ಶೈಕ್ಷಣಿಕ ಉನ್ನತಿಯೇ ಸಮಾಜದ ಪ್ರಗತಿಗೆ ಸಹಕಾರಿ: ಗೋಂಗ್ಲೆ

KannadaprabhaNewsNetwork |  
Published : Nov 21, 2023, 12:45 AM IST
 ಗುರುಮಠಕಲ್ ಪಟ್ಟಣದ ಅಕ್ಕಮ್ಮ ದೇವಸ್ಥಾನದಲ್ಲಿ ರಾಜರಾಜೇಶ್ವರ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ಶೈಕ್ಷಣಿಕ ಉನ್ನತಿಯೇ ಸಮಾಜದ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಹಣಮಂತರಾವ ಗೋಂಗ್ಲೆ ಹೇಳಿದರು. ಪಟ್ಟಣದ ಅಕ್ಕಮ್ಮ ದೇವಸ್ಥಾನದಲ್ಲಿ ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದ ವತಿಯಿಂದ ನಡೆದ ರಾಜರಾಜೇಶ್ವರ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜರಾಜೇಶ್ವರ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಗುರುಮಠಕಲಶೈಕ್ಷಣಿಕ ಉನ್ನತಿಯೇ ಸಮಾಜದ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಹಣಮಂತರಾವ ಗೋಂಗ್ಲೆ ಹೇಳಿದರು. ಪಟ್ಟಣದ ಅಕ್ಕಮ್ಮ ದೇವಸ್ಥಾನದಲ್ಲಿ ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದ ವತಿಯಿಂದ ನಡೆದ ರಾಜರಾಜೇಶ್ವರ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕ್ಷತ್ರೀಯ ಕುಲದಲ್ಲಿ ಜನಸಿದ ನಾವು ರಾಜರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ರಾವಣ ಯುದ್ಧ ಸಮಯದಲ್ಲಿ ಸಹಸ್ತ್ರಾರ್ಜುನ ಮಹಾರಾಜರ ಬಳಿ ಪ್ರಾಣ ಭಿಕ್ಷೆ ಕೇಳಿದ್ದನ್ನು ಸ್ಮರಿಸಿ ಮಹಾರಾಜರ ಪರಾಕ್ರಮದ ಕುರಿತು ವಿವರಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ಮುಖಂಡ ಬುಡ್ಡಪ್ಪ ಜನಾರ್ಧನ ಮಾತನಾಡಿ, ದತ್ತಾತ್ರೇಯ ಮಹಾರಾಜರಿಂದ ಸಹಸ್ತ್ರ ಬಾಹುಗಳು ಶಕ್ತಿಯ ವರ ಪಡೆದ ಮಹಾರಾಜರು ಅತ್ಯಂತ ಪರಾಕ್ರಮಿ ಆಗಿದ್ದರು ಎಂದರು.

ಸಮಾಜದ ಅಧ್ಯಕ್ಷ ಚಂದುಲಾಲ ಚೌದರಿ ಮಾತನಾಡಿ, ಕ್ಷತ್ರೀಯ ಕುಲದಲ್ಲಿ ಜನಿಸಿದ ನಾವು ಸದಾ ಅಧರ್ಮದ ವಿರುದ್ಧ ಹೋರಾಡಬೇಕು. ನಮ್ಮ ಭವ್ಯ ಸಂಸ್ಕೃತಿ, ಆಚರಣೆಗಳ ಮೂಲಕ ಮಾದರಿಯಾಗುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.

ಎಎಸ್ಐ ನರಸಿಂಗರಾವ್ ಚೌದರಿ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಾದ ಅನೀಲ ಬಸೂದೆ, ಕಲ್ಪೇಶ ಮೇಂಗಜಿ, ಚೇತನ್ ಹಬೀಬ, ಶುಭಂ ಜಾತ್ರಿ, ವೈಷ್ಣವಿ ಗೋಂಗ್ಲೆ, ರಜತ ಚೌದರಿ, ಯಶ್ಮಿತಾ ಚೌದರಿ, ಶೃತಿ ಹಬೀಬ ಅವರನ್ನು ಸನ್ಮಾನಿಸಲಾಯಿತು.

ಪ್ರಮುಖರಾದ ರಾಮಕಿಶನರಾವ ಗೋಂಗ್ಲೆ, ಡಿ. ನರಸಿಂಗರಾವ ಕಾಶಿಗಾವ್, ಅಂಬಾದಾಸ ಜೀತ್ರಿ, ಯಶವಂತರಾವ ಚೌದರಿ, ದಶರಥರಾವ ಧಡಂಗೆ, ಜವಾಹರಲಾಲ್ ಮೇಂಗಜಿ, ಲಕ್ಷ್ಮಣರಾವ ಕಮಲಾಪುರ, ಲಕ್ಷ್ಮಣರಾವ ಚೌದರಿ, ರೇಣುಕಾ ಗೋಂಗ್ಲೆ, ಚಂದ್ರಕಾಂತ ಚೌದರಿ ವೇದಿಕೆಯಲ್ಲಿದ್ದರು. ಇದಕ್ಕೂ ಮುನ್ನ ದೇವಸ್ಥಾನದಲ್ಲಿ ರಾಜರಾಜೇಶ್ವರ ಸಹಸ್ತ್ರಾರ್ಜುನ ಮಹಾರಾಜರ ಪೂಜೆ ನೆರವೇರಿತು. ನಂತರ ಮುಖ್ಯ ಬೀದಿಗಳ ಮೂಲಕ ಸಾಗಿದ ಭವ್ಯ ಶೋಭಾಯಾತ್ರೆಯಲ್ಲಿ ಸಮಾಜದವರು ಪಾಲ್ಗೊಂಡಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ