ಮುಂದಿನ ಸಾಲಿನಲ್ಲಿ ಡೇರಿ ಉತ್ತಮ ಸಂಘ ಪ್ರಶಸ್ತಿ ಪಡೆಯಲು ಶ್ರಮ: ಎನ್.ರಾಜೇಗೌಡ

KannadaprabhaNewsNetwork |  
Published : Sep 21, 2026, 01:45 AM IST
20ಕೆಎಂಎನ್ ಡಿ12 | Kannada Prabha

ಸಾರಾಂಶ

ಕಳೆದ ಸಾಲಿನಲ್ಲಿ ಎನ್.ಕೋಡಿಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ 8 ಲಕ್ಷ ರು. ಲಾಭ ಬಂದಿತ್ತು. ಈ ವರ್ಷ 12 ಲಕ್ಷಕ್ಕೂ ಹೆಚ್ಚು ಲಾಭ ಬಂದಿದೆ. ಖರ್ಚು ಕಡಿಮೆ ಆದಷ್ಟು ಲಾಭ ಜಾಸ್ತಿಯಾಗುತ್ತದೆ. ಮುಂದಿನ 15 ದಿನಗಳಲ್ಲಿ ಉತ್ಪಾದಕರಿಗೆ ಬೋನಸ್ ನೀಡುವ ವ್ಯವಸ್ಥೆ ಮಾಡುತ್ತೇವೆ.

ಕನ್ನಡಪ್ರಭ ವಾರ್ತೆ ಹಲಗೂರು

ಮಳವಳ್ಳಿ ತಾಲೂಕಿನಲ್ಲೇ ಎನ್.ಕೋಡಿಹಳ್ಳಿ ಹಾಲು ಉತ್ಪಾದಕರ ಸಂಘವು ಮುಂದಿನ ಸಾಲಿನಲ್ಲಿ ಉತ್ತಮ ಸಂಘ ಎಂದು ಪ್ರಶಸ್ತಿ ಪಡೆಯಲು ನಮ್ಮ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಒಗ್ಗಟ್ಟಿನಿಂದ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಅಧ್ಯಕ್ಷ ಎನ್.ರಾಜೇಗೌಡ ತಿಳಿಸಿದರು.

ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಕಳೆದ ಸಾಲಿನಲ್ಲಿ ಸಂಘಕ್ಕೆ 8 ಲಕ್ಷ ರು. ಲಾಭ ಬಂದಿತ್ತು. ಈ ವರ್ಷ 12 ಲಕ್ಷಕ್ಕೂ ಹೆಚ್ಚು ಲಾಭ ಬಂದಿದೆ. ಖರ್ಚು ಕಡಿಮೆ ಆದಷ್ಟು ಲಾಭ ಜಾಸ್ತಿಯಾಗುತ್ತದೆ. ಮುಂದಿನ 15 ದಿನಗಳಲ್ಲಿ ಉತ್ಪಾದಕರಿಗೆ ಬೋನಸ್ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದೀರಿ. ನಿಮ್ಮ ವಿಶ್ವಾಸವನ್ನು ನಾನು ಉಳಿಸಿಕೊಳ್ಳುತ್ತೇನೆ. ಸಂಘದ ಅಭಿವೃದ್ಧಿಗೆ ಎಲ್ಲಾ ನಿರ್ದೇಶಕರು ಸಹಕಾರ, ಸಲಹೆ ಪಡೆದು ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸಿಬ್ಬಂದಿಗೆ ಸಿಗಬೇಕಾದ ಪಿಎಫ್ ಹಣ ಕೊಡಿಸಲಾಗುವುದು, ಸಂಘದಲ್ಲಿ 36 ಲಕ್ಷ ರು. ಇದ್ದು, ಅದನ್ನು ಎಂಡಿಸಿಸಿ. ಬ್ಯಾಂಕ್‌ನಲ್ಲಿ ಫಿಕ್ಸೆಡ್ ಮಾಡುವ ಯೋಜನೆ ರೂಪಿಸಿದ್ದೇವೆ ಎಂದರು.

ಡಾ.ಸದಾಶಿವ ಮಾತನಾಡಿ, ಹಸುಗಳನ್ನು ಬಿಸಿಲಿನಲ್ಲಿ ಕಟ್ಟದೆ ಉತ್ತಮ ಆಹಾರ ನೋಡಿಕೊಳ್ಳಬೇಕು. ಹಾಲು ಕರೆಯುವ, ಹುಲ್ಲು ಕತ್ತರಿಸುವ ಯಂತ್ರ ಮತ್ತು ಇತರೆ ಸಿಗುವ ಸೌವಲತ್ತುಗಳನ್ನು ಬಳಸಿಕೊಂಡು ಆರ್ಥಿಕ ಪ್ರಗತಿ ಕಾಣುವಂತೆ ಉತ್ಪಾದಕರಿಗೆ ಎಂದು ಕರೆ ನೀಡಿದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಎ.ಆರ್.ಸಿಂಚನ, ಕೆ.ಪಿ.ಕಾವ್ಯ, ಕೆ.ಆರ್.ದಿವ್ಯಶ್ರೀ, ಕೆ.ವಿನುತ, ಹೇಮಾವತಿ ಬಾಯಿ, ಡಾ.ಸದಾಶಿವ, ಎಂ.ಸಿ.ರಶ್ಮಿ ಮತ್ತು ಸಂಘದ ನಿರ್ದೇಶಕರನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ತಾಯಮ್ಮ, ನಿರ್ದೇಶಕರಾದ ಕೆ.ಮಂಜೇಗೌಡ, ಎಸ್.ಪ್ರಕಾಶ್, ಕೆ.ಸಿ.ಗೌಡ, ನಿಂಗೇಗೌಡ, ರುಕ್ಮಾಂಗದಾಚಾರಿ, ಸಣ್ಣೇಗೌಡ, ಗೋವಿಂದರಾಜು, ಕೆಂಪಮ್ಮ, ರಶ್ಮಿ, ಮುಖ್ಯ ಕಾರ್ಯನಿರ್ವಾಹಕ ಪ್ರಕಾಶ್, ನಂಜುಂಡೇಗೌಡ, ಪೂರ್ಣಿಮಾ, ರವೀಶ, ಮಳವಳ್ಳಿ ವಿಸ್ತರಣಾಧಿಕಾರಿ ಎಂ.ಸಿ.ರಶ್ಮಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಸರ್ಕಾರ ರೈತರಿಗೆ ಪರಿಹಾರ ಬಿಡುಗಡೆ ಮಾಡಲಿ’
10000 ಎಂಎಎಚ್‌ ಬ್ಯಾಟರಿಯ ರೆಡ್‌ಮಿ 17 ಬಿಡುಗಡೆ