- ಶಾಸಕ ಕೆ.ಎಸ್.ಆನಂದ್ ಭರವಸೆ
ತಾಲೂಕಿನಲ್ಲಿ ನಿರಂತರವಾಗಿ ಬರಗಾಲ ಅನುಭವಿಸುತ್ತಿರುವ ಸಿಂಗಟಗೆರೆ ಮತ್ತು ಪಂಚನಹಳ್ಳಿ ಭಾಗಕ್ಕೆ ಕೆರೆ ತುಂಬಿಸುವ ಯೋಜನೆ ಮೂಲಕ ಶಾಶ್ವತ ಪರಿಹಾರಕ್ಕೆ ಯತ್ನಿಸಿದ್ದು ಮಲ್ಲಾಘಟ್ಟ ಕೆರೆಯಲ್ಲಿ 0.22ಟಿಎಂಸಿ ನೀರು ಸಂಗ್ರಹಿಸಿ ಅಲ್ಲಿಂದ ನೀರು ಹರಿಸುವುದಾಗಿ ಶಾಸಕ ಕೆ.ಎಸ್.ಆನಂದ್ ಭರವಸೆ ವ್ಯಕ್ತಪಡಿಸಿದರು.ಎಸ್.ಮಾದಾಪುರ ಗ್ರಾಮದಲ್ಲಿ ಶನಿವಾರ ಸಿಂಗಟಗೆರೆ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನಲ್ಲಿ ಮಾತನಾಡಿ ಜನರ ಬಳಿಗೇ ಸರ್ಕಾರ ತೆರಳಿ ಕುಂದು-ಕೊರತೆ ಆಲಿಸಿ ಪರಿಹಾರ ಒದಗಿಸುವುದು ಇದರ ಉದ್ದೇಶ. ಕ್ಷೇತ್ರದಲ್ಲಿ ಈ ಮೊದಲೇ ಶಾಸಕರ ನಡೆ ಪಂಚಾಯಿತಿ ಕಡೆ ಕಾರ್ಯಕ್ರಮ ರೂಪಿಸಿ 25 ಗ್ರಾಪಂ ವ್ಯಾಪ್ತಿಯಲ್ಲಿ ಹಲವಾರು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗಿತ್ತು. ಈಗ ಸರ್ಕಾರವೇ ಹೊಸ ಇಲಾಖೆ ಮತ್ತು ಆಂದೋಲನ ರೂಪಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿರುವುದು ಉತ್ತಮ ಪ್ರಯತ್ನ ಎಂದು ನುಡಿದರು.
ಸದ್ಯ ಭದ್ರಾ ಉಪಕಣಿವೆ ಯೋಜನೆ ಮೂಲಕ ಕೆರೆ ತುಂಬಿಸುವ ಯೋಜನೆಯಲ್ಲಿ 2ನೇ ಹಂತದಲ್ಲಿ ಮಲ್ಲಾಘಟ್ಟ ಕೆರೆಗೆ ನೀರು ಹರಿದರೆ ಈ ಭಾಗದ 36 ಕೆರೆಗಳಿಗೆ ನೀರು ಹರಿಯಲಿದೆ. ಇದರಿಂದ ಸಿಂಗಟಗೆರೆ ಮತ್ತು ಪಂಚನಹಳ್ಳಿ ಭಾಗಗಳು ಶಾಶ್ವತ ನೀರಾವರಿಗೆ ಒಳಪಡಲಿವೆ. ನನ್ನ ಅವಧಿಯಲ್ಲಿ ಜನಪರ ಕೆಲಸಗಳ ಮೂಲಕ ಇಡೀ ರಾಜ್ಯವೇ ಕಡೂರು ಕಡೆ ತಿರುಗಿ ನೋಡುವಂತೆ ಕ್ಷೇತ್ರ ರೂಪಿಸುವುದು ನನ್ನ ಗುರಿ ಎಂದು ನುಡಿದರು.ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ಪ್ರವೀಣ್, ಪಾರದರ್ಶಕ ಮತ್ತು ಜನಸ್ನೇಹಿ ಆಡಳಿತ ವ್ಯವಸ್ಥೆ ರೂಪಿಸುವ, ಸರ್ಕಾರದ ಯೋಜನೆ ಜನರಿಗೆ ಸುಲಭವಾಗಿ ತಲುಪುತ್ತಿವೆಯೇ ಎಂಬ ಬಗ್ಗೆ ಪರಿಶೀಲಿಸುವ ವೇದಿಕೆಯೂ ಇದಾಗಿದೆ. ಇಂತಹ ಆಂದೋಲನಗಳ ಪ್ರಯೋಜನ ಪಡೆಯಬೇಕೆಂದು ಸಲಹೆ ನೀಡಿದರು. ಇಂದಿರಾ ಕ್ಯಾಂಟೀನ್ ಉಸ್ತುವಾರಿ ಸಮಿತಿ ರಾಜ್ಯ ಅಧ್ಯಕ್ಷ ಪಂಚನಹಳ್ಳಿ ಪ್ರಸನ್ನ ಮಾತನಾಡಿ ಜನರ ಹಿತಕ್ಕೆ ಸರ್ಕಾರ 3 ತಿಂಗಳ ಹಿಂದೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಅದಕ್ಕೂ ಮೊದಲು ನಮ್ಮ ಶಾಸಕರು ಇದೇ ಮಾದರಿ ಕಾರ್ಯಕ್ರಮ ರೂಪಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮುಂದಾಗಿದ್ದರು ಎಂದರು. ರಂಗಾಪುರ, ಸಿದ್ರಾಮನಹಳ್ಳಿ, ಎಸ್.ಮಾದಾಪುರ, ನಾರಾಯಣಪುರ ಮೊದಲಾದ ಗ್ರಾಮಗಳ ಜನರು ತಮ್ಮ ಅಹವಾಲು ಸಲ್ಲಿಸಿ ಗ್ರಾಮಗಳಲ್ಲಿ ಇ-ಸ್ವತ್ತು ಸಮಸ್ಯೆ ಇದೆ. ಸಮರ್ಪಕ ಕುಡಿವ ನೀರು, ರಸ್ತೆಗಳ ನಿರ್ಮಾಣ,1979ರಲ್ಲಿ ಸಾಗುವಳಿ ಚೀಟಿ ಕೊಟ್ಟರೂ ಈವರೆಗೆ ಖಾತೆ ಪಹಣಿ ಆಗಿಲ್ಲದವರಿಗೆ ಕಾಯಂ ಸಾಗುವಳಿ ಚೀಟಿ, ಜಮೀನು ದುರಸ್ತು, ಜಮೀನಿಗೆ ಖಾತೆ ಮಾಡಿಕೊಡಿ ಮೊದಲಾದ ವಿಷಯ ಪ್ರಸ್ತಾಪಿಸಿದರು. ಸಿದ್ರಾಮನಹಳ್ಳಿಯಲ್ಲಿ 138 ಮನೆಗಳಲ್ಲಿ ಕೇವಲ 25 ಮನೆಗಳಿಗೆ ಇ-ಸ್ವತ್ತು ಬರುತ್ತಿದೆ. ಉಳಿದವುಗಳಿಗೆ ಯಾವಾಗ ಕೊಡು ತ್ತೀರಿ ಎಂಬ ಪ್ರಶ್ನೆಗೆ ಇನ್ನುಳಿದ ಮನೆಗಳು ಗ್ರಾಮಠಾಣಾ ವ್ಯಾಪ್ತಿಯಲ್ಲಿದ್ದು ನವೆಂಬರ್‌ನಲ್ಲಿ ಆಂದೋಲನದ ಮೂಲಕ ಇ-ಸ್ವತ್ತು ವಿತರಿಸಲಾಗುವುದು ಎಂದು ಇ.ಒ ಪ್ರವೀಣ್ ತಿಳಿಸಿದರು.ಕಾಯಂ ಸಾಗುವಳಿ ಚೀಟಿ ಕೊಡಲು ಮೂಲ ಮಂಜೂರಾತಿ ಪತ್ರದ ಅಗತ್ಯವಿದೆ. ಅದು ಲಭ್ಯವಿದ್ದರೆ ಅನುಮೋದನೆಗೆ ಉಪವಿಭಾಗಾಧಿಕಾರಿಗೆ ಕಳುಹಿಸಲಾಗುವುದು. ಜಮೀನು ದುರಸ್ತು ಮಾಡಿಸುವ ವಿಷಯವಾಗಿ ಕಮಿಟಿ ಮುಂದೆ ಅರ್ಜಿ ಬಾಕಿ ಇದೆ ಎಂದು ತಹಸೀಲ್ದಾರ್ ಪೂರ್ಣಿಮಾ ತಿಳಿಸಿದರು. ಆಂದೋಲನದಲ್ಲಿ 90ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ವೇದಿಕೆಯಲ್ಲಿ ಸಿಡಿಪಿಒ ದೇವರಾಜ್, ತಾ.ಪಂ ಆಡಳಿತಾಧಿಕಾರಿ ಕಲ್ಲೇಶ್, ಗ್ಯಾರಂಟಿ ಸಮಿತಿ ಆಬಿದ್ ಪಾಷಾ ಇದ್ದರು. ಕಂದಾಯಾಧಿಕಾರಿ ರವಿ, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. " ಗ್ರಾಮದ ಕೆರೆಯಲ್ಲಿ ಜನರು ಅನಧಿಕೃತವಾಗಿ ತಿಪ್ಪೆ ಹಾಕಿರುವುದು ಗ್ರಾಮದ ಸೌಂದರ್ಯಕ್ಕೆ ಧಕ್ಕೆ ತರುತ್ತಿದೆ. ಗ್ರಾಮದ ಚರಂಡಿ ನೀರನ್ನು ಕೆರೆಗೆ ಹರಿಸುವುದು ಅನೈರ್ಮಲ್ಯಕ್ಕೆ ಕಾರಣ. ಗ್ರಾಮಕ್ಕೆ ಪೂರೈಕೆ ಆಗುತ್ತಿರುವ ನೀರು ಕಲುಷಿತವಾಗಿದ್ದು. ಕೆರೆ ಸ್ವಚ್ಛಗೊಳಿಸಿ ವಾಕಿಂಗ್ ಪಾಥ್ ನಿರ್ಮಿಸಿ ಎಂದು ಮಧು ಎಂಬ ಯುವಕ ಕೋರಿದರು. ಕುಡಿವ ನೀರಿನ ವಿಷಯದಲ್ಲಿ ಗ್ರಾಮೀಣ ಕುಡಿವ ನೀರು ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಅಗತ್ಯವಿದ್ದರೆ ಅಲ್ಲಿ ಫಿಲ್ಟರ್ ಅಳವಡಿಸಲು ಕ್ರಮ ವಹಿಸುವಂತೆ ದು ತಿಳಿಸಿದರು.31ಕೆಡಿಆರ್ಕಡೂರು ತಾಲೂಕು ಎಸ್.ಮಾದಾಪುರ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಶನಿವಾರ ಪ್ರಜಾಸೇವೆ ಆಂದೋಲನ ವನ್ನು ಶಾಸಕ ಕೆ.ಎಸ್.ಆನಂದ್ಉದ್ಘಾಟಿಸಿದರು.ತಹಸೀಲ್ದಾರ್ ಪೂರ್ಣಿಮಾ,ಇಒ ಪ್ರವೀಣ್, ಕಲ್ಲೇಶ್ ಮತ್ತಿತರರು ಇದ್ದರು.