ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಳಗಾವಿ ಸರ್ಕಾರಿ ಸರ್ದಾರ್ ಪಪೂ ಕಾಲೇಜು ಇವರ ಸಹಯೋಗದಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರರವರು ಕಷ್ಟ ಜೀವನದಲ್ಲಿ ಓದಿನಲ್ಲಿ ಎಂದೂ ಹಿಂದೆ ಬೀಳದೆ ಶ್ರಮವಹಿಸಿ ಶಿಕ್ಷಣ ಕಲಿತು ಎಲ್ಲರಿಗೂ ದಾರಿದೀಪವಾಗಿದ್ದಾರೆ ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ಎಂ.ಎಂ.ಮುಲ್ಲಾ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಓದಿನ ಕಲಿಕೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಅದು ನಿಮ್ಮ ಜೀವನ ಬದುಕಿಗೆ ಶಕ್ತಿ ತುಂಬುತ್ತದೆ ಎಂದು ತಿಳಿಸಿದರು.ಎಸ್.ಆರ್.ಕಲಹಾಳ ಅವರು ಡಾ.ಬಾಬಾಸಾಹೇಬರ್ ಅಮೂಲ್ಯ ವಿಚಾರಗಳ ಕುರಿತು ಉಪನ್ಯಾಸ ನೀಡಿದರು. ಸಮಾರಂಭದ ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ವೈ.ಎಂ.ಪಾಟೀಲ ವಹಿಸಿದ್ದರು. ಕಾಲೇಜು ವಿದ್ಯಾರ್ಥಿಗಳಿಗೆ ಆಶು ಭಾಷಣ, ಗಾಯನ ಹಾಗೂ ನಿಬಂಧ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಸಂವಿಧಾನ ಪುಸ್ತಕ, ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ನಿಜಾಮೋದ್ದೀನ್.ಎಸ್, ಎ.ಬಿ.ಜಿಡ್ಡಿಮನಿ, ವಿ.ಪಿ.ಹತ್ತಿ, ಧಾಮಣೆ, ಎಸ್.ಎಸ್.ತಟಗಾರ, ಪರವೀಣ ಬಾನು, ಗಿರೀಶ ಕಬಟೆ, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.