ಶಿಕ್ಷಣದಿಂದಲೇ ಎಲ್ಲ ಸಮುದಾಯಗಳ ಉದ್ಧಾರ

KannadaprabhaNewsNetwork |  
Published : Jul 28, 2025, 01:40 AM IST
ಕಾರ್ಗಿಲ್ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಶಿಕ್ಷಣ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂಬುದು ಸಂಗನಬಸವ ಸ್ವಾಮಿಗಳು ಕಂಡುಕೊಂಡ ಸತ್ಯವೆಂದು ಸುಕ್ಷೇತ್ರ ಯರನಾಳ ಸಂಸ್ಥಾನ ವಿರಕ್ತಮಠದ ಗುರುಸಂಗನಬಸವ ಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಶಿಕ್ಷಣ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂಬುದು ಸಂಗನಬಸವ ಸ್ವಾಮಿಗಳು ಕಂಡುಕೊಂಡ ಸತ್ಯವೆಂದು ಸುಕ್ಷೇತ್ರ ಯರನಾಳ ಸಂಸ್ಥಾನ ವಿರಕ್ತಮಠದ ಗುರುಸಂಗನಬಸವ ಸ್ವಾಮಿಗಳು ಹೇಳಿದರು.ನಗರದ ಹೊರವಲಯದ ಇಟ್ಟಂಗಿಹಾಳದ ವೇದ ಅಕಾಡೆಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ವೇದ ಇಂಟರನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಕ್ರಾಂತಿಯ ಹರಿಕಾರ ಸಂಗನಬಸವ ಮಹಾಸ್ವಾಮಿಗಳ 125ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ಸಮುದಾಯದವರು ಉದ್ಧಾರವಾಗಬೇಕಾದರೆ ಶಿಕ್ಷಣವೊಂದೇ ಮಾರ್ಗವೆಂದು ಹೇಳಿದರು.ಶಾಲೆಯ ಪ್ರಾಂಶುಪಾಲ ಮಧ್ವಪ್ರಸಾದ.ಜಿ.ಕೆ ಶ್ರೀಗಳ ಸಮಗ್ರ ಜೀವನ ಸಾಧನೆಯನ್ನು ವಿವರಿಸಿದರು. ಬಾಲಕ ಸಂಗನಬಸವ ಆರನೇ ತರಗತಿಯಲ್ಲಿದ್ದಾಗಲೇ ರಾಜಾ ಹರಿಶ್ಚಂದ್ರ ನಾಟಕದಲ್ಲಿ ತಾರಾಮತಿಯ ಪಾತ್ರ ಮಾಡಿದ ಹಿರಿಮೆ. ತಮ್ಮ ಏಳನೇ ತರಗತಿಯಲ್ಲಿದ್ದಾಗಲೇ ಬಬಲೇಶ್ವರದ ಶಾಂತವೀರ ಶಿವಯೋಗಿಗಳಲ್ಲಿ ಸಂಸ್ಕೃತ ಅಧ್ಯಯನದ ಜೊತೆಗೆ ಕೇವಲ 16ನೇ ವಯಸ್ಸಿನಲ್ಲಿಯೇ 500ವರ್ಷಗಳ ಇತಿಹಾಸವಿರುವ ಪಂಪಾಪತಿ ಶಿವಯೋಗಿಗಳ ಪರಂಪರೆಯಲ್ಲಿ ಬಂದ ಹಂಪಯ್ಯ ಶಿವಯೋಗಿಗಳಿಂದ ಸನ್ಯಾಸಿ ದೀಕ್ಷೆ ಪಡೆದರು. ಫ.ಗು.ಹಳಕಟ್ಟಿ ಅವರೊಂದಿಗೆ ಸೇರಿ ಬಿ.ಎಲ್.ಡಿ.ಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದು ಸಿದ್ದೇಶ್ವರ ಸಂಸ್ಥೆಯನ್ನು ಹುಟ್ಟುಹಾಕಿದ್ದಲ್ಲದೇ ಕರ್ನಾಟಕ ಗಾಂಧಿ ಹರ್ಡೆಕರ್ ಮಂಜಪ್ಪನವರಿಂದ ರಾಷ್ಟ್ರ ದೀಕ್ಷೆ ಪಡೆದು ಮಠಗಳ ಮೂಲಕ ರಾಷ್ಟ್ರಾಭಿಮಾನ ಹೆಚ್ಚಿಸಿದ ಸಂತರಾದರು. 1954ರಲ್ಲಿ ವಿಜಯಪುರದಲ್ಲಿ 770 ಅಮರಗಣಾಧೀಶ್ವರರ ಪೂಜೆ ನೆರವೇರಿಸಿ ಇಂದು ಲಿಂಗದಗುಡಿಯೆಂದೇ ಪ್ರಸಿದ್ದಿ ಪಡೆಯುವಂತೆ ಬಂಥನಾಳ ಮಠವನ್ನು ರಾಷ್ಟ್ರದ ಮಠವನ್ನಾಗಿ ಮಾಡಿದರು ಎಂದು ವಿವರಿಸಿದರು.ಜಿ.ಬಿ.ಕುಲಕರ್ಣಿ ಮಾತನಾಡಿ ಬಂಥನಾಳ ಶಿವಯೋಗಿಗಳ ಶೈಕ್ಷಣಿಕ ಸೇವೆಯಲ್ಲದೇ ಆಧ್ಯಾತ್ಮಿಕ ಧಾರ್ಮಿಕ ಸಾಮಾಜಿಕ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸೇವೆಯನ್ನು ಸ್ಮರಿಸಿದರು.ವಿ.ಡಿ.ಮಾದನಶೆಟ್ಟಿ ಮಾತನಾಡಿದ, ತಮ್ಮ ತಂದೆಯವರ ಹಾಗೂ ಸಂಗನಬಸವ ಸ್ವಾಮಿಗಳ ಒಡನಾಟವನ್ನು ಶ್ರೀಗಳು ಅವರ ತಂದೆಯವರಿಗೆ ಬರೆದ ಪತ್ರಗಳನ್ನು ತೋರಿಸುವುದರ ಮುಖೇನ ನುಡಿನಮನ ಸಲ್ಲಿಸಿದರು.ವೇದ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಶಿವಾನಂದ ಕೆಲೂರ ಅಧ್ಯಕ್ಷೀಯ ನುಡಿಗಳನ್ನಾಡಿದರು. ವೇದ ಸಮೂಹ ಸಂಸ್ಥೆಗಳನ್ನು ಕಟ್ಟಲು ಸಂಗನಬಸವ ಸ್ವಾಮಿಗಳೇ ಪ್ರೇರಣೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವೇದ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ದಯಾನಂದ ಕೆಲೂರ ಅವರೊಂದಿಗೆ ವೇದ ಇಂಟರನ್ಯಾಷನಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಸುನೀಲ.ಬಿ.ಎಮ್ ಜೊತೆಗೆ ವೇದ ಅಕಾಡೆಮಿಯ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಶ್ಮಿ ಕವಟಗಿಮಠ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಮಕ್ಕಳು ನಡೆಸಿಕೊಟ್ಟ ಸಂಗನಬಸವ ಸ್ವಾಮಿಗಳ ಕುರಿತ ಕಿರುನಾಟಕ ಹಾಗು ನೃತ್ಯರೂಪಕಗಳು ನೋಡುಗರ ಗಮನ ಸೆಳೆದವು. ಕನ್ನಡ ವಿಭಾಗದ ಶಿಕ್ಷಕಿ ಕವಿತಾ ಬಿರಾದಾರ ಹಾಗು ವಿಜಯಲಕ್ಷ್ಮಿ ಹಂದ್ರಾಳ ಕಾರ್ಯಕ್ರಮ ನಿರೂಪಿಸಿದರು. ಮಧುಶ್ರಿ ಕುಲಕರ್ಣಿ ವಂದಿಸಿದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ