ಮೂಲಭೂತ ಸೌಲಭ್ಯ ಒದಗಿಸಲು ಶ್ರಮ

KannadaprabhaNewsNetwork |  
Published : Mar 15, 2026, 03:15 AM IST
ತಾಳಿಕೋಟೆ 2 | Kannada Prabha

ಸಾರಾಂಶ

ಪಟ್ಟಣವು ದಿನದಿಂದ ದಿನಕ್ಕೆ ೪ ದಿಕ್ಕಿನಡೆಗೆ ಬೆಳೆಯುತ್ತ ಸಾಗಿದ್ದು, ಇಂತಹ ಪಟ್ಟಣಕ್ಕೆ ಅವಶ್ಯವಿರುವ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮುಂದಾಗಿದ್ದೇನೆ ಎಂದು ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಪಟ್ಟಣವು ದಿನದಿಂದ ದಿನಕ್ಕೆ ೪ ದಿಕ್ಕಿನಡೆಗೆ ಬೆಳೆಯುತ್ತ ಸಾಗಿದ್ದು, ಇಂತಹ ಪಟ್ಟಣಕ್ಕೆ ಅವಶ್ಯವಿರುವ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮುಂದಾಗಿದ್ದೇನೆ ಎಂದು ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದ ತಾಳಿಕೋಟೆ ಬಸ್ ಘಟಕದಲ್ಲಿ ₹೨.೫೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ವಸತಿ ಗೃಹಗಳ ಉದ್ಘಾಟನೆ ಹಾಗೂ ಮನೆಗಳ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣವು ಭೌಗೋಳಿ ಕ್ಷೇತ್ರವೂ ಇಂದು ವಾಣಿಜ್ಯವಾಗಿ ಬೆಳೆಯುತ್ತಿದೆ ಸುಮಾರು ೪ ಕಿಮೀ ಅಂತರದ ಮೀಣಜಗಿ ಕ್ರಾಸ್‌ನಲ್ಲಿ ವಾಣಿಜ್ಯ ಸಂಕೀರ್ಣಗಳು ನಿರ್ಮಾಣವಾಗುತ್ತಿವೆ. ಈ ಪಟ್ಟಣವು ನಾಲ್ಕು ದಿಕ್ಕಿನಲ್ಲಿಯೂ ಬೆಳೆಯುತ್ತಿದೆ. ಇಂತಹ ಐತಿಹಾಸಿಕ ನಗರಕ್ಕೆ ಅವಶ್ಯವಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಶ್ರಮಿಸುತ್ತಿದ್ದೇನೆ ಎಂದರು.ಇಂದು ಬಸ್ ಘಟಕದ ಸಿಬ್ಬಂದಿ ಬಳಕೆಗೆ ಹಸ್ತಾಂತರಿಸಲಾದ ಮನೆಗಳನ್ನು ನಿಮ್ಮ ಸ್ವಂತ ಮನೆಗಳಂತೆ ಉಪಯೋಗಿಸಬೇಕು. ಬಿಲ್ಡಿಂಗ್‌ನಲ್ಲಿ ಕೆಲವು ಕಡೆಗಳಲ್ಲಿ ಫಿನಸಿಂಗ್ ಆಗಬೇಕಿದೆ. ಅದನ್ನು ಸರಿಪಡಿಸಲು ಗುತ್ತಿಗೆದಾರನಿಗೆ ಸೂಚಿಸಿದ್ದೇನೆ. ವಾಷ್ ಮಸೀನ್ ಪೀಟಿಂಗ್ ಮಾಡಲು ಹೇಳಿದ್ದೇನೆ. ಹಿಂದಿನ ಹಿರಿಯರ ಶ್ರಮದಿಂದ ಮತ್ತು ಒಳ್ಳೆಯ ನಿರ್ಧಾರದಿಂದ ಈ ೧೦ ಏಕರೆ ಜಾಗ ಬಸ್ ಘಟಕಕ್ಕೆ ಸಿಕ್ಕಿದೆ. ೩ ಎಕರೆದಲ್ಲಿ ಮನೆ ಡಿಪೋ ನಿರ್ಮಾಣವಾಗಿದೆ. ಅವರ ಮುತುವರ್ಜಿಯಿಂದ ಜಾಗ ನೀಡಿದ್ದರಿಂದ ಬಸ್ ಘಟಕವನ್ನು ಸ್ಥಾಪಿಸಲು ಅಂದು ನನಗೆ ಅನುಕೂಲವಾಯಿತು. ಬಸ್ ಘಟಕ ಅಂದು ಬಹಳ ದೂರವಾಯಿತು ಅಂದಿದ್ದರು, ಇಂದು ಊರಿನ ನಡುವೆ ಬಂದು ನಿಂತಿದೆ. ಇಂತಹ ವಾಣಿಜ್ಯ ನಗರಿ ಬೆಳೆಯಲು ಎಲ್ಲರೂ ಸಹಕರಿಸಬೇಕು. ಗ್ಯಾರಂಟಿ ಯೊಜನೆಯಿಂದ ಕೆಎಸ್‌ಆರ್‌ಟಿ ಲಾಭದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.ಗ್ಯಾಸ್‌ನಲ್ಲಿ ರಾಜಕಾರಣ ಮಾಡಬೇಡಿ:

ಇರಾನ್-ಅಮೆರಿಕಾ ದೇಶಗಳ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ಕೆಲವು ಮೂಲಸೌಕರ್ಯಗಳಲ್ಲಿ ವ್ಯತ್ಯಾಸ ಆಗಬಹುದು. ಈ ಗ್ಯಾಸ್‌ನಲ್ಲಿ ಯಾರೂ ರಾಜಕಾರಣ ಮಾಡಬಾರದು, ಇದು ಸರಿಯಲ್ಲ. ನಮ್ಮೆಲ್ಲರಿಗೂ ದೇಶ ಮೊದಲು ನಂತರ ರಾಜಕೀಯ ಪಕ್ಷ ಅವರ ಕಷ್ಟದಲ್ಲಿ ಸಹಾನುಭೂತಿ ತೋರಿಸುವುದು ನಮ್ಮ ಗುಣ. ಯಾವುದೇ ಪಕ್ಷ ಅಧಿಕಾರದಲ್ಲಿರಲಿ ದೇಶಕ್ಕೆ ಅಂಟಿಕೊಂಡು ರಾಜಕಾರಣ ಮಾಡಬಾರದು. ಇಂತಹ ಸಂದರ್ಭದಲ್ಲಿ ಸಹಕರಿಸುವ ಗುಣವೆಂಬುವುದು ಬರಬೇಕು ಎಂದರು.ವಿಭಾಗೀಯ ನಿಯಂತ್ರಾಣಾಧಿಕಾರಿ ನಾರಾಯಣಪ್ಪ ಕುರುಬರ ಮಾತನಾಡಿ, ₹೨.೫೦ ಕೋಟಿಯಲ್ಲಿ ೧೪ ಮನೆಗಳು ನಿರ್ಮಾಣಗೊಂಡಿವೆ. ಸಿನಿಯಾರಿಟಿಯ ಮೇಲೆ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಲಾಭದಾಯಕ ಬಸ್ ಘಟಕ ತಾಳಿಕೋಟೆ ಬಸ್ ಘಟಕವಾಗಿದೆ. ಅತೀ ಹೆಚ್ಚು ಆದಾಯ ಬರುವುದು ಇಲ್ಲಿಂದ. ಇಂಧನ ಉಳಿತಾಯದಲ್ಲಿಯೂ ಜಿಲ್ಲೆಯೂ ಪ್ರಥಮ ಸ್ಥಾನದಲ್ಲಿದೆ. ಗ್ಯಾರಂಟಿ ಯೋಜನೆಯಿಂದ ಕೆಎಸ್‌ಆರ್‌ಟಿಸಿ ಇಂದು ಅತಿ ಹೆಚ್ಚು ಲಾಭದಲ್ಲಿ ಮುನ್ನಡೆದಿದೆ. ಬೇಡಿಕೆಗನುಗುಣವಾಗಿ ಬಸ್‌ಗಳ ಸಂಖ್ಯೆಯೂ ಹೆಚ್ಚ ಬೇಕು. ಗ್ಯಾರಂಟಿ ಸಮಿತಿಯ ಅಧ್ಯಕ್ಷರುಗಳು, ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ ಹೆಚ್ಚುವರಿ ಬಸ್‌ಗಳನ್ನು ಮಂಜೂರಿ ಮಾಡಿಸಿದ್ದಾರೆ. ಶಾಸಕ ನಾಡಗೌಡರ ಸಹಕಾರದಿಂದ ಬಸ್ ಘಟಕದಲ್ಲಿ ಉತ್ತಮ ಮನೆಗಳು ನಿರ್ಮಾಣವಾಗುವುದರೊಂದಿಗೆ ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದರು.ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ಸಮಯದಲ್ಲಿ ವಸತಿ ಗೃಹಗಳಿಗೆ ಆಯ್ಕೆಯಾದವ ಬಸ್ ಘಟಕ ಸಿಬ್ಬಂದಿಗೆ ಮನೆಗಳ ಪ್ರಮಾಣ ಪತ್ರ ವಿತರಿಸಲಾಯಿತು.ವೇದಿಕೆಯ ಮೇಲೆ ತಾಲೂಕು ತಹಸೀಲ್ದಾರ್‌ ಡಾ.ವಿನಯಾ ಹೂಗಾರ, ವಿಭಾಗಿಯ ಸಾರಿಗೆ ಅಧಿಕಾರಿ ಎಂ.ಎಸ್.ಹಿರೇಮಠ, ಸಂಗಮೇಶ ದೇಸಾಯಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚನ್ನಯ್ಯ ಭೋರಯ್ಯ, ಕಾಕ ಕೇಕ ಕಲಬುರ್ಗಿಯ ಮೈಹಿಪಾಲ ಬೇಗಾರ, ಗುತ್ತಿಗೆದಾರ ಅಮಾನ ಮುನಶಿ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಿರಾದಾರ, ಬಸ್ ಘಟಕ ವ್ಯವಸ್ಥಾಪಕ ಪಿ.ಕೆ.ಜಾಧವ ಮೊದಲಾದವರು ಉಪಸ್ಥಿತರಿದ್ದರು. ಈರಣ್ಣ ತೊಂಡಿಕಟ್ಟಿ ನಿರೂಪಿಸಿದರು.ಯಾವುದೇ ಕಚೇರಿ ಮಾಡಿದರೂ ಊರಿಂದ ದೂರವೆಂಬುವುದನ್ನು ಮರೆತುಬಿಡಿ. ಬೆಳೆಯುತ್ತಿರುವ ನಗರಕ್ಕೆ ತಡೆಯಲು ಯಾರಿಂದಲೂ ಆಗದು ತಹಸೀಲ್ದಾರ್‌ ಕಚೇರಿಯಲ್ಲಿ ನಿತ್ಯ ಕೆಲಸ ಯಾರದ್ದೂ ಇರುವುದಿಲ್ಲ. ಇಂದು ಆನ್‌ಲೈನ್‌ ಯುಗದಲ್ಲಿ ಎಲ್ಲವೂ ಪಡೆದುಕೊಳ್ಳುತ್ತಿದ್ದಾರೆ. ಒಳ್ಳೆಯ ಕಾರ್ಯಗಳು ನಡೆಯುತ್ತಿರುವಾಗ ಊರಿನ ಜನರು ಸಹಕರಿಸಬೇಕೆಂದು ಪ್ರಜಾಸೌಧ ನಿರ್ಮಾಣವಾದರೇ ಎಲ್ಲ ಕಚೇರಿಗಳು ಒಂದೇ ಸೂರಿನಡಿ ಲಭ್ಯವಾಗಲಿವೆ.

-ಸಿ.ಎಸ್.ನಾಡಗೌಡ(ಅಪ್ಪಾಜಿ),

ಶಾಸಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ