ಕನ್ನಡಪ್ರಭ ವಾರ್ತೆ ಚಿಂತಾಮಣಿ
ಈಗಿನ ಕಾಲಕ್ಕೆ ನಿರೀಕ್ಷಿತ ಮಟ್ಟಕ್ಕೆ ನಾವು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಣದ ವೇಗವನ್ನು ಹೆಚ್ಚಿಸಲು ಸರ್ಕಾರ ಹಲವಾರು ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದಕ್ಕೆ ದಾನಿಗಳ ಸಹಕಾರ ದೊರೆಯುತ್ತಿದೆ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ನುಡಿದರು.ನಗರದ ವೆಂಕಟಗಿರಿಕೋಟೆಯಲ್ಲಿನ ಒಸಾಟ್ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ಬೆಂಗಳೂರು ಒನ್ ಸ್ಕೂಲ್ ಆಟ್ ಎ ಟೈಮ್ ಸಹಯೋಗದಲ್ಲಿ ೧.೨೫ ಕೋಟಿ ರು.ಗಳ ವೆಚ್ಚದಲ್ಲಿ ಸರ್ಕಾರಿ ಪ್ರೌಢಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರಿ ಸೌಲಭ್ಯ ಬಳಸಿಕೊಳ್ಳಿಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಹಲವಾರು ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಸರ್ಕಾರ ಹಾಗೂ ದಾನಿಗಳು ನೀಡುವ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಗುಣಮಟ್ಟದ ವಿದ್ಯಾಭ್ಯಾಸವನ್ನು ಪಡೆದು ಉತ್ತಮ ಫಲಿತಾಂಶವನ್ನು ಪಡೆಯುವುದರ ಮೂಲಕ ಶಾಲೆಗೆ, ತಂದೆ-ತಾಯಿಗಳಿಗೆ ಕೀರ್ತಿ ತರಬೇಕೆಂದರು.
ಶಿಕ್ಷಕರು ಕಂಪೂಟ್ಯರ್ ಕಲಿಯಬೇಕು ಮತ್ತು ಆಂಗ್ಲ ಭಾಷೆಯಲ್ಲಿ ಮಕ್ಕಳೊಂದಿಗೆ ಸಂಭಾಷಣೆ ಮಾಡಬೇಕು ಮೂಲಭೂತ ಸೌಲಭ್ಯ ಸೌಕರ್ಯಗಳನ್ನು ಕೊಟ್ಟು ಶಾಲೆ ಅಭಿವೃದ್ದಿ ಮಾಡಿದಾಗ ಮಕ್ಕಳು ಶಾಲೆಗೆ ಬಂದು ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತದೆ. ಶಿಕ್ಷಕರು ಸಹಾ ಕಂಪ್ಯೂಟರ್ ಕಲಿಯಬೇಕು. ಮಕ್ಕಳಿಗೆ ಕಲಿಸಬೇಕು ಎಲ್ಲ ಶಾಲೆಗಳಲ್ಲಿ ಸ್ಕಾರ್ಟ್ ಕ್ಲಾಸ್ ಮಾಡಬೇಕು ಎಂದರು.೨೦ ಸಾವಿರ ಕೋಟಿ ಹೊರೆ
೭ನೇ ಆಯೋಗದ ವೇತನದಿಂದ ಸರ್ಕಾರಕ್ಕೆ ೨೦ ಸಾವಿರ ಕೋಟಿ ಹೊರೆಯಾಗುತ್ತಿದೆ. ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡಬೇಕು. ತೈಲಗೇರಿ ವೆಂಕಟರಾಯಪ್ಪ ಕುಟುಂಬದ ಮುಖ್ಯಸ್ಥೆ ಹಾಗೂ ದಾನಿ ಶುಭರಿಂದ ನಮ್ಮ ತಾಲ್ಲೂಕಿಗೆ ಮತ್ತಷ್ಟು ಕೊಡುಗೆ ಬೇಕಾಗಿದೆ. ದಾನಿಗಳು ವಸತಿ ಶಾಲೆಗಳ ಅಭಿವೃದ್ದಿಯತ್ತ ತಮ್ಮ ಗಮನ ಹರಿಸಬೇಕೆಂದು ಮನವಿ ಮಾಡಿದರು.ದಾನಿ ಶುಭ ಮಾತನಾಡಿ ಇದು ಬರಿಃ ಕಟ್ಟಡ ಮಾತ್ರವಲ್ಲ ಜ್ಞಾನ ದೇಗುಲವಿದ್ದಂತೆ ಮಕ್ಕಳು ಈ ಶಾಲೆಯಲ್ಲಿ ನಿಷ್ಠೆಯಿಂದ ಚೆನ್ನಾಗಿ ಓದಿ ಕಲಿತು ಜ್ಞಾನ ಬೆಳೆಸಿಕೊಂಡು ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡು ಉತ್ತಮ ಪ್ರಜೆಗಳಾಗಿ ಭಾರತವನ್ನು ಮುಂದುವರಿಸಿಕೊಂಡು ಹೋಗಬೇಕೆಂದು ನುಡಿದು ಕಠಿಣ ಶ್ರಮ ವiತ್ತು ದಿಟ್ಟತನ ಹಾಗೂ ಗುರುಗಳನ್ನು ಗೌರವದಿಂದ ಪ್ರೀಸಬೇಕೆಂದರು. ಸಾಜನೇಯ ಹಾದಿಯು ಉತ್ಸಾಹಕ್ಕೆ ದಾರಿ ಸ್ನೇಹಿತರನ್ನು ಬೆಂಬಲಿಸಬೇಕೆಂದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮುನಿಕೆಂಪಣ್ಣ, ಇಓ ಎಸ್. ಆನಂದ್, ಬಿಇಒ ಉಮಾದೇವಿ, ಪೌರಾಯುಕ್ತ ಜಿ.ಎನ್.ಚಲಪತಿ, ಒಸಾಟ್ ಸಂಸ್ಥೆಯ ಆಧ್ಯಕ್ಷ ವಾಧಿರಾಜ್ ಭಟ್, ನಗರಸಭೆ ಅಧ್ಯಕ್ಷ ಜಗನ್ನಾಥ್, ಉಪಾಧ್ಯಕ್ಷೆ ರಾಣಿಯಮ್ಮ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಾಬುರೆಡ್ಡಿ, ನಗರಸಭಾ ಸದಸ್ಯ ಜೈಬೀಮ್ ಮುರಳಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಗೋವಿಂದರಾಜ್, ಶಾಲೆಯ ಮುಖ್ಯಶಿಕ್ಷಕ ಮಂಜುನಾಥ್, ಅಕ್ಷರ ದಾಸೋಹ ನಿರ್ದೇಶಕ ಸುರೇಶ್ ಸೇರಿದಂತೆ ಓಸಾಟ್ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.