ಕಡೂರು ತಾಲೂಕಿನ ಜನತೆಗೆ ಶಿಕ್ಷಣವೇ ಅಭಿವೃದ್ಧಿ ಅಸ್ತ್ರ

KannadaprabhaNewsNetwork | Published : Mar 12, 2024 2:00 AM

ಸಾರಾಂಶ

ಸದಾ ಬರಗಾಲಕ್ಕೆ ತುತ್ತಾಗುವ ಕಡೂರು ತಾಲೂಕಿನ ಜನತೆಗೆ ಶಿಕ್ಷಣವೇ ಅಭಿವೃದ್ಧಿ ಅಸ್ತ್ರವಾಗಿದ್ದು. ಮಕ್ಕಳ ಶಿಕ್ಷಣ ಕಲಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯಲ್ಲಿ ಶಾಸಕ ಕೆ.ಎಸ್.ಆನಂದ್

ಕನ್ನಡಪ್ರಭ ವಾರ್ತೆ,ಕಡೂರು

ಸದಾ ಬರಗಾಲಕ್ಕೆ ತುತ್ತಾಗುವ ಕಡೂರು ತಾಲೂಕಿನ ಜನತೆಗೆ ಶಿಕ್ಷಣವೇ ಅಭಿವೃದ್ಧಿ ಅಸ್ತ್ರವಾಗಿದ್ದು. ಮಕ್ಕಳ ಶಿಕ್ಷಣ ಕಲಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಬಾರ್ಡ್ ಅನುದಾನದಡಿ1.58 ಕೋಟಿ ರು. ವೆಚ್ಚದಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕ ವಾತಾವರಣವಿಲ್ಲದ ಕಾರಣ ತಾಲೂಕಿನ ಜನತೆ ಶಿಕ್ಷಣದ ಮೂಲಕ ತಮ್ಮ ಜೀವನದ ಮಟ್ಟ ಸುಧಾರಿಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಬೇಕು ಎನ್ನುವುದು ತಾವೂ ಸೇರಿದಂತೆ ತಾಲೂಕಿನ ಜನತೆ ಅಭಿಲಾಷೆ. ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲೆಯಲ್ಲೆ ಅತಿ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಮೊದಲು ಫಲಿತಾಂಶದಲ್ಲೂ ರಾಜ್ಯದಲ್ಲಿ 2ನೇ ಸ್ಥಾನ ಪಡೆಯುತ್ತಿತ್ತು. ಕೆಲ ಕಾರಣಗಳಿಂದ ಇತ್ತೀಚೆಗೆ ಫಲಿತಾಂಶದಲ್ಲಿ ಸ್ವಲ್ಪ ಹಿನ್ನಡೆಯಾಗಿದೆ. ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರೊಂದಿಗೆ ಚರ್ಚೆ ನಡೆಸಲಾಗುವುದು. ಈ ಮೂಲಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಹಾಲಮ್ಮಸಿದ್ರಾಮಪ್ಪ, ಕಾಲೇಜಿನ ಪ್ರಾಚಾರ್ಯ ಡಾ.ತವರಾಜ್, ಬಿಇಒ ಆರ್.ಸಿದ್ದರಾಜನಾಯ್ಕ, ಲೋಕೋಪಯೋಗಿ ಇಲಾಖೆ ಎಇಇ ವೈ.ಆರ್. ಬಸವರಾಜ್, ಉಪ ಪ್ರಾಂಶುಪಾಲರಾದ ಎಚ್.ಆರ್. ರೇಖಾ, ಮುಖಂಡರಾದ ಸಪ್ತಕೋಟಿ ಧನಂಜಯ, ಬೆಂಕಿಶೇಖರಪ್ಪ, ಇಮ್ರಾನ್‌ಖಾನ್, ಜೋಡಿತಿಮ್ಮಾಪುರ ಕೆ.ಟಿ.ನರಸಿಂಹ, ಗುತ್ತಿಗೆದಾರ ಸಿ.ಗಿರೀಶ್, ಶಿವು, ಅವಿನಾಶ್ ಮತ್ತಿತರಿದ್ದರು.

11ಕೆಕೆಡಿಯು1.

ಕಡೂರು ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಬಾರ್ಡ್ ಅನುದಾನದಡಿ 1.58 ಕೋಟಿರೂ ವೆಚ್ಚದ ಕಾಲೇಜು ಕಟ್ಟಡ ನಿರ್ಮಾಣದ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ ನೆರವೇರಿಸಿದರು.

Share this article