉಪಯೋಗಿಸಿ ಉತ್ತಮ ಫಲಿತಾಂಶ ಪಡೆಯಬೇಕು ಎಂದು ಮನವಿ ಮಾಡಿದರು.ಶಾಲೆ ಸಲಹಾ ಸಮಿತಿ ಉಪಾಧ್ಯಕ್ಷ ಷಡಾಕ್ಷರಪ್ಪ ಮಾತನಾಡಿ ಸರ್ವರ ಸಹಕಾರದಿಂದ ಶಾಲೆಯನ್ನು ಬಹಳ ಕಷ್ಟಪಟ್ಟು ಅಭಿವೃದ್ಧಿ ಪಡಿಸಲಾಗಿದೆ, ವಿದ್ಯೆಯೇ ಬಹಳ ದೊಡ್ಡದು, 97 ಮಕ್ಕಳು ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಿದರು.ವಿದ್ಯಾರ್ಥಿಗಳು ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಶಾಲೆ ಸಲಹಾ ಸಮಿತಿ ಸದಸ್ಯ ಮಲ್ಲೇಶಪ್ಪ, ಪಾರ್ವತಮ್ಮ, ಶಿಕ್ಷಕ ಸತೀಶ್, ಖಿಜರ್ ಖಾನ್, ರಮಾಕಾಂತ್, ಕನ್ನಡಪ್ರಭ ಪ್ರಸರಣಾಧಿಕಾರಿ ಕಿರಣ್ ರಾಜ್, ನಿಲಯ ಪಾಲಕಿ ಸುಕನ್ಯಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-

8ಕೆಟಿಆರ್.ಕೆ.1ಃ ತರೀಕೆರೆ ಸಮೀಪದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎ. ಪರಶುರಾಮಪ್ಪ ಕನ್ನಡಪ್ರಭ ಯುವ ಅವೃತ್ತಿ ಬಿಡುಗಡೆ ಮಾಡಿದರು. ಶಾಲೆ ಸಲಹಾ ಸಮಿತಿ ಉಪಾಧ್ಯಕ್ಷ ಷಡಾಕ್ಷರಪ್ಪ, ಮಲ್ಲೇಶಪ್ಪ, ಪಾರ್ವತಮ್ಮ, ಮುಖ್ಯ ಶಿಕ್ಷಕ ಕೆ.ಟಿ.ಹಾಲೇಶ್, ರಾಘವೇಂದ್ರ ಮತ್ತಿತರರು ಇದ್ದರು.

PREV