ಹೊಸದುರ್ಗ: ಮಕ್ಕಳನ್ನು ರಾಷ್ಟ್ರದ ಸಂಪತ್ತಾಗಿಸಲು ಶಿಕಣ ಅಗತ್ಯ ಆದ್ದರಿಂದ ಶಿಕ್ಷಕರು, ಪೋಪಕರು ಮಕ್ಕಳಿಗೆ ಶಿಕಣ ಕೊಡಿಸುವಲ್ಲಿ ಹೆಚ್ಚಿನ ಜವಬ್ದಾರಿಯನ್ನು ವಹಿಸಬೇಕು ಎಂದು ತಾಪಂ ಇಒ ಸುನಿಲ್ ಕುಮಾರ್ ಹೇಳಿದರು.
ಇಂದಿನ ಸ್ಪಧಾ೯ತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ನಡೆಸಬೇಕು. ಗ್ರಾಮ ಪಂಚಾಯಿತಿ, ಗ್ರಂಥಾಲಯ, ಪೋಸ್ಟ್ ಆಫೀಸ್, ಬ್ಯಾಂಕ್ , ಆಸ್ಪತ್ರೆಗಳ ಪರಿಚಯ ಮಾಡಿ ಕೊಡುವ ಮೂಲಕ ಮಕ್ಕಳಿಗೆ ಅಗತ್ಯ ಸೌಲಭ್ಯಗಳನ್ನು ನೀಡಲು ಪಂಚಾಯಿತಿಯಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ನಬಾರ್ಡ್‌ನ ಜಿಲ್ಲಾ ಡಿಡಿಎಂ ಅಧಿಕಾರಿ ಕವಿತಾ ಮಾತನಾಡಿ, ಮಕ್ಕಳಿಗೆ ಕನ್ನಡದ ಜೊತೆಗೆ ಇಂಗ್ಲೀಷ್ ಶಿಕಣವು ಅಗತ್ಯ. ಪೋಷಕರು, ಶಿಕ್ಷಕರು, ಪಂಚಾಯತಿ ಮಕ್ಕಳಿಗೆ ಶಿಕಣ ಕೊಡಿಸುವಲ್ಲಿ ಜವಬ್ದಾರಿಯನ್ನು ವಹಿಸಿಬೇಕು. ವಿವಿಧ ಸ್ಪಧಾ೯ತ್ಮಕ ಚಟುವಟಿಕೆ ನಡೆಸಬೇಕು. ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಬೆಳೆಯಲು ದಿನ ಪತ್ರಿಕೆಗಳನ್ನು ಓದಿಸಬೇಕೆಂದು ಸಲಹೆ ನೀಡಿದರು.ನಿಸಗ೯ ಸಂಸ್ಥೆ ಯ ಜಯಮ್ಮ ಮಾತನಾಡಿ, ಪೋಷಕರು ಹೆಣ್ಣು ಮಕ್ಕಳಿಗೆ ಗುಡ್ ಟಚ್-ಬ್ಯಾಡ್ ಟಚ್ ಬಗ್ಗೆ ಮತ್ತು ರಸ್ತೆ ದಾಟುವಾಗ ಎಚ್ಚರಿಕೆ ಸೂಚನೆ ನೀಡಬೇಕು. ಮಹಿಳೆಯರು ಸ್ವ ಸಹಾಯ ಸಂಘಗಳ ಮೂಲಕ ಬ್ಯಾಂಕ್ ನೆರವು ಪಡೆದು ಆಥಿ೯ಕ ಸಬಲರಾಗಬೇಕು ಎಂದು ತಿಳಿಸಿದರು.
ಕಾಯ೯ಕ್ರಮ ದ ಅಧ್ಯಕ್ಷತೆ ಯನ್ನು ಗ್ರಾ.ಪಂ.ಅಧ್ಯಕ್ಷ ಮಂಜುನಾಥ್ ಜಿ.ಡಿ ವಹಿಸಿದ್ದರು.
ಇದೇ ಸಂದಭ೯ದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಏಪ೯ಡಿಸಿದ್ದ ವಿವಿಧ ಸ್ಪಧಾ೯ಗಳ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.