ಸಂಸ್ಕಾರ ಕಲಿಸುತ್ತಿಲ್ಲ ಶಿಕ್ಷಣ ಸಂಸ್ಥೆಗಳು

KannadaprabhaNewsNetwork |  
Published : Apr 13, 2024, 01:11 AM IST
ಜಯಂತಿ | Kannada Prabha

ಸಾರಾಂಶ

ಹುನಗುಂದ ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡುವ ಜೊತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುತ್ತಿಲ್ಲ ಎಂದು ಗಚ್ಚಿನಮಠದ ಅಮರೇಶ್ವರ ದೇವರು ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹುನಗುಂದ

ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡುವ ಜೊತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುತ್ತಿಲ್ಲ ಎಂದು ಗಚ್ಚಿನಮಠದ ಅಮರೇಶ್ವರ ದೇವರು ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಗಚ್ಚಿನ ಮಠದಲ್ಲಿ ನಡೆದ ಹಾನಗಲ್ಲ ಕುಮಾರೇಶ್ವರ ಶಿವಯೋಗಿಗಳ ಹಾಗೂ ಆದಿಜಗದ್ಗುರು ರೇಣುಕಾಚಾರ್ಯರ ಜಯಂತಿ ಹಾಗೂ ಭಾವೈಕ್ಯತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರೇಶ್ವರ ಶಿವಯೋಗಿ ಮತ್ತು ರೇಣುಕಾರ್ಯರರು ಸಮಾಜಕ್ಕೆ ಹಾಕಿ ಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕುಮಾರೇಶ್ವರ ಶಿವಯೋಗಿಯವರು ಸಮಾಜಕ್ಕಾಗಿ ಜೀವನ ಪಣಕ್ಕಿಟ್ಟು ಶಿವಯೋಗ ಮಂದಿರ ಸ್ಥಾಪನೆಗಾಗಿ ಜೋಳಿಗೆ ಹಿಡಿದು ಹಳ್ಳಿಗಳಲ್ಲಿ ಸಂಚರಿಸಿ ಸಂಘಟನೆ ಮಾಡಿ ಅಖಿಲ ಭಾರತ ವೀರಶೈವ ಮಹಾಸಭಾ ಕಟ್ಟಿದರು ಎಂದರು.

ಆದಿಜಗದ್ಗುರು ರೇಣುಕಾಚಾರ್ಯರು ಧರ್ಮ ಸ್ಥಾಪನೆ ಮಾಡಲು ಮತ್ತು ಸಂರಕ್ಷಣೆ ಮಾಡಲು ಧರ್ಮ ಎತ್ತಿ ಹಿಡಿಯಲು ಅವತರಿಸಿದ್ದರು. ಧರ್ಮ ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ. ದುಷ್ಟ ಶಕ್ತಿಗಳ ಚಟಗಳು ನಿರ್ಮೂಲನೆ ಆಗುತ್ತದೆ. ಮಕ್ಕಳು ಯಾವುದೇ ದುಶ್ಚಟಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಪ್ರಭು ಮಾಳಗಿತ್ತಿಮಠ ಉಪನ್ಯಾಸ ನೀಡಿದರು. ವೇದಮೂರ್ತಿ ಮಹಾಂತಯ್ಯ ಗಚ್ಚಿನಮಠ, ಪರಸಪ್ಪ ಆಲೂರ, ಶೇಖರಪ್ಪ ಬಾದವಾಡಗಿ, ಬಸಯ್ಯ ಹಿರೇಮಠ, ಮಹಾಂತೇಶ ಮಠ, ಸಾಂತಪ್ಪ ಹೊಸಮನಿ, ಅರುಣೋದಯ ದುದ್ಗಿ, ಸುರೇಶ ಹಳಪೇಟಿ, ಗಂಗಣ್ಣ ಇಲಕಲ್ಲ, ಮಹಾಲಿಂಗಯ್ಯ ಹಿರೇಮಠ, ವಿಶ್ವನಾಥ ಹಿರೇಮಠ, ಮಂಜುನಾಥ ಆಲೂರ, ಅಮರೇಶ ಕರಂಡಿ ವಿನೋದ ಕುಂಬಾರ ಸೇರಿದಂತೆ ಮಠದ ಎಲ್ಲಾ ಭಕ್ತರು ಸಮಾಜದ ಹಿರಿಯರು ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.---

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ