ಚನ್ನಪಟ್ಟಣ: ನಗರದ ಪೊಲೀಸ್ ಭವನದಲ್ಲಿ ಧರಣಿ ನಡೆಸುತ್ತಿದ್ದ ರೈತರ ಮನವೊಲಿಸಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾತುಕತೆ ನಡೆಸಿದರಾದರೂ ವಿಫಲಗೊಂಡಿತು. ತಮ್ಮ ಬೇಡಿಕೆಗಳನ್ನು ಮುಂದಿಟ್ಟ ರೈತರು, ಬೇಡಿಕೆ ಈಡೇರುವವರೆಗೆ ಉಪವಾಸ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಮಾತನಾಡಿದ ರೈತರು, ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೆವು. ರೈತ ಮುಖಂಡರು ಡೀಸಿ ಕಚೇರಿಯಲ್ಲಿ ಮಾತುಕತೆ ನಡೆಸಿ ರಸ್ತೆತಡೆ ಕೈಬಿಡಲು ರೈತರ ಮನವೊಲಿಸಲಾಗುವುದು ಎಂದು ತಿಳಿಸಿದ್ದರೂ ನಮ್ಮನ್ನು ಬಂಧಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.
ಮಹಿಳೆಯರನ್ನು ಎಳೆದಾಡಿರುವ, ಅಸ್ವಸ್ಥಗೊಂಡಿದ್ದರೂ ಚಿಕಿತ್ಸೆ ಕೊಡಿಸದೇ ಅಮಾನುಷವಾಗಿ ವರ್ತಿಸಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ನಮ್ಮನ್ನು ಬಂಧಿಸಿದ್ದು ಸರಿಯಲ್ಲ. ಇದಕ್ಕೆ ಉತ್ತರ ನೀಡುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದರು.ತೆರವು ಗೊಳಿಸುವುದು ಅನಿವಾರ್ಯ: ಜಿಲ್ಲಾಧಿಕಾರಿ ಯಶವಂತ್ ಮಾತನಾಡಿ, ಬಿಡದಿ ಟೌನ್‌ಶಿಪ್ ಪರ ರೈತರು ಸಹ ಪ್ರತಿಭಟನೆಗೆ ಸಿದ್ದತೆ ಮಾಡಿಕೊಳ್ಳಲು ಮುಂದಾಗಿದ್ದರು. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ವಶಕ್ಕೆ ಪಡೆದಿದ್ದೇವೆ. ನಿಮ್ಮನ್ನು ವಶಕ್ಕೆ ಪಡೆದಿದ್ದೇವೆ. ನಿಮ್ಮನ್ನು ರಾತ್ರಿಯೇ ಮನೆಗೆ ಹೋಗಲು ತಿಳಿಸಿದ್ದೆವು. ಯಾರನ್ನೂ ಬಂಧಿಸಿ ಇಟ್ಟುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿ ಮಾತನಾಡಿ, ಬೈರಮಂಗಲದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ನಡೆಸಲು ಆದೇಶಿಸುತ್ತೇನೆ. ವರದಿ ನೀಡಲು ಸರ್ಕಾರ ರಚಿಸಿರುವ ಸಮಿತಿಗೆ ನಿಮ್ಮ ಅಹವಾಲು ತಿಳಿಸುತ್ತೇನೆ. ಈಗಾಗಲೇ ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನಿಮಗೆ ಆಗಬಹುದಾದ ಎಲ್ಲಾ ರೀತಿಯ ನೆರವನ್ನು ನೀಡುತ್ತೇವೆ ಎಂದು ಭರವಸೆ ನೀಡಿದರಾದರೂ ರೈತರು ಉಪವಾಸ ಸತ್ಯಾಗ್ರಹ ಕೈಬಿಡಲು ಸಮ್ಮತಿಸಲಿಲ್ಲ.
ಪ್ರತಿಭಟನಾಕಾರರ ಬೇಡಿಕೆಗಳು:
೨. ರೈತರನ್ನು ಏಕಾಏಕಿ ಬಂಧಿಸಿದ್ದಕ್ಕೆ ಸ್ಪಷ್ಟಕಾರಣ ನೀಡಬೇಕು. ಮಹಿಳೆಯರ ಮೇಲೆ ಪೊಲೀಸರು ದೌರ್ಜನ್ಯದ ವಿರುದ್ಧ ಉನ್ನತಮಟ್ಟದ ತನಿಖೆ ನಡೆಸಬೇಕು.
೪. ನ್ಯಾ. ಗುಹನಾಥನ್ ನರೇಂದರ್ ಸಮಿತಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಹವಾಲು ಆಲಿಸುವ ಬದಲು ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ ಕಚೇರಿಯಲ್ಲಿ ಅಹವಾಲು ಆಲಿಸಬೇಕು. ಕನಿಷ್ಠ ಒಂದು ವಾರ ಕಾಲಾವಕಾಶ ನೀಡಬೇಕು.
೬. ಮುಖ್ಯಮಂತ್ರಿಗಳು ಆ.೨೫ರ ಸಭೆಯಲ್ಲಿ ಒಪ್ಪಿರುವಂತೆ ನ್ಯಾ.ಗುಹನಾಥನ್ ನರೇಂದರ್ ಸಮಿತಿಗೆ ಪರಿಸರ ತಜ್ಞರು, ಕೃಷಿ ತಜ್ಞರು, ಸಮಾಜ ವಿಜ್ಞಾನಿಗಳನ್ನು ಸೇರಿಸಬೇಕು.
೮. ಪ್ರತಿಭಟನಾ ಸ್ಥಳದಲ್ಲಿ ಅಳವಡಿಸಿದ್ದ ಶಾಮಿಯಾನ ಮತ್ತು ಕುರ್ಚಿ ತೆರವುಗೊಳಿಸಿರುವ ಅಧಿಕಾರಿಗಳು, ಗೂಂಡಾಗಳ ವಿರುದ್ಧ ಕ್ರಮ ಜರುಗಿಸಬೇಕು.
ಪೊಟೋ೨೬ಸಿಪಿಟಿ೪:
ಚನ್ನಪಟ್ಟಣದ ಪೊಲೀಸ್ ಭವನದಲ್ಲಿ ರೈತರ ಜತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾತುಕತೆ ನಡೆಸಿದರು.