ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ವಾರ್ಡ್ ನಂ.43ರಲ್ಲಿ ನಗರಸೇವಕಿ ವಾಣಿ ಜೋಶಿ ಅವರು ಗಣೇಶೋತ್ಸವ ಮಂಡಳಿಗಳಿಗೆ ಹಿಂದೂ ಎಂದು ಬರೆಯಲಾದ ಕುರ್ಚಿಗಳನ್ನು ಮಂಗಳವಾರ ವಿತರಿಸಿ ಮಾತನಾಡಿದರು. ಬೆಳಗಾವಿಯ ಪ್ರತಿಭಾವಂತ ಯುವಕರು ಉದ್ಯೋಗಕ್ಕಾಗಿ ಬೆಂಗಳೂರು, ಪುಣೆ ಹಾಗೂ ಹೈದರಾಬಾದ್‌ಗೆ ತೆರಳುತ್ತಿದ್ದಾರೆ. ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸುವುದು ನಮ್ಮ ಗುರಿ. ಎರಡು ಸಾವಿರ ಜನರಿಗೆ ಉದ್ಯೋಗ ನೀಡುವ ಸಾಮರ್ಥ್ಯದ ಐಟಿ ಕಂಪನಿಯೊಂದಿಗೆ ಅಂತಿಮ ಹಂತದ ಚರ್ಚೆ ನಡೆದಿದೆ. ಕಂಪನಿ ಬೆಳಗಾವಿಗೆ ಬಂದರೆ ನಗರದ ಉದ್ಯೋಗ ಕ್ಷೇತ್ರಕ್ಕೆ ಹೊಸ ದಿಕ್ಕು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಮಾನ ಸಂಪರ್ಕ ಹೆಚ್ಚಿಸಲು ಒತ್ತಡಕೈಗಾರಿಕೆ ಹಾಗೂ ಐಟಿ ಕಂಪನಿಗಳನ್ನು ಬೆಳಗಾವಿಗೆ ಆಕರ್ಷಿಸಲು ಪ್ರಮುಖ ನಗರಗಳೊಂದಿಗೆ ನಿರಂತರ ವಿಮಾನ ಸಂಪರ್ಕ ಅಗತ್ಯ. ಉಡಾನ್-3 ಯೋಜನೆಯಡಿ ದೇಶದಲ್ಲೇ ಹೆಚ್ಚಿನ ವಿಮಾನ ಸಂಪರ್ಕ ಹೊಂದಿದ್ದ ನಗರವಾಗಿ ಬೆಳಗಾವಿ ಗುರುತಿಸಿಕೊಂಡಿದೆ. ಬಳಿಕ ಸ್ಥಗಿತಗೊಂಡಿರುವ ಕೆಲವು ಮಾರ್ಗಗಳನ್ನು ಪುನರಾರಂಭಿಸುವಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಒತ್ತಡ ತರಲಾಗುತ್ತಿದೆ ಎಂದರು.
ಯಳ್ಳೂರು ಕೋಟೆಗೆ ₹60 ಕೋಟಿ ಕೇಬಲ್ ಕಾರ್
ನಗರದಲ್ಲಿ ಧಾರ್ಮಿಕ, ನೈಸರ್ಗಿಕ ಹಾಗೂ ಐತಿಹಾಸಿಕ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ಆದರೆ, ಸಮರ್ಪಕ ಪ್ರಚಾರದ ಕೊರತೆಯಿದೆ. ವ್ಯಾಕ್ಸಿನ್ ಡಿಪೊದಲ್ಲಿ ನಾಲ್ಕು ಪ್ರಮುಖ ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ನವೆಂಬರ್‌ನಲ್ಲಿ ಉದ್ಘಾಟಿಸುವ ಉದ್ದೇಶವಿದೆ. ನಗರದ ನಿರಂತರ ಕುಡಿಯುವ ನೀರಿನ ಯೋಜನೆ ವಿಳಂಬವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಆಗಲೇ ಯೋಜನೆ ಅನುಷ್ಠಾನಗೊಂಡಿದ್ದರೆ 2016ರ ವೇಳೆಗೆ ಪೂರ್ಣಗೊಳ್ಳುತ್ತಿತ್ತು. ವಿಳಂಬದಿಂದಾಗಿ ಯೋಜನಾ ವೆಚ್ಚ ₹588 ಕೋಟಿಗೆ ಏರಿಕೆಯಾಗಿದೆ ಎಂದರು.
ಬಾಕ್ಸ:ಬ್ರಾಹ್ಮಣ ಸಮಾಜ ಟ್ರಸ್ಟ್ ಉಪಾಧ್ಯಕ್ಷ ಭರತ ದೇಶಪಾಂಡೆ, ಅರುಣಾ ನಾಯಕ, ಅರವಿಂದ ಹುನಗುಂದ, ಮಧು ಗುರವ, ಶೇಖರ ಇನಾಮದಾರ್ ಮಾತನಾಡಿದರು. ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ವಾರ್ಡ್ ನಿವಾಸಿಗಳು ಉಪಸ್ಥಿತರಿದ್ದರು.ಬಾಕ್ಸ್