- ಕೆರೆಕಟ್ಟೆಯಲ್ಲಿ ಆನೆ ದಾಳಿ ಘಟನಾ ಸ್ಥಳದಲ್ಲಿ ಭೇಟಿ ನೀಡಿ ಶಾಸಕ ರಾಜೇಗೌಡ
ಕನ್ನಡಪ್ರಭ ವಾರ್ತೆ, ಶೃಂಗೇರಿಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಜನರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಕೆರೆಕಟ್ಟೆಯಲ್ಲಿ ಆನೆ ದಾಳಿ ಘಟನಾ ಸ್ಥಳದಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾದಾಗ ಅರಣ್ಯ ಇಲಾಖೆ ಏನೆಲ್ಲ ಭರವಸೆ ನೀಡಿತು. ಬಹುತೇಕ ಜನರು ಪುನರ್ ವಸತಿ ಪರಿಹಾರ ಪ್ಯಾಕೇಜ್ ಸೇರಿದಂತೆ ಶಾಶ್ವತ ಪರಿಹಾರ ಅಪೇಕ್ಷಿಸಿದ್ದರು.ಸ್ಥಳಾಂತರ ಮಾಡುವ ಯೋಜನೆಯಿತ್ತು. ಆದರೆ ಒಬ್ಬರನ್ನು ಇಲ್ಲಿಂದ ಸ್ಥಳಾಂತರ ಮಾಡಿರಲಿಲ್ಲ. ಸ್ಥಳಾಂತರಕ್ಕೆ ಒತ್ತು ನೀಡಿದಾಗ ಕಾನೂನು ಬಾಹೀರ ಚಟುವಟಿಕೆಗಳು ನಡೆಯಲು ಒತ್ತು ಕೊಟ್ಟು ಆಗ ಬಾರದ ಘಟನೆ, ಅನಾಹುತಗಳು ನಡೆಯಿತು. ಅವೆಲ್ಲ ನಮ್ಮ ಕಣ್ಮುಂದೆ ಇದೆ. ಈಗ ಅವರೆಲ್ಲರೂ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸುತ್ತದೆ ಎಂದು ಶರಣಾಗತರಾಗಿದ್ದಾರೆ. ಸರ್ಕಾರ ಕೋಟಿಗಟ್ಟಲೆ ಹಣವು ಖರ್ಚು ಮಾಡಿದೆ.
ಈಗ ಶಾಶ್ವತವಾದ ಪರಿಹಾರ ಕಂಡುಹಿಡಿದು ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿ ಕೊಡುವ ಪ್ರಯತ್ನ ಮಾಡುತ್ತೇನೆ. ಪುನರ್ವಸತಿ ಪ್ಯಾಕೇಜ್, ಪರಿಹಾರವಿರಬಹುದು. ಪರಿಹಾರವನ್ನು ಕೇಂದ್ರ ಸರ್ಕಾರ, ಪುನರ್ವಸತಿಯನ್ನು ರಾಜ್ಯ ಸರ್ಕಾರ ನೀಡುತ್ತದೆ.ಕ್ಷೇತ್ರದಲ್ಲಿ ಆನೆ ಉಪಟಳದ ಬಗ್ಗೆ ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳೊಡನೆ ಚರ್ಚಿಸಿದ್ದೇನೆ. ಈಗಾಗಲೇ ಎನ್ ಆರ್ ಪುರ ತಾಲೂಕಿನಲ್ಲಿ 4 ಆನೆ ಗಳನ್ನು ಸೆರೆಹಿಡಿದು ಸ್ಥಳಾಂತರಿಸಲಾಗಿದೆ. ಈ ಭಾಗದಲ್ಲಿನ ಆನೆ ಸೆರೆ ಹಿಡಿಯಲು ಈಗಾಗಲೇ ಸೂಚಿಸಲಾಗಿದೆ. ಬೆಳಿಗ್ಗೆಯಿಂದಲೇ ಆನೆ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸೆರೆ ಹಿಡಿಯುವ ಯೋಜನೆ ರೂಪಿಸಲಾಗಿದೆ ಎಂದರು.
31 ಶ್ರೀ ಚಿತ್ರ 5-ಶೃಂಗೇರಿ ಕೆರೆಕಟ್ಟೆ ಬಳಿ ಆನೆ ದಾಳಿಯಿಂದ ಇಬ್ಬರು ಮೃತಪಟ್ಟ ಸ್ಥಳಕ್ಕೆಶಾಸಕ ಟಿ.ಡಿ.ರಾಜೇಗೌಡ ಭೇಟಿ ನೀಡಿ ಪರಿಶೀಲಿಸಿದರು.